Last Updated:
ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಒಂದು ದೊಡ್ಡ ಅನಾಹುತ ಸ್ವಲ್ಪದರಲ್ಲೇ ತಪ್ಪಿತು. ಪಾಕಿಸ್ತಾನದ ಅಂಪೈರ್ ಗಂಭೀರ ಗಾಯದಿಂದ ಪಾರಾಗಿದ್ದಾರೆ.
ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವಿನ ಮೊದಲ ಟೆಸ್ಟ್ (Test) ಪಂದ್ಯ ಆಗಸ್ಟ್ 15ರಂದು ಆರಂಭವಾಯಿತು. ಆಟದ ಮೂರನೇ ದಿನ ಆಗಸ್ಟ್ 17ರಂದು ಟೀಮ್ ಇಂಡಿಯಾ ಬೌಲರ್ಗಳು ಶ್ರೀಲಂಕಾವನ್ನು 284 ರನ್ಗಳಿಗೆ ಕಟ್ಟಿಹಾಕಿದರು. ಅದೇ ದಿನ ದೊಡ್ಡ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಪಾಕಿಸ್ತಾನ(Pakistan)ದ ಅಂಪೈರ್ (Umpire) ಗಂಭೀರ ಗಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.














