IND vs ENG: ರೂಟ್ ಅಜೇಯ 99!​​ 2ನೇ ಪಂದ್ಯದಲ್ಲಿ ಭಾರತವನ್ನ ಮಣಿಸಿ ಸರಣಿ ಸಮಬಲ ಸಾಧಿಸಿದ ಇಂಗ್ಲೆಂಡ್​ | ಕ್ರೀಡಾ ಸುದ್ದಿ | ACTPnews

ಇಂಗ್ಲೆಂಡ್ ಗೆಲುವು ತಂದುಕೊಟ್ಟ ಜೋ ರೂಟ್


Last Updated:

2ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 44 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆಗಿತ್ತು. ಜೋ ರೂಟ್ ಸಿಡಿಸಿದ ಅಜೇಯ 99 ರನ್​ಗಳ ನೆರವಿನಿಂದ ಇಂಗ್ಲೆಂಡ್ ತಂಡ 4 ವಿಕೆಟ್​ಗಳ ರೋಚಕ ಜಯ ಸಾಧಿಸಿ ಸರಣಿ ಸಮಬಲ ಸಾಧಿಸಿತು.

ಇಂಗ್ಲೆಂಡ್ ಗೆಲುವು ತಂದುಕೊಟ್ಟ ಜೋ ರೂಟ್
ಇಂಗ್ಲೆಂಡ್ ಗೆಲುವು ತಂದುಕೊಟ್ಟ ಜೋ ರೂಟ್

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಗುರುವಾರ ಕಾರ್ಡಿಫ್‌ನಲ್ಲಿ ನಡೆದ ಪಂದ್ಯದಲ್ಲಿ, ಇಂಗ್ಲೆಂಡ್‌ನ ಸಾಮೂಹಿಕ ಪ್ರದರ್ಶನ ತೋರಿ ಭಾರತದ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು. ಅನುಭವಿ ಬ್ಯಾಟರ್​ ಜೋ ರೂಟ್ (133 ಎಸೆತಗಳಲ್ಲಿ ಅಜೇಯ 99, 9 ಬೌಂಡರಿ) ಅದ್ಭುತ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಭಾರತದ ಸೋಲಿಗೆ ಪ್ರಮುಖ ಕಾರಣರಾದರು.

ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 44 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆಗಿತ್ತು. ರನ್​ಮಷಿನ್​ ವಿರಾಟ್ ಕೊಹ್ಲಿ 66 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 65 ಮತ್ತು ಶ್ರೇಯಸ್ ಅಯ್ಯರ್ 71 ಎಸೆತಗಳಲ್ಲಿ 5 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳ ನೆರವಿನಿಂದ 66 ರನ್ ಗಳಿಸಿ ಟಾಪ್ ಸ್ಕೋರರ್ ಆದರು. ನಾಯಕ ಶುಭ್​ಮನ್ ಗಿಲ್ 30 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 31 ಮತ್ತು ಜಸ್ಪ್ರೀತ್ ಬುಮ್ರಾ 13 ಎಸೆತಗಳಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ಅಜೇಯ 20 ರನ್ ಗಳಿಸಿ ತಂಡ 200ರ ಗಡಿ ದಾಟಲು ನೆರವಾಗಿದ್ದರು. ರೋಹಿತ್ ಶರ್ಮಾ 47 ಎಸೆತಗಳಲ್ಲಿ 26 ರನ್​ಗಳಿಸಲಷ್ಟೆ ಶಕ್ತರಾದರೆ, ಇಶಾನ್ ಕಿಸನ್ (1), ಶಿವಂ ದುಬೆ(0) ವಾಷಿಂಗ್ಟನ್ ಸುಂದರ್ (2) ಹಾಗೂ ಅಕ್ಷರ್ ಪಟೇಲ್ (1) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.

ಇಂಗ್ಲಿಷ್ ಬೌಲರ್‌ಗಳಲ್ಲಿ, ಗಸ್ ಅಟ್ಕಿನ್ಸನ್ (3/50) ಮತ್ತು ಜೋಫ್ರಾ ಆರ್ಚರ್ (3/47) ತಲಾ ಮೂರು ವಿಕೆಟ್ ಪಡೆದರೆ, ಸಕಿಬ್ ಮಹಮೂದ್ (2/52) 2 ವಿಕೆಟ್ ಪಡೆದರು. ವಿಲ್ ಜ್ಯಾಕ್ಸ್ ಮತ್ತು ಸ್ಯಾಮ್ ಕರನ್ ತಲಾ ಒಂದು ವಿಕೆಟ್ ಪಡೆದರು.

ಗೆಲುವು ತಂದುಕೊಟ್ಟ ಜೋ ರೂಟ್

234 ರನ್​ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ 8 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಹಿನ್ನಡೆ ಅನುಭವಿಸಿತು. ಬೆನ್ ಡಕೆಟ್ (0) ಬುಮ್ರಾಗೆ ವಿಕೆಟ್ ಒಪ್ಪಿಸಿದರೆ ಹಾಗೂ ಜೇಕಬ್ ಬೆಥೆಲ್ ಪ್ರಸಿದ್ಧ್ ಕೃಷ್ಣ ಬೌಲಿಂಗ್​​ನಲ್ಲಿ ಕೇವಲ 4 ರನ್​ಗಳಿಸಿ ಔಟ್ ಆದರು. ಆ ನಂತರ ಬಂದ ನಾಯಕ ಬ್ರೂಕ್ (16) ಕೂಡ ಹೆಚ್ಚು ಸಮಯ ನಿಲ್ಲಲಿಲ್ಲ. ಇಂಗ್ಲೆಂಡ್ ನಾಯಕನನ್ನ ಬ್ರಾರ್ ಎಲ್​ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಈ ಹಂತದಲ್ಲಿ ಒಂದಾದ ರೂಟ್ ಹಾಗೂ ಸ್ಯಾಮ್ ಕರನ್ (26)​ 4ನೇ ವಿಕೆಟ್ ಜೊತೆಯಾಟದಲ್ಲಿ 41 ರನ್​ ಸೇರಿಸಿದರು. ಕರ್ರನ್​ 31 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 26 ರನ್​ಗಳಿಸಿ ದುಬೆಗೆ ವಿಕೆಟ್ ಒಪ್ಪಿಸಿದರು.

ವಿಲ್ ಜಾಕ್ಸ್-ರೂಟ್ ಗೆಲುವಿನ್ ಜೊತೆಯಾಟ

ನಂತರ ಬಂದ ಅನುಭವಿ ಬ್ಯಾಟರ್ ಜೋಸ್ ಬಟ್ಲರ್ 18 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ 17 ರನ್​ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್​​ನಲ್ಲಿ ಬೌಲ್ಡ್ ಆದರು. ಈ ಹಂತದಲ್ಲಿ ಪಂದ್ಯ ಭಾರತದ ಕಡೆಗೆ ತಿರುಗುವ ಅವಕಾಶವಿತ್ತು. ಆದರೆ 7ನೇ ಕ್ರಮಾಂಕದಲ್ಲಿ ಬಂದ ವಿಲ್ ಜಾಕ್ಸ್​ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದರು. ರೂಟ್ ಜೊತೆ ಸೇರಿ 7ನೇ ವಿಕೆಟ್​​ಗೆ 72 ರನ್​ಗಳ ಜೊತೆಯಾಟ ನೀಡಿ ಪಂದ್ಯವನ್ನ ಸಂಪೂರ್ಣ ಇಂಗ್ಲೆಂಡ್ ಕಡೆಗೆ ವಾಲಿಸಿದರು. ಜಾಕ್ಸ 44 ಎಸೆತಗಳಲ್ಲಿ 2 ಬೌಂಡರಿ ಸಹಿತ 30 ರನ್​ಗಳಿಸಿ ಬ್ರಾರ್​ಗೆ ವಿಕೆಟ್ ಒಪ್ಪಿಸಿದರು.

ಭಾರತೀಯ ಬೌಲರ್‌ಗಳಲ್ಲಿ, ಗುರ್ನೂರ್ ಬ್ರಾರ್ ಎರಡು ವಿಕೆಟ್ (2/67), ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನ ವೈಫಲ್ಯವು ಟೀಮ್ ಇಂಡಿಯಾ ಪಂದ್ಯದ ಸೋಲಿಗೆ ಪ್ರಮುಖ ಕಾರಣವಾಯಿತು. 2ನೇ ಪಂದ್ಯದಲ್ಲಿ ಇಂಗ್ಲೆಂಡ್​ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯು ಈಗ 1-1 ರಲ್ಲಿ ಸಮಬಲ ಸಾಧಿಸಿದೆ. ಅಂತಿಮ ಏಕದಿನ ಪಂದ್ಯ ಭಾನುವಾರ ವಿಶ್ವಪ್ರಸಿದ್ಧ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed