IND vs ENG: 4ನೇ ಟಿ20ಯಲ್ಲೂ ಭಾರತಕ್ಕೆ ಹೀನಾಯ ಸೋಲು! ಇನ್ನೊಂದು ಪಂದ್ಯ ಇರುವಂತೆ ಸರಣಿ ವಶಪಡಿಸಿಕೊಂಡ ಇಂಗ್ಲೆಂಡ್ | ಕ್ರೀಡಾ ಸುದ್ದಿ | ACTPnews

ಭಾರತ ತಂಡಕ್ಕೆ ಸೋಲು


Last Updated:

ಸರಣಿ ಸೋಲು ತಪ್ಪಿಸಿಕೊಳ್ಳಲು ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 158 ರನ್​ಗಳ ಸಾಧಾರಣ ಮೊತ್ತ ದಾಖಲಿಸಿತ್ತು. 159 ರನ್​ಗಳ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೇವಲ 13.5 ಓವರ್​ಗಳಲ್ಲಿ 1 ವಿಕೆಟ್ ಕಳೆದಿಕೊಂಡು ಗುರಿ ತಲುಪಿತು.

ಭಾರತ ತಂಡಕ್ಕೆ ಸೋಲು
ಭಾರತ ತಂಡಕ್ಕೆ ಸೋಲು

ಭಾರತ ತಂಡ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿ ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ 9 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಐದು ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 158 ರನ್​ಗಳ ಸಾಧಾರಣ ಮೊತ್ತ ದಾಖಲಿಸಿತ್ತು. 159 ರನ್​ಗಳ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೇವಲ 13.5 ಓವರ್​ಗಳಲ್ಲಿ 1 ವಿಕೆಟ್ ಕಳೆದಿಕೊಂಡು ಗುರಿ ತಲುಪಿತು. ಈ ಮೂಲಕ ಟಿ20 ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ವಿರುದ್ಧ ಟಿ20 ಸರಣಿ ಗೆದ್ದ ಸಾಧನೆ ಮಾಡಿತು.

13.5 ಓವರ್​​ಗಳಲ್ಲೇ ಚೇಸಿಂಗ್ ಮುಕ್ತಾಯ

ಭಾರತ ನೀಡಿದ್ದ 149 ರನ್​ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೇವಲ 13.5 ಓವರ್​ಗಳಲ್ಲೇ ಮುಗಿಸಿತು. ಆರಂಭಿಕ ಬ್ಯಾಟರ್ ಜೋಶ್ ಬಟ್ಲರ್ (8 ಎಸೆತಗಳಲ್ಲಿ 8) ಬೇಗ ಕಳೆದುಕೊಂಡಿತು. ಆದರೆ ಹ್ಯಾರಿ ಬ್ರೂಕ್ ಹಾಗೂ ಫಿಲ್ ಸಾಲ್ಟ್ 2ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 70 ಎಸೆತಗಳಲ್ಲಿ 146 ರನ್​ಗಳ ಮುರಿಯದ ಜೊತೆಯಾಟ ನಡೆಸಿ ತಂಡವನ್ನ ಗೆಲುವಿನ ಗಡಿದಾಟಿಸಿದರು. ಈ ಮೂಲಕ ಭಾರತದ ವಿರುದ್ಧ ಐತಿಹಾಸಿಕ ಸರಣಿ ಜಯಕ್ಕೆ ಕಾರಣರಾದರು.

ಮತ್ತೆ ಕೈಕೊಟ್ಟ ತ್ರಿಮೂರ್ತಿಗಳು

ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ವೈಭವ್ ಸೂರ್ಯವಂಶಿ (10 ಎಸೆತಗಳಲ್ಲಿ 15 ರನ್) ಇಂದೂ ಕೂಡ ಅಗ್ಗವಾಗಿ ಪೆವಿಲಿಯನ್ ಗೆ ಸೇರಿಕೊಂಡರು. ಅವರು ಮೂರನೇ ಓವರ್ ನಲ್ಲಿ ಜೋಫ್ರಾ ಆರ್ಚರ್ ಬೌಲಿಂಗ್​​ನಲ್ಲಿ ಶಾರ್ಟ್ ಪಿಚ್ ಎಸೆತಕ್ಕೆ ಮತ್ತೊಮ್ಮೆ ಬಲಿಯಾದರು. ಸೂರ್ಯವಂಶಿ ಬೆನ್ನಲ್ಲೇ ಇಶಾನ್ ಕಿಶನ್ (6 ಎಸೆತಗಳಲ್ಲಿ 4) ಐದನೇ ಓವರ್ ನಲ್ಲಿ ಜೋಶ್ ಟಂಗ್​ಗೆ ವಿಕೆಟ್ ಒಪ್ಪಿಸಿದರು. ಏಳನೇ ಓವರ್ ನಲ್ಲಿ ಅಭಿಷೇಕ್ (14 ಎಸೆತಗಳಲ್ಲಿ 16) ಕೂಡ ಪೆವಿಲಿಯನ್ ಸೇರಿಕೊಂಡರು. ಅವರು ಸ್ಪಿನ್ನರ್ ಆದಿಲ್ ರಶೀದ್ಗೆ ಕ್ಯಾಚ್ ಮತ್ತು ಬೌಲ್ಡ್ ಆದರು.

ಚೇತರಿಕೆ ನೀಡಿದರೂ ಪರದಾಡಿದ ದುಬೆ

ನಂತರ ಬಂದ ಶಿವಂ ದುಬೆ ಅವರೊಂದಿಗೆ ನಾಲ್ಕನೇ ವಿಕೆಟ್ ಗೆ 53 ರನ್ ಗಳ ಜೊತೆಯಾಟ ಹಂಚಿಕೊಂಡ ಶ್ರೇಯಸ್ ಭಾರತವನ್ನು 100 ದಾಟಿಸಿದರು. ದುಬೆ 23 ಎಸೆತಗಳಲ್ಲಿ 2 ಬೌಂಡರಿಗಳನ್ನು ಒಳಗೊಂಡಂತೆ ಕೇವಲ 22 ರನ್ ಸೇರಿಸಿ ಔಟ್ ಆದರು.ಅವರು 14ನೇ ಓವರ್ ನಲ್ಲಿ ವಿಲ್ ಜಾಕ್ಸ್ ಬೌಲಿಂಗ್​​ನಲ್ಲಿ ಕ್ಯಾಚ್ ಔಟ್ ಆದರು. ನಂತರ ಬಂದ ತಿಲಕ್ ವರ್ಮ (8 ಎಸೆತಗಳಲ್ಲಿ 11) ಟಂಗ್​​ಗೆ ವಿಕೆಟ್ ಒಪ್ಪಿಸಿದರೆ, 20ನೇ ಓವರ್ ನಲ್ಲಿ ವಾಷಿಂಗ್ಟನ್ ಸುಂದರ್ (8 ಎಸೆತಗಳಲ್ಲಿ 5) ಆರ್ಚರ್​ಗೆ ವಿಕೆಟ್ ಒಪ್ಪಿಸಿದರು.

ಶ್ರೇಯಸ್ ಏಕಾಂಗಿ ಹೋರಾಟ

ಈ ಇನ್ನಿಂಗ್ಸ್​​ನಲ್ಲಿ ಶ್ರೇಯಸ್ ಅಯ್ಯರ್ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟರ್​ಗಳು ರನ್​ಗಳಿಸಲು ಪರದಾಡಿದರು. ಒಂದುಷ್ಟು ಮಂದಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ನಾಯಕನ ಆಟವಾಡಿದ ಶ್ರೇಯಸ್ ಅಯ್ಯರ್ 49 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಗಳ ನೆರವಿನಿಂದ ಅಜೇಯ 80 ರನ್ ಗಳಿಸಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು.

ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 20ಕ್ಕೆ2, ಜೋಶ್ ಟಂಗ್ 36ಕ್ಕೆ2, ವಿಲ್ ಜಾಕ್ಸ್ 28ಕ್ಕೆ1, ಆದಿಲ್ ರಶೀದ್ 49ಕ್ಕೆ1 ವಿಕೆಟ್ ಪಡೆದು ಮಿಂಚಿದರು.

ಆಂಗ್ಲರಿಗೆ ಮೊದಲ ಸರಣಿ ಜಯ

2 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ದ್ವಿಪಕ್ಷೀಯ (Bilateral) ಟಿ20 ಸರಣಿಯಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್‌ಗೆ ಇದೇ ಚೊಚ್ಚಲ ಸರಣಿ ಜಯವಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಭಾರತದ ವಿರುದ್ಧ ಸರಣಿ ಗೆದ್ದಿದ್ದರೂ, ಅವು ಕೇವಲ 1 ಪಂದ್ಯದ ಸರಣಿಗಳಾಗಿದ್ದವು. ಕನಿಷ್ಠ 2 ಪಂದ್ಯಗಳಿದ್ದ ಸರಣಿಗಳ ಇತಿಹಾಸವನ್ನು ಗಮನಿಸಿದರೆ ಇಂಗ್ಲೆಂಡ್‌ಗೆ ಇದು ಐತಿಹಾಸಿಕ  ಗೆಲುವಾಗಿದೆ. ಇನ್ನು ಕಳೆದ 5 ಟಿ20 ಸರಣಿಗಳಲ್ಲಿ ಭಾರತವೇ ಗೆಲುವು ಸಾಧಿಸಿತ್ತು. ಬರೋಬ್ಬರಿ 12 ವರ್ಷಗಳ ಬಳಿಕ ಇಂಗ್ಲೆಂಡ್ ಭಾರತ ತಂಡದ ವಿರುದ್ಧ ಸರಣಿ ಗೆಲುವು ಸಾಧಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed