Last Updated:
ಅನುಭವಿ ಆಟಗಾರ ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ.. ಸಂಜು ಸ್ಯಾಮ್ಸನ್ ಕಳಪೆ ಫಾರ್ಮ್ನಲ್ಲಿದ್ದ ಕಾರಣ ಅವರನ್ನ ಹೊರಗಿಡಬೇಕೆಂಬ ಕೂಗು ಕೇಳಿಬರುತ್ತಿದ್ದ ಕಾರಣ ಅವರಿಗೆ ವೈಭವ್ಗೆ ಮೊದಲ ಚಾನ್ಸ್ ನೀಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ (T20 Series) ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಚ್ಚರಿ ಬದಲಾವಣೆ ಮಾಡಿಕೊಂಡಿದೆ. ಅನುಭವಿ ಆಟಗಾರ ಸಂಜು ಸ್ಯಾಮ್ಸನ್ (Sanju Samson) ಬದಲಿಗೆ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಅವಕಾಶ ನೀಡಲಾಗಿದೆ. ಸಂಜು ಸ್ಯಾಮ್ಸನ್ ಕಳಪೆ ಫಾರ್ಮ್ನಲ್ಲಿದ್ದ ಕಾರಣ ಅವರನ್ನ ಹೊರಗಿಡಬೇಕೆಂಬ ಕೂಗು ಕೇಳಿಬರುತ್ತಿತ್ತು. ಇದೀಗ ಮ್ಯಾನೇಜ್ಮೆಂಟ್ ಅಭಿಮಾನಿಗಳು, ಕ್ರಿಕೆಟ್ ವಿಶ್ಲೇಷಕರ ಒತ್ತಾಯಕ್ಕೆ ಮಣಿದು ಅವಕಾಶ ನೀಡಿದೆ. ಟಾಸ್ ಸಂದರ್ಭದಲ್ಲಿ ವೈಭವ್ ಕೈಬಿಟ್ಟಿದ್ದಕ್ಕೆ ನಾಯಕ ಶ್ರೇಯಸ್ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ.
“ಈ ಪಂದ್ಯದಲ್ಲಿಯೂ ನಾವು ಮೊದಲು ಬ್ಯಾಟಿಂಗ್ ಮಾಡಲಿದ್ದೇವೆ. ನಮ್ಮ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದ್ದೇವೆ. ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಸೂರ್ಯವಂಶಿ ತಂಡಕ್ಕೆ ಬಂದಿದ್ದಾರೆ. ಕಳೆದ ಕೆಲವು ಸಮಯದಿಂದ ವೈಭವ್ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ನಮಗೆ ಈ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗಿರಲಿಲ್ಲ. ಅವರು ತಂಡದಲ್ಲಿ ಅವಕಾಶ ಪಡೆಯಲು ಸಂಪೂರ್ಣವಾಗಿ ಅರ್ಹರಾಗಿದ್ದಾರೆ ಎಂದು ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ವೈಭವ್ ಬ್ಯಾಟಿಂಗ್ ಮಾಡುವಾಗ ಒತ್ತಡವನ್ನ ತಮ್ಮ ಮೇಲೆ ಪರಿಣಾಮ ಬೀರಲು ಬಿಡುವುದಿಲ್ಲ. ಅವರು ತುಂಬಾ ಶಾಂತ ಸ್ವಭಾವವನ್ನು ಹೊಂದಿದ್ದಾರೆ. ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಮತ್ತು ಬೌಲರ್‌ಗಳನ್ನು ಎದುರಿಸುವ ರೀತಿ ಅವರು ಎಂತಹ ಆಟಗಾರ ಎಂಬುದರ ಬಗ್ಗೆ ಹೇಳುತ್ತದೆ. ಪ್ರಸ್ತುತ ತಂಡದೊಳಗೆ ತೀವ್ರ ಸ್ಪರ್ಧೆ ಇದೆ ಮತ್ತು ಪರಿಸ್ಥಿತಿ ಪಂದ್ಯದಿಂದ ಪಂದ್ಯಕ್ಕೆ ಬದಲಾಗುತ್ತದೆ. ಭಾರತದ ಈ ಯುವ ಪ್ರತಿಭೆಯನ್ನು ನೋಡಲು ತುಂಬಾ ಖುಷಿಯಾಗುತ್ತದೆ. ಈ ಸ್ಪರ್ಧೆಯು ಆಟಗಾರರಾಗಿ ನಮ್ಮನ್ನು ನಿರಂತರವಾಗಿ ಉತ್ತಮ ಪ್ರದರ್ಶನ ತೋರಲು ಉತ್ತೇಜಿಸುತ್ತದೆ. ನಾನು ಒತ್ತಡವನ್ನು ಒಂದು ಸವಲತ್ತು ಎಂದು ನೋಡುತ್ತೇನೆ ” ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಟಾಸ್‌ಗೆ ಮುನ್ನ, ವೈಭವ್ ಸೂರ್ಯವಂಶಿ ಉಪನಾಯಕ ತಿಲಕ್ ವರ್ಮಾ ಅವರಿಂದ ತಮ್ಮ ಚೊಚ್ಚಲ ಕ್ಯಾಪ್ ಪಡೆದರು. ವೈಭವ್ 15 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮೊದಲ ಭಾರತೀಯ ಆಟಗಾರರಾದರು. ಈ ಪ್ರಕ್ರಿಯೆಯಲ್ಲಿ ಸಚಿನ್ ತೆಂಡೂಲ್ಕರ್ ಆಲ್ ಟೈಮ್ ದಾಖಲೆಯನ್ನು ಮೀರಿಸಿದರು. ಇದಲ್ಲದೆ, ಅವರು T20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಿದರು.
ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
ಇಂಗ್ಲೆಂಡ್: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರ್ರಾನ್, ವಿಲ್ ಜಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಜೋಶ್ ಟಂಗ್.
IND vs ENG: 2ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೈಬಿಟ್ಟು ಸೂರ್ಯವಂಶಿಗೆ ಚಾನ್ಸ್ ಕೊಟ್ಟಿದ್ದೇಕೆ? ಕ್ಯಾಪ್ಟನ್ ಶ್ರೇಯಸ್ ಹೇಳಿದ್ದೇನು?













