IND vs ENG: ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಯ್ಯರ್! ಸಂಜುಗೆ ನೋ ಚಾನ್ಸ್, ಅರ್ಷದೀಪ್ ಔಟ್, ಪ್ಲೇಯಿಂಗ ಇಲೆವೆನ್​ನಲ್ಲಿ ಕನ್ನಡಿಗ | ಕ್ರೀಡಾ ಸುದ್ದಿ | ACTPnews

ಭಾರತ-ಇಂಗ್ಲೆಂಡ್ 4ನೇ ಟಿ20


Last Updated:

ಭಾರತ ಪ್ಲೇಯಿಂಗ್​​ ಇಲೆವೆನ್‌ನಲ್ಲಿ ಎರಡು ಬದಲಾವಣೆಗಳನ್ನು ಮಾಡಿಕೊಂಡಿದೆ. ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ಹೊರಗುಳಿದಿದ್ದು, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಕರ್ನಾಟಕ ವೇಗಿ ಪ್ರಸಿದ್ಧ್ ಕೃಷ್ಣ ಅವರಿಗೆ ಅವಕಾಶ ಸಿಕ್ಕಿದೆ.

ಭಾರತ-ಇಂಗ್ಲೆಂಡ್ 4ನೇ ಟಿ20
ಭಾರತ-ಇಂಗ್ಲೆಂಡ್ 4ನೇ ಟಿ20

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯ ಬ್ರಿಸ್ಟಲ್​​ನ ಕೌಂಟಿ ಮೈದಾನದಲ್ಲಿ ನಡೆಯಲಿದೆ. ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅಯ್ಯರ್ ಸತತ ಆರನೇ ಪಂದ್ಯದಲ್ಲಿ ಟಾಸ್ ಗೆದ್ದಿದ್ದಾರೆ. ಭಾರತ ಪ್ಲೇಯಿಂಗ್​​ ಇಲೆವೆನ್‌ನಲ್ಲಿ ಎರಡು ಬದಲಾವಣೆಗಳನ್ನು ಮಾಡಿಕೊಂಡಿದೆ. ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ಹೊರಗುಳಿದಿದ್ದು, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಕರ್ನಾಟಕ ವೇಗಿ ಪ್ರಸಿದ್ಧ್ ಕೃಷ್ಣ ಅವರಿಗೆ ಅವಕಾಶ ಸಿಕ್ಕಿದೆ. ಇಂಗ್ಲೆಂಡ್ ತಂಡದಲ್ಲಿ ರೆಹಾನ್ ಅಹ್ಮದ್ ಲಿಯಾಮ್ ಡಾಸನ್ ಬದಲಿಗೆ ತಂಡವನ್ನು ಸೇರಿಸಿಕೊಂಡರು. ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್ ತಂಡ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಒಂದು ಪಂದ್ಯವು ಮಳೆಯಿಂದ ರದ್ದಾಗಿತ್ತು.

ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ 125 ರನ್ ಗಳ ಐತಿಹಾಸಿಕ ಸೋಲುಣಿಸಿತ್ತು. ಗುರುವಾರ ನಡೆಯಲಿರುವ ಪಂದ್ಯ ಗೆದ್ದು ಸರಣಿ ಸೋಲು ತಪ್ಪಿಸಿಕೊಳ್ಳಲು ಭಾರತ ನೋಡುತ್ತಿದೆ. ಈ ಪಂದ್ಯದಲ್ಲಿ ಭಾರತ ಸೋತರೆ ಸರಣಿ ಸೋಲಲಿದೆ. ಸೂರ್ಯಕುಮಾರ್ ಯಾದವ್ ಬದಲಿಗೆ ಭಾರತದ ಚುಕ್ಕಾಣಿ ಹಿಡಿದ ಶ್ರೇಯಸ್ ತಮ್ಮ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್‌ನ ಕಾರ್ಯತಂತ್ರಗಳ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿರುವ ಈ ಸಮಯದಲ್ಲಿ ಭಾರತ ಈ ಪಂದ್ಯ ಗೆದ್ದು, ಮತ್ತೊಂದು ಸರಣಿ ಸೋಲುವ ಮುಜುಗರವನ್ನು ತಪ್ಪಿಸಲು ಬಯಸುತ್ತದೆ. ಐರ್ಲೆಂಡ್‌ನಲ್ಲಿ ಶ್ರೇಯಸ್ ಪಡೆ 0-2 ಅಂತರದಿಂದ ಸರಣಿ ಸೋಲನುಭವಿಸಿತು.

ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರ್ರನ್, ವಿಲ್ ಜಾಕ್ಸ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಜೋಶ್ ಟಂಗ್.

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಪ್ರಿನ್ಸ್ ಯಾದವ್, ಅರ್ಷ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs ENG: ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಯ್ಯರ್! ಸಂಜುಗೆ ನೋ ಚಾನ್ಸ್, ಅರ್ಷದೀಪ್ ಔಟ್, ಪ್ಲೇಯಿಂಗ ಇಲೆವೆನ್​ನಲ್ಲಿ ಕನ್ನಡಿಗ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed