IND vs AFG: ಅಭಿಷೇಕ್ ಶರ್ಮಾ ಬಿರುಗಾಳಿ ಶತಕ, ಸಂಜು ಫಿಫ್ಟಿ! ಅಫ್ಘಾನಿಸ್ತಾನಕ್ಕೆ 222 ರನ್‌ಗಳ ಬೃಹತ್ ಗುರಿ ನೀಡಿದ ಭಾರತ | ಕ್ರೀಡಾ ಸುದ್ದಿ | ACTPnews

ಅಭಿಷೇಕ್ ಶರ್ಮಾ


Last Updated:

ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ20ಯಲ್ಲಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ವಿಶ್ವ ದಾಖಲೆಯ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 221 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.

 ಅಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾ

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡವು ರನ್‌ಗಳ ಬೆಟ್ಟವನ್ನೇ ನಿಲ್ಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ವಿಶ್ವ ದಾಖಲೆಯ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 221 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.

ಟಾಸ್ ಸೋತರೂ ಸಿಕ್ಕಿತು ಬ್ಯಾಟಿಂಗ್

ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡದ ನಾಯಕ ಇಬ್ರಾಹಿಂ ಜದ್ರಾನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆದರೆ, ಈ ನಿರ್ಧಾರವನ್ನು ಭಾರತದ ಆರಂಭಿಕ ಜೋಡಿ ಸಂಪೂರ್ಣವಾಗಿ ತಲೆಕೆಳಗಾಗಿಸಿತು. ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಈ ಔಪಚಾರಿಕ ಪಂದ್ಯದಲ್ಲೂ ಆಡುವ XI ನಲ್ಲಿ ಅವಕಾಶ ಸಿಗದೇ ಅಭಿಮಾನಿಗಳಿಗೆ ನಿರಾಸೆಯಾಗಿದ್ದರೂ, ಮೈದಾನಕ್ಕಿಳಿದ ಅಭಿಷೇಕ್ ಶರ್ಮಾ ಅಫ್ಘಾನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಅಭಿಮಾನಿಗಳನ್ನ ರಂಜಿಸಿದರು.

ಅಭಿಷೇಕ್ ಶರ್ಮಾ ದಾಖಲೆಗಳ ಸುರಿಮಳೆ

ಆರಂಭದಿಂದಲೇ ಅಬ್ಬರಿಸಿದ ಅಮೃತಸರದ 26 ವರ್ಷದ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 34 ಎಸೆತಗಳಲ್ಲಿ 9 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್‌ಗಳೊಂದಿಗೆ 108 ರನ್ ಚಚ್ಚಿ ಔಟಾದರು. ಔಟ್ ಆಗುವ ಮುನ್ನ ಸಂಜು ಸ್ಯಾಮ್ಸನ್ ಜೊತೆಗೂಡಿ ಮೊದಲ ವಿಕೆಟ್​ಗೆ ದಾಖಲೆಯ 142 ರನ್​ಗಳ ಬೃಹತ್ ಜೊತೆಯಾಟ ನೀಡಿದರು. ಸಂಜು ಸ್ಯಾಮ್ಸನ್ 35 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್​ಗಳ ನೆರವಿನಿಂದ 50 ರನ್​ಗಳಿಸಿ ಸಾಥ್ ನೀಡಿದರು. ಆದರೆ ಅಭಿಷೇಕ್ ಶರ್ಮಾ ವಿಕೆಟ್ ಬಳಿಕ ಭಾರತ ತನ್ನ ಅವೇಗವನ್ನ ಕಳೆದುಕೊಂಡಿತು.

ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ 20 ಎಸೆತಗಳನ್ನಾಡಿ 2 ಸಿಕ್ಸರ್ ಸಹಿತ ಕೇವಲ 29 ರನ್ ಗಳಿಸಿದರೆ, ಶಿವಂ ದುಬೆ 10 ಎಸೆತಗಳಲ್ಲಿ 14 ರನ್, ಇಶಾನ್ ಕಿಶನ್ 8 ಎಸೆತಗಳಲ್ಲಿ 10 ರನ್, ನಿತೀಶ್ ಕುಮಾರ್ 4 ಎಸೆತಗಳಲ್ಲಿ 1 ರನ್, ಅಕ್ಷರ್ ಪಟೇಲ್ ಅಜೇಯ 5 ರನ್​ಗಳಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದಿಕೊಂಡು 221 ರನ್‌ಗಳಿಗೆ ತನ್ನ ಇನಿಂಗ್ಸ್ ಮುಗಿಸಿತು.

ಅಫ್ಘಾನಿಸ್ತಾನ ಪರ ಅಜ್ಮತುಲ್ಲಾ ಒಮರ್ಜಾಯ್ 2 ವಿಕೆಟ್ ಪಡೆದರೆ, ರಶೀದ್ ಖಾನ್ ಮತ್ತು ಅಬ್ದುಲ್ಲಾ ಅಹ್ಮದ್‌ಜಾಯ್ ತಲಾ ಒಂದು ವಿಕೆಟ್ ಹಂಚಿಕೊಂಡರು. ಸದ್ಯ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತ ತಂಡ ಇಂದಿನ ಪಂದ್ಯವನ್ನೂ ಗೆದ್ದು ಕ್ಲೀನ್ ಸ್ವೀಪ್ ಮಾಡುವ ವಿಶ್ವಾಸದಲ್ಲಿದೆ.

ಹಲವು ದಾಖಲೆ ಮುರಿದ ಅಭಿಷೇಕ್ ಶರ್ಮಾ

ಕೇವಲ 30 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ರೋಹಿತ್ ಶರ್ಮಾ (35 ಎಸೆತ) ಅವರ ಹೆಸರಲ್ಲಿದ್ದ ಭಾರತದ ಅತ್ಯಂತ ವೇಗದ ಟಿ20ಐ ಶತಕದ ದಾಖಲೆಯನ್ನು ಮುರಿದರು.

ಪೂರ್ಣ ಸದಸ್ಯ ರಾಷ್ಟ್ರಗಳಲ್ಲೇ ನಂ.1: ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ (ಟೆಸ್ಟ್ ಆಡುವ) ದೇಶಗಳ ಪೈಕಿ ಅಂತರರಾಷ್ಟ್ರೀಯ ಟಿ20ಯಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಜಾಗತಿಕ ದಾಖಲೆಯನ್ನು ಬರೆದರು.

ವಿಶ್ವದಾಖಲೆಯ ಪವರ್‌ಪ್ಲೇ ಸ್ಕೋರ್: ಪವರ್‌ಪ್ಲೇನ ಮೊದಲ 6 ಓವರ್‌ಗಳಲ್ಲಿ ಕೇವಲ 22 ಎಸೆತಗಳನ್ನು ಎದುರಿಸಿ 76 ರನ್ ಗಳಿಸುವ ಮೂಲಕ ಪುರುಷರ ಟಿ20ಐ ಇತಿಹಾಸದಲ್ಲೇ ಪವರ್‌ಪ್ಲೇ ಅವಧಿಯಲ್ಲಿ ಗರಿಷ್ಠ ರನ್ ಗಳಿಸಿದ ವಿಶ್ವದಾಖಲೆ ಸ್ಥಾಪಿಸಿದರು.

ಸಿಕ್ಸರ್ ಸಾಧನೆ: ಅಂತರರಾಷ್ಟ್ರೀಯ ಟಿ20 ಇನ್ನಿಂಗ್ಸ್ ಒಂದರಲ್ಲಿ ಒಂದಕ್ಕಿಂತ ಹೆಚ್ಚು ಬಾರಿ 10ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಎನಿಸಿಕೊಂಡರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed