ನೀರ್ ಬಾಟಲ್ ಡಮಾರ್
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಇದರಿಂದ ಮನೆಯ ಸದಸ್ಯರಿಗೆ ಕಿರಿಕಿರಿ ಆಗಿದೆ. ಆದರೆ, ಸ್ವಲ್ಪ ಜಾಸ್ತಿನೆ ಅವಿನಾಶ್ ಅವರಿಗೆ ಕಿರಿಕಿರಿ ಆಗಿದೆ. ಅಡುಗೆ ಮನೆಯಲ್ಲಿರೋ ಊಟದ ವಿಚಾರಕ್ಕೆ ಜಗಳ ಆಗಿದೆ. ಕದ್ದು ತಿಂದ ಮಂಜ್ಯಾ ಹಾಗೂ ಲಿಖಿತ್ ಬಗ್ಗೆ ಸಿಟ್ಟು ಮಾಡಿಕೊಂಡಿದ್ದಾರೆ. ಮನಸ್ಸೋಯಿಚ್ಛೆ ಬೈದಾಡಿದ್ದಾರೆ.
ಅವಿನಾಶ್ ಬೈಗುಳಕ್ಕೆ ಮಂಜ್ಯಾ ರಿಯಾಕ್ಟ್ ಮಾಡಿದ್ದಾರೆ. ‘ಆಯ್ಕೊಂಡು ತಿನ್ನೋರು’ ಅಂತ ಹೇಳ್ಬೇಡಿ. ಇದು ಸರಿ ಅಲ್ಲ ಅನ್ನುವ ಅರ್ಥದಲ್ಲಿಯೇ ಮಾಡರ್ನ್ ಕವಿ ಮಂಜ್ಯಾ ಹೇಳಿದ್ದಾರೆ.
ಅವಿನಾಶ್ ಸಿಟ್ಟು ಜಾಸ್ತಿನೇ ಇದೆ. ಅದು ನೀರ್ ಬಾಟಲ್ ಮೇಲೆ ಹೋಗಿದೆ. ತಮ್ಮ ಕೈಯಲ್ಲಿದ್ದ ನೀರಿನ ಬಾಟಲ್ ಅನ್ನ ಒಡೆದು ಹಾಕಿದ್ದಾರೆ.
ನಾನು ಇರೋದೇ ಇಲ್ಲ. ಹೊರಗೆ ಹೋಗ್ತೀನಿ ಅಂತಲೂ ಹೇಳಿದ್ದಾರೆ. ಮುಂದೆ ಏನ್ ಮಾಡ್ತಾರೋ ಏನೋ? ದಿನದ ಬಿಗ್ ಬಾಸ್ ಪ್ರೋಮೋ ಈ ಎಲ್ಲ ವಿಷಯವನ್ನ ರಿವೀಲ್ ಮಾಡಿದೆ.
ಮಂಜ್ಯಾ ಏನಂದ್ರು
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಸೌಂದರ್ಯ ಶೆಟ್ಟಿ ಇದನ್ನೆಲ್ಲ ನೋಡ್ತಾನೇ ಇದ್ದರು. ದೂರದಿಂದಲೇ ಈ ಜಗಳವನ್ನ ವೀಕ್ಷಿಸುತ್ತಿದ್ದರು. ಆದರೆ, ಅವಿನಾಶ್ ಹಾಗೂ ಮಾಡರ್ನ್ ಕವಿ ಮಂಜ್ಯಾ ಅವರ ಜಗಳದ ನಡುವೆ ಬರೋಕೆ ಹೋಗ್ಲಿಲ್ಲ ನೋಡಿ.
ಬಿಗ್ ಬಾಸ್ ಮನೆಯಲ್ಲಿ ಆಟ ಜೋರಾಗಿದೆ. ನಾಮಿನೇಷನ್ ಪ್ರಕ್ರಿಯೆ ಮಕ್ಕಳ ಆಟವೇ ಅನ್ನುವ ಹಾಗೇನೆ ಸ್ಪರ್ಧಿಗಳು ಇದನ್ನ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಈ ಚರ್ಚೆ ಇದೆ.
ಇನ್ನು ಪೈಲಟ್ ಟಾಸ್ಕ್ ಗೆದ್ದು ಸಂಗೀತಾ ಭಟ್ ಪೈಲಟ್ ಆಗಿದ್ದಾರೆ. ಇದರಿಂದ ಕಿರಣ್ ಶಾಸ್ತ್ರಿಗೆ ಸಿಟ್ಟಿದೆ. ತಾಂಡವ್ ರಾಮ್ ಹಾಗೂ ಗಗನ್ ಮೇಲೆ ಕೂಗಾಡಿರೋದು ಇದೆ.
“ಬಳೆ ಹಾಕಿಕೊಂಡು ಕುಳಿತುಕೊಳ್ಳಿ” ಅಂತಲೂ ಹೇಳಿದ್ದಾರೆ. ಆದರೂ ಯಾಕೋ ಏನೋ. ಈ ಬಳೆ ಅಷ್ಟೆನೂ ಸದ್ದು ಮಾಡಲೇ ಇಲ್ಲ. ಸೀಸನ್-10 ರಲ್ಲಿ ಇದು ಭಾರೀ ಸೌಂಡ್ ಮಾಡಿತ್ತು ಅಂತ ಹೇಳಬಹುದು.













