IND vs AFG: ಅಭಿಷೇಕ್ ಔಟ್, ವೈಭವ್ ಇನ್! ಅಫ್ಘಾನ್ ವಿರುದ್ಧದ 3ನೇ ಟಿ20ಗೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ! ಪ್ಲೇಯಿಂಗ್ XI ಹೀಗಿರಲಿದೆ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ (PTI)


Last Updated:


ಈ ಸರಣಿ ಮುಗಿದ ತಕ್ಷಣ ಭಾರತ ತಂಡವು ಏಷ್ಯನ್ ಗೇಮ್ಸ್ 2026 ರಲ್ಲಿ ಭಾಗವಹಿಸಲು ಜಪಾನ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಮುಂದಿನ ವಾರ ಜಪಾನ್ ವಿರುದ್ಧ ಒಂದು ಟಿ20 ಪಂದ್ಯವನ್ನೂ ಆಡಲಿದೆ. ಈ ಬಿಡುವಿಲ್ಲದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಆಟಗಾರರಿಗೆ ವಿಶ್ರಾಂತಿ ನೀಡುವುದು ಮತ್ತು ಬದಲಿ ಆಟಗಾರರಿಗೆ ಪಂದ್ಯದ ಅಭ್ಯಾಸ ನೀಡುವುದು ತಂಡದ ಆದ್ಯತೆಯಾಗಿದೆ.

 ವೈಭವ್ ಸೂರ್ಯವಂಶಿ (PTI)
ವೈಭವ್ ಸೂರ್ಯವಂಶಿ (PTI)

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಟಿ20 ಸರಣಿ (T20 Series) ಈಗ ಅಂತಿಮ ಹಂತಕ್ಕೆ ತಲುಪಿದೆ. ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವು ಗುರುವಾರ, ಸೆಪ್ಟೆಂಬರ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಈಗಾಗಲೇ 2-0 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ, ಈ ಪಂದ್ಯದ ಫಲಿತಾಂಶ ಸರಣಿ ವಿಜೇತ ಭಾರತ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡದ ಮ್ಯಾನೇಜ್‌ಮೆಂಟ್ ತನ್ನ ಬೆಂಚ್ ಸ್ಟ್ರೆಂತ್ (ಬದಲಿ ಆಟಗಾರರನ್ನು) ಪರೀಕ್ಷಿಸಲು ಇದು ಸುವರ್ಣ ಅವಕಾಶವಾಗಿದೆ. ಭಾರತ ತಂಡ ಈ ಪಂದ್ಯದಲ್ಲಿ 3 ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದ್ದು, ವೈಭವ್ ಸೂರ್ಯವಂಶಿ, ಯಶ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗಬಹುದು.

ಈ ಸರಣಿ ಮುಗಿದ ತಕ್ಷಣ ಭಾರತ ತಂಡವು ಏಷ್ಯನ್ ಗೇಮ್ಸ್ 2026 ರಲ್ಲಿ ಭಾಗವಹಿಸಲು ಜಪಾನ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಮುಂದಿನ ವಾರ ಜಪಾನ್ ವಿರುದ್ಧ ಒಂದು ಟಿ20 ಪಂದ್ಯವನ್ನೂ ಆಡಲಿದೆ. ಈ ಬಿಡುವಿಲ್ಲದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಆಟಗಾರರಿಗೆ ವಿಶ್ರಾಂತಿ ನೀಡುವುದು ಮತ್ತು ಬದಲಿ ಆಟಗಾರರಿಗೆ ಪಂದ್ಯದ ಅಭ್ಯಾಸ ನೀಡುವುದು ತಂಡದ ಆದ್ಯತೆಯಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಅವಕಾಶ ವಂಚಿತರಾಗಿದ್ದ ಈ ಮೂವರು ಆಟಗಾರರು ದೆಹಲಿ ಟಿ20ಯಲ್ಲಿ ಮೈದಾನಕ್ಕಿಳಿಯಬಹುದು, ಆದರೆ ಇವರನ್ನು ಸೇರಿಸಿಕೊಳ್ಳಲು ಯಾರನ್ನು ಹೊರಗಿಡಲಾಗುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ವೈಭವ್ ಸೂರ್ಯವಂಶಿಗೆ ಅವಕಾಶ ಸಾಧ್ಯತೆ

ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಿಕೊಳ್ಳುವುದು ಸುಲಭದ ನಿರ್ಧಾರವಾಗಿಲ್ಲ. ಏಕೆಂದರೆ ಅವರು ಬರಬೇಕಾದರೆ ಸದ್ಯ ಉತ್ತಮ ಫಾರ್ಮ್‌ನಲ್ಲಿರುವ ಮೂವರು ಅಗ್ರ ಕ್ರಮಾಂಕದ ಬ್ಯಾಟರ್​ಗಳಲ್ಲಿ ಒಬ್ಬರನ್ನು ಕೈಬಿಡಬೇಕಾಗುತ್ತದೆ. ಮೊದಲ ಎರಡು ಪಂದ್ಯಗಳಲ್ಲಿ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇಬ್ಬರೂ ಭರ್ಜರಿ ಅರ್ಧಶತಕಗಳನ್ನು ಬಾರಿಸಿದ್ದು, 250 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಅಬ್ಬರಿಸಿದ್ದಾರೆ. ಹೀಗಾಗಿ ಇವರಲ್ಲಿ ಯಾರನ್ನಾದರೂ ಹೊರಗಿಡುವುದು ಮ್ಯಾನೇಜ್‌ಮೆಂಟ್‌ಗೆ ಕಷ್ಟದ ನಿರ್ಧಾರವಾಗಲಿದ್ದರೂ, ಅಭಿಷೇಕ್ ಶರ್ಮಾ ಅವರಿಗೆ ಈ ಪಂದ್ಯದಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಬುಮ್ರಾಗೆ ವಿಶ್ರಾಂತಿ ಸಾಧ್ಯತೆ

ತಂಡದ ಪ್ರಮುಖ ವೇಗಿ ಜಸ್ಪ್ರಿತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ನಿರ್ಧಾರದ ಬಗ್ಗೆ ಯಾರೂ ಪ್ರಶ್ನೆ ಎತ್ತುವುದಿಲ್ಲ. ಸುಮಾರು ಎರಡು ತಿಂಗಳ ಸುದೀರ್ಘ ವಿರಾಮದ ನಂತರ ಕ್ರಿಕೆಟ್‌ಗೆ ಮರಳಿರುವ ಬುಮ್ರಾ, ಮೊದಲ ಎರಡೂ ಪಂದ್ಯಗಳಲ್ಲಿ ತಮ್ಮ ಕೋಟಾದ ಪೂರ್ತಿ 4 ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಸರಣಿ ಈಗಾಗಲೇ ಕೈವಶವಾಗಿರುವುದರಿಂದ, ಏಷ್ಯನ್ ಗೇಮ್ಸ್‌ನಂತಹ ಪ್ರಮುಖ ಟೂರ್ನಿಗೆ ಮುನ್ನ ಬುಮ್ರಾ ಅವರ ಕೆಲಸದ ಒತ್ತಡವನ್ನು (Workload) ನಿರ್ವಹಿಸುವುದು ಜಾಣತನದ ಕ್ರಮವಾಗಿದೆ.

ಯಶ್ ಠಾಕೂರ್ ಎಂಟ್ರಿ

ಒಂದು ವೇಳೆ ಬುಮ್ರಾಗೆ ವಿಶ್ರಾಂತಿ ನೀಡಿದರೆ, ವಿದರ್ಭದ ವೇಗಿ ಯಶ್ ಠಾಕೂರ್ ಪ್ಲೇಯಿಂಗ್ ಇಲೆವೆನ್ ಸೇರುವುದು ಬಹುತೇಕ ಖಚಿತ. ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ ಟಿ20 ಪದಾರ್ಪಣೆ ಮಾಡಿದ್ದ ಇವರನ್ನು, ಹರ್ಷಿತ್ ರಾಣಾ ಅವರಿಗೆ ಬದಲಿ ಆಟಗಾರನಾಗಿ ಈ ಸರಣಿಗೆ ಸೇರಿಸಿಕೊಳ್ಳಲಾಗಿದೆ. ಮುಂಬರುವ ಏಷ್ಯನ್ ಗೇಮ್ಸ್ ತಂಡದಲ್ಲೂ ಇವರು ಪ್ರಮುಖ ಭಾಗವಾಗಿರುವುದರಿಂದ, ಇವರಿಗೆ ಪಂದ್ಯದ ಅಭ್ಯಾಸ ನೀಡುವುದು ಭಾರತಕ್ಕೆ ಪ್ರಯೋಜನಕಾರಿಯಾಗಲಿದೆ.

ವಾಷಿಂಗ್ಟನ್ ಸುಂದರ್​ಗೆ ಅವಕಾಶ

ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಲು ತಂಡದಲ್ಲಿ ಮೂರನೇ ಬದಲಾವಣೆಯಾಗಿ ಆಫ್-ಸ್ಪಿನ್ನರ್ ಹಾಗೂ ಕೆಳ ಕ್ರಮಾಂಕದ ಬ್ಯಾಟರ್ ವಾಷಿಂಗ್ಟನ್ ಸುಂದರ್ ಅವರನ್ನು ಸೇರಿಸಿಕೊಳ್ಳಬಹುದು. ಇವರನ್ನು ಶಿವಂ ದುಬೆ ಬದಲಿಗೆ ಆಡಿಸುವ ಸಾಧ್ಯತೆಯಿದೆ, ಏಕೆಂದರೆ ದುಬೆ ಮೊದಲ ಎರಡು ಪಂದ್ಯಗಳಲ್ಲೂ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ ಮತ್ತು ಬೌಲಿಂಗ್-ಫೀಲ್ಡಿಂಗ್‌ನಲ್ಲೂ ಅಷ್ಟಾಗಿ ಪ್ರಭಾವ ಬೀರಲಿಲ್ಲ. ಬುಮ್ರಾ ಅನುಪಸ್ಥಿತಿಯಲ್ಲಿ ಐದನೇ ಬೌಲರ್ ಆಗಿ ಪವರ್‌ಪ್ಲೇನಲ್ಲಿ ರನ್ ನಿಯಂತ್ರಿಸಲು ಸುಂದರ್ ಸೂಕ್ತ ಆಯ್ಕೆಯಾಗಿದ್ದಾರೆ.

3ನೇ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ

ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಶದೀಪ್ ಸಿಂಗ್, ಯಶ್ ಠಾಕೂರ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed