Last Updated:
ಅಯೋಗ್ಯ-2 ಚಿತ್ರ 50 ದಿನಗಳತ್ತ ಸಾಗುತ್ತಿದೆ. ಇನ್ನೇನು ಕೆಲವು ದಿನಗಳಲ್ಲಿಯೇ 50 ದಿನ ಕಂಪ್ಲೀಟ್ ಆಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಅಯೋಗ್ಯ-2 ಚಿತ್ರ (Ayogya-2 Movie) ಇನ್ನು ಓಡ್ತಿದೆ. ಬೇರೆ ಬೇರೆ ಚಿತ್ರ ಬರ್ತಾನೆ ಇವೆ. ಆದರೆ, ಈ ಸಿನಿಮಾದ ಓಟ ನಿಂತಿಲ್ಲ. ಇದು ಓಡ್ತಾನೇ ಇದೆ. ಈ ಚಿತ್ರ ಕಳೆದ ತಿಂಗಳು-25 ದಿನದ (25 Days) ಸಂಭ್ರಮ ಮಾಡಿದೆ. ಇದೀಗ 50 ದಿನಗಳತ್ತ ಸಾಗುತ್ತಿದೆ. ಈ ಒಂದು ಖುಷಿಯನ್ನ ಚಿತ್ರದ ಡೈರೆಕ್ಟರ್ ಮಹೇಶ್ ಕುಮಾರ್ (Mahesh Kumar) ಹಂಚಿಕೊಂಡಿದ್ದಾರೆ. 50 ದಿನ ಸಂಭ್ರಮದ ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ಶೂಟಿಂಗ್‌ನ (Climax Shooting) ಮೇಕಿಂಗ್ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
50 ದಿನಗಳತ್ತ ಅಯೋಗ್ಯ-2 ಓಟ; ಸಂಭ್ರಮಾಚರಣೆಯ ಹೊಸ ಪೋಸ್ಟರ್ ರಿಲೀಸ್! (ಚಿತ್ರ ಕೃಪೆ: ಡೈರೆಕ್ಟರ್ ಮಹೇಶ್ ಕುಮಾರ್)
ಈ ಚಿತ್ರ 25 ದಿನ ಪೂರೈಸುವ ಸಮಯದಲ್ಲಿ 50 ಪ್ಲಸ್ ಥಿಯೇಟರ್ ಅಲ್ಲಿ ಓಡ್ತಾ ಇತ್ತು. ಮಲ್ಟಿಪ್ಲೆಕ್ಸ್ ಥಿಯೇಟರ್ ಅಲ್ಲೂ ರನ್ ಆಗುತ್ತಿತ್ತು. ಮಂಡ್ಯದ ಸಂಜಯ್ ಥಿಯೇಟರ್ ಅಲ್ಲಿ ಈ ಚಿತ್ರದ 25 ದಿನದ ಸಂಭ್ರಮಾಚರಣೆ ಮಾಡಲಾಗಿದೆ.
ಅಯೊಗ್ಯ-2 ಚಿತ್ರ ಆಗಸ್ಟ್-7 ರಂದು ರಿಲೀಸ್ ಆಗಿದೆ. ಈ ಲೆಕ್ಕದಂತೆ ಈ ಚಿತ್ರ ಸೆಪ್ಟೆಂಬರ್-25 ರಂದು 50 ದಿನ ಪೂರೈಸುತ್ತದೆ. ಚಿತ್ರದ ಡೈರೆಕ್ಟರ್ ಮಹೇಶ್ ಕುಮಾರ್ 50 ದಿನದ ಸಂಭ್ರಮಾಚರಣೆಯ ಪೋಸ್ಟರ್ ರೆಡಿ ಮಾಡಿಕೊಂಡಿದ್ದಾರೆ.
ಅಯೋಗ್ಯ-1 ಚಿತ್ರ ಹಿಟ್ ಆಗಿತ್ತು. ಹೆಚ್ಚು ಕಡಿಮೆ ಸುಮಾರು 8 ವರ್ಷದ ಬಳಿಕ ಡೈರೆಕ್ಟರ್ ಮಹೇಶ್ ಕುಮಾರ್ ಅಯೋಗ್ಯ-2 ಚಿತ್ರ ಮಾಡಿದರು. ಈ ಚಿತ್ರವನ್ನು ಜನ ಸ್ವೀಕರಿಸಿದರು.
50 ದಿನಗಳತ್ತ ಅಯೋಗ್ಯ-2 ಸಿನಿಮಾ
(ಚಿತ್ರ ಕೃಪೆ: ಡೈರೆಕ್ಟರ್ ಮಹೇಶ್ ಕುಮಾರ್)
ಇದೀಗ ಈ ಚಿತ್ರ 50 ದಿನಗಳತ್ತ ಸಾಗುತ್ತಿದೆ. ಈ ಖುಷಿಯನ್ನ ಸಿನಿಮಾ ತಂಡ ತನ್ನದೇ ರೀತಿಯಲ್ಲಿಯೇ ಹಂಚಿಕೊಂಡಿದೆ. ಸೆಲೆಬ್ರೇಷನ್‌ಗೂ ತಯಾರಿ ನಡೆಸಿದಂತೆ ಇದೆ.
ಈ ಚಿತ್ರದಲ್ಲಿ ರಚಿತಾ ರಾಮ್ ಇದ್ದಾರೆ. ಸತೀಸ್ ನೀನಾಸಂ ಸಹ ಇದ್ದಾರೆ. ಇವರ ಈ ಜೋಡಿಯ ಚಿತ್ರವನ್ನ ಜನ ಮೆಚ್ಚಿಕೊಂಡಿದ್ದಾರೆ. ಅಯೋಗ್ಯ-1 ಚಿತ್ರದಲ್ಲೂ ಈ ಜೋಡಿ ಮೋಡಿ ಮಾಡಿತ್ತು.
ಅಯೋಗ್ಯ ಆದ್ಮೇಲೆ ಮದಗಜ ಮಾಡಿದರು. ಈ ಸಿನಿಮಾ ಬಳಿಕ ಅಯೋಗ್ಯ-2 ಮಾಡಿದರು. ಅಯೋಗ್ಯ-3 ಚಿತ್ರವನ್ನು ಅನೌನ್ಸ್ ಮಾಡಲಿದ್ದಾರೆ. ಇದನ್ನ ಮುಂದಿನ ವರ್ಷ ತೆರೆಗೆ ತರವು ಪ್ಲಾನ್ ಕೂಡ ಇದೆ ಅಂತಲೇ ಹೇಳಬಹುದು.














