Last Updated:
ದರ್ಶನ್ ಪರ ವಕೀಲರ ಆರೋಪ ಈಗ ಕೇಸ್ಗೆ ಟ್ವಿಸ್ಟ್ ಕೊಟ್ಟಿದೆ. ಡಿ’ ಗ್ಯಾಂಗ್ ಗೆ ಕೋರ್ಟ್ ಶಾಕ್, ಮಾಫಿ ಸಾಕ್ಷಿ ಕಂಟಕ ಫಿಕ್ಸ್ ಆಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್ನಲ್ಲಿ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮಾಫಿ ಸಾಕ್ಷಿಯಾಗಲು (Approver) ಮುಂದಾಗಿರುವ ಪ್ರದೋಷ್ (Pradosh) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಇದರ ಹಿಂದೆ ಷಡ್ಯಂತರ ಇದೆ. ಮಾಫಿ ಆಕ್ಷಿಗೆ ಅವಕಾಶ ಕೊಡಬಾರದು ಎಂದು ದರ್ಶನ್ ಪರ ವಕೀಲರು ಪಟ್ಟು ಹಿಡಿದಿದ್ದರು. ಆದರೆ ದರ್ಶನ್ ಗೆ ಶಾಕ್ ಕೊಟ್ಟಿರೋ ಕೋರ್ಟ್ (Court) ಪ್ರದೂಶ್ ಅರ್ಜಿಯನ್ನ ಅಂಗೀಕಾರ ಮಾಡಿದೆ.
ಈ ಮೂಲಕ ದರ್ಶನ್ ಗೆ ಮಾಫಿ ಸಾಕ್ಷಿ ಕಂಟಕ ಮತ್ತೆ ಶುರುವಾಗಿದೆ. ಮಾಫಿ ಸಾಕ್ಷಿ ಹಿಂದೆ ಷಡ್ಯಂತ್ರ..? ದರ್ಶನ್ ಪರ ವಕೀಲರ ಆರೋಪ ಈಗ ಕೇಸ್ಗೆ ಟ್ವಿಸ್ಟ್ ಕೊಟ್ಟಿದೆ. ಡಿ’ ಗ್ಯಾಂಗ್ ಗೆ ಕೋರ್ಟ್ ಶಾಕ್, ಮಾಫಿ ಸಾಕ್ಷಿ ಕಂಟಕ ಫಿಕ್ಸ್ ಆಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಮಾಫಿ ಸಾಕ್ಷಿ ಪ್ರದೋಷ್ ವಿರುದ್ಧ ದರ್ಶನ್ ಪರ ವಕೀಲರು ಗಂಭೀರ ಆರೋಪ ಮಾಡಿದ್ದಾರೆ. 59ನೇ ಸಿಸಿಹೆಚ್ ಕೋರ್ಟ್ ಗೆ ದರ್ಶನ್ ಪರ ವಕೀಲ ಹಷ್ಮತ್ ಪಾಷ ಇದೊಂದು ಷಡ್ಯಂತ್ರ ಅಂತ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ನಟ ದರ್ಶನ್ ಗೆ ಬಿಗ್ ಶಾಕ್ ನೀಡಿದೆ.
ದರ್ಶನ್ ಸಲ್ಲಿಸಿದ್ದ ಅರ್ಜಿ ಸಂಬಂಧ ವಾದ ಮಾಡಿದ ದರ್ಶನ್ ಪರ ವಕೀಲರು ಪ್ರದೋಶ್ ಸ್ವಯಂಪ್ರೇರಿತವಾಗಿ ಮಾಫಿ ಸಾಕ್ಷಿಗೆ ಅರ್ಜಿ ಸಲ್ಲಿಸಿಯೇ ಇಲ್ಲ ಅಂತ ಗಂಭೀರ ಆರೋಪ ಮಾಡಿದ್ದಾರೆ. ಪ್ರದೋಷ್ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಬಳಕೆ ಮಾಡಿದ್ದು, ಬೇರೊಬ್ಬರ ನಂಬರ್ ಹೆಸರಿನಲ್ಲಿ ಎಂಟ್ರಿ ಮಾಡಿಸಿ ತನ್ನ ಪತ್ನಿಗೆ ಕರೆ ಮಾಡಿದ್ದಾನೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿ ತನಿಖೆ ನಡೆಯುತ್ತಿದೆ. ಪ್ರದೋಷ್ ಮೇಲೆ ಯಾರೋ ಒತ್ತಡ ಹೇರಿರುವ ಸಾಧ್ಯತೆಯಿದೆ. ಅಲ್ಲದೆ ದರ್ಶನ್ ವಿರುದ್ಧ ಚಿತ್ರರಂಗದಲ್ಲಿ ಅಸೂಯೆ ಪಡುವ ವ್ಯಕ್ತಿಗಳು ದರ್ಶನ್ ಗುರಿಯಾಗಿಸಿಕೊಂಡಿದ್ದಾರೆ ಅಂತ ಆರೋಪಿಸಿದ್ದಾರೆ. ಹೀಗಾಗಿ ಪ್ರದೋಷ್ ವಿರುದ್ಧ ತನಿಖೆ ಪೂರ್ಣಗೊಳ್ಳುವವರೆಗೆ ಮುಂದೂಡಬೇಕೆಂದು ದರ್ಶನ್ ಪರ ವಕೀಕರು ಮನವಿ ಮಾಡಿದ್ದಾರೆ.
ಇನ್ನು ದರ್ಶನ್ ಪರ ವಕೀಲರ ವಾದಕ್ಕೆ ಅಕ್ಷೇಪಣೆ ಸಲ್ಲಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ದರ್ಶನ್ ಪರ ಸಲ್ಲಿಸಿರುವ ಅರ್ಜಿ ಅರ್ಹವಲ್ಲ. ಇದು ಅಪ್ರಸ್ತುತ ಅಂತ ವಾದ ಮಾಡಿದ್ದರು. ಪ್ರದೋಷ್ ಮೇಲಿನ ಈ ಆರೋಪಕ್ಕೂ ಆತ ಮಾಫಿ ಸಾಕ್ಷಿಯಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. ವಿನಯ್ ಕುಲಕರ್ಣಿ ಪ್ರಕರಣದಲ್ಲೂ ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ ಮೇಲೆ ಹಳೆ ಕೇಸ್‌ಗಳಿದ್ದರೂ ಪರಿಗಣಿಸಲಾಗಿತ್ತು. ಹೈಕೋರ್ಟ್ ಆದೇಶದಂತೆ ನ್ಯಾಯಾಲಯ ಮುಂದುವರಿಯಬೇಕು ಎಂದು ಪ್ರತಿವಾದ ಮಾಡಿದ್ದರು.
ಇನ್ನು ವಿಚಾರಣೆ ವೇಳೆ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರದೋಷ್ ಹಾಜರಾಗಿದ್ದರು. ಈ ವೇಳೆ ನನಗೆ ಐಡಿ ಮಾಡಿಕೊಟ್ಟಿರುವುದೇ ಜೈಲು ಅಧಿಕಾರಿಗಳು, ಅವರೇ ಕೊಟ್ಟ ಐಡಿಯನ್ನು ನಾನು ಬಳಸಿದ್ದೇನೆ, ನನಗೆ ಸಿಸ್ಟಮ್ ಆಕ್ಸೆಸ್ ಇಲ್ಲ, ನಾನು ಯಾವುದೇ ಮೊಬೈಲ್ ಫೋನ್ ಬಳಸಿಲ್ಲ, ಆದರೆ ನನಗೆ ಮಾತ್ರ ತೊಂದರೆ ಕೊಡುತ್ತಿದ್ದಾರೆ, ಮುಂದಿನ 1 ತಿಂಗಳು ಕುಟುಂಬದೊಂದಿಗೆ ಮಾತನಾಡುವಂತಿಲ್ಲ, ಲಾಕ್ ಅಪ್ ಅಲ್ಲೇ ಇರಬೇಕೆಂದು ಜೈಲು ಅಧಿಕಾರಿಗಳು ಹೇಳುತ್ತಿದ್ದಾರೆ ಅಂತ ಪ್ರದೂಶ್ ಅಳಲು ತೋಡಿಕೊಂಡಿದ್ದಾರೆ.
ಇನ್ನು ವಾದ-ಪ್ರತಿವಾದ ಆಲಿಸಿದ ನ್ಯಾ. ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರು ದರ್ಶನ್ ಸಲ್ಲಿಸಿದ ಅರ್ಜಿ ವಜಾ ಮಾಡಿದ್ದಾರೆ. ಅಲ್ಲದೆ ಪ್ರದೂಷ್ ನನ್ನ ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಮತ್ತೆ ನ್ಯಾಯಾಲಯ ಆದೇಶಿಸಿದೆ. ದರ್ಶನ್ ಗೆ ಮತ್ತೆ ಮಾಫಿ ಸಾಕ್ಷಿ ಕಂಟಕ ಶುರುವಾಗಿದೆ.
ಸದ್ಯ ಈ ಆದೇಶ ಸಂಬಂಧವೂ ದರ್ಶನ್ ಹೈಕೋರ್ಟ್ ಗೆ ಮೇಲ್ಮನವಿ ಹೋಗ್ತಾರಾ..? ಅಥವಾ ಮಾಫಿ ಸಾಕ್ಷಿ ಎದುರಿಸ್ತಾರಾ..? ಕಾದು ನೋಡಬೇಕು.
– ಮಂಜುನಾಥ್ ಎನ್, ಮಾದೇಶ್ .ಸಿ ಕ್ರೈಂ ಬ್ಯೂರೋ ನ್ಯೂಸ್ 18 ಕನ್ನಡ ಬೆಂಗಳೂರು














