IND A vs SL A, Final: ಫೈನಲ್​​ಗೂ ಮುನ್ನವೇ ವಾರ್ನಿಂಗ್ ಕೊಟ್ಟಿದ್ದ ವೈಭವ್, ಸೂರ್ಯವಂಶಿ ಇನ್​​​ಸ್ಟಾ ಸ್ಟೋರಿ ನೋಡಿದ್ರಾ? | ಕ್ರೀಡಾ ಸುದ್ದಿ | ACTPnews

ವೈಭವ್ ಇನ್ ಸ್ಟಾ ಸ್ಟೋರಿ


Last Updated:

ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 94 ರನ್ ಸಿಡಿಸಿ ಶ್ರೀಲಂಕಾ ಎ ವಿರುದ್ಧ ಲಿಸ್ಟ್ ಎ ಇತಿಹಾಸದ ವೇಗದ ಅರ್ಧಶತಕ ದಾಖಲಿಸಿದ್ದಾರೆ.

ವೈಭವ್ ಇನ್ ಸ್ಟಾ ಸ್ಟೋರಿ
ವೈಭವ್ ಇನ್ ಸ್ಟಾ ಸ್ಟೋರಿ

ವೈಭವ್ ಸೂರ್ಯವಂಶಿ (Vaibhav Suryavanshi) ತನ್ನ ಪ್ರದರ್ಶನದ ಮೂಲಕ ವಿಶ್ವ ಕ್ರಿಕೆಟ್​​ಗೆ ಶಾಕ್ ಕೊಟ್ಟಿದ್ದಾರೆ. ಕಳೆದ ಪಂದ್ಯದಲ್ಲಿ ವಿವಾದ, ವಿಮರ್ಶೆಗಳಿಗೆ ಬ್ಯಾಟ್ ಮೂಲಕ ಉತ್ತರ ಕೊಟ್ಟಿದ್ದಾರೆ. ಆದರೆ ಪಂದ್ಯಕ್ಕೂ (Team India) ಮುನ್ನ ತನ್ನ ಮೈಂಡ್ ಗೇಮ್ ಮೂಲಕ ತಿರುಗೇಟು ನೀಡಿದ್ದರು 15 ವರ್ಷದ ವಂಡರ್ ಕೀಡ್ ವೈಭವ್ ಸೂರ್ಯವಂಶಿ. ಲೀಗ್ ಪಂದ್ಯದಲ್ಲಿ ಶ್ರೀಲಂಕಾ ಎ ಎದುರು ಸೂಪರ್ ಓವರ್ ಸೋಲು, ಆ ಬಳಿಕ ಮೈದಾನದಲ್ಲಿ ನಡೆದ ಘರ್ಷಣೆ ವೈಭವ್ ಅವರಿಗೆ ಡಿಸ್ಟರ್ಬ್ ಮಾಡಿತ್ತು. ಅಲ್ಲಿಂದ ತಿರುಗೇಟು ನೀಡಲು ಕಾಯುತ್ತಿದ್ದ ಬೇಬಿ ಬಾಸ್ ಸೂರ್ಯವಂಶಿ ಶ್ರೀಲಂಕಾ (Sri Lanka) ಬೌಲರ್ ಗಳಿಗೆ ನರಕ ದರ್ಶನ ಮಾಡಿಸಿದ್ದಾರೆ. ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸಿದ ವೈಭವ್, ಸ್ಫೋಟಕ ಪ್ರದರ್ಶನ ನೀಡಿದ್ದಾರೆ.

ಇದೆಲ್ಲಾ ಒಂದು ಕಡೆಯಾದರೆ ಫೈನಲ್ ಪಂದ್ಯ ಆರಂಭವಾಗುವ ಮುನ್ನ ಶೇರ್ ಮಾಡಿದ್ದ ಇನ್ ಸ್ಟಾದ ಸ್ಟೋರಿ ಈಗ ಹಾಟ್ ಟಾಪಿಕ್ ಆಗಿದೆ. ಈ ಸ್ಟೋರಿಯಲ್ಲಿ ವೈಭವ್ ಸೂರ್ಯವಂಶಿ, ತಮ್ಮ ಫೋಟೋ ಶೇರ್ ಮಾಡಿ ಕ್ಯಾಪ್ಶನ್ ನಲ್ಲಿ ‘100’ ರನ್ ಬರೆದುಕೊಂಡಿದ್ದರು. ಆ ಮೂಲಕ ಶ್ರೀಲಂಕಾ ಸ್ಟೋರಿಗೆ ಎಚ್ಚರಿಕೆ ನೀಡಿದ್ದರು. ಹೇಳಿದಂತೆಯೇ ಫೈನಲ್ ನಲ್ಲಿ ಸೆಂಚುರಿ ಮಾರ್ಕ್ ಮುಟ್ಟಲು ಆಗಲಿಲ್ಲ. ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸಿ ಶ್ರೀಲಂಕಾ ಬೌಲರ್​​ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. 10 ಬೌಂಡರಿ, 8 ಸಿಕ್ಸರ್ ಗಳೊಂದಿಗೆ ಬೌಲರ್ ಗಳಿಗೆ ಬೆವರು ಇಳಿಸಿದ್ದರು. ಇದೇ ವೇಳೆ ವೈಭವ್ ಕಾನ್ಫಿಡೆನ್ಸ್ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ ವೈಭವ್, ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಆ ಮೂಲಕ ಶ್ರೀಲಂಕಾ ಆಟಗಾರ ಕೌಶಲ್ಯ ವೀರರತ್ನ ಹೆಸರಿನಲ್ಲಿ ಕಳೆದ 21 ವರ್ಷಗಳಿಂದ ಇದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಕೌಶಲ್ಯ ವೀರರತ್ನ 12 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇನ್ನು ಆರಂಭಿಕನಾಗಿ ಕಣಕ್ಕೆ ಇಳಿದ ವೈಭವ್ ಕೇವಲ 5 ಬೌಂಡರಿ, 5 ಸಿಕ್ಸರ್ ಗಳೊಂದಿಗೆ ಅರ್ಧ ಶತಕಗಳಿಸಿದ್ದು ಮತ್ತೊಂದು ವಿಶೇಷ. ಅಲ್ಲದೇ, ಟೀಮ್ ಇಂಡಿಯಾ ಎ ತಂಡದ ಪರ ಮೊದಲ ವೈಭವ್ ತಮ್ಮ ಮೊದಲ ಅರ್ಧ ಶತಕ ದಾಖಲಿಸಿದ್ದರು. ಆದರೆ ಶ್ರೀಲಂಕಾ ಕ್ಯಾಪ್ಟನ್ ಮಾಡಿದ ಇನ್ನಿಂಗ್ಸ್ ನ 9ನೇ ಓವರ್ ನಲ್ಲಿ ಔಟ್ ಆದ ವೈಭವ್, ಜಸ್ಟ್ 6 ರನ್ ಗಳಿಂದ ಶತಕ ಗಳಿಸಲು ವಿಫಲರಾದರು. ಆದರೆ ಔಟ್ ಆಗುವ ಸಮಯಕ್ಕೆ ವೈಭವ್ ಮಾಡಿದ ವಿಧ್ವಂಸ ಮ್ಯಾಚ್ ಸ್ವರೂಪವನ್ನೇ ಬದಲಿಸಿತ್ತು.

ವೈಭವ್ ಇನ್ ಸ್ಟಾ ಪೋಸ್ಟ್

ಮತ್ತೊಂದು ಕಡೆ, ವೈಭವ್ ಸ್ಫೋಟಕ ಆರಂಭ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ. ಐರ್ಲೆಂಡ್, ಇಂಗ್ಲೆಂಡ್ ಪ್ರವಾಸ ಸೇರಿದಂತೆ ಏಷ್ಯನ್ ಗೇಮ್ಸ್​​ 2026ಕ್ಕೆ ಭಾರತ ಹಿರಿಯರ ಟಿ20 ತಂಡಕ್ಕೆ 15 ವರ್ಷದ ಆಟಗಾರನಾಗಿ ಸ್ಥಾನ ಪಡೆದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಕೇವಲ 15 ವರ್ಷ 71 ದಿನಗಳ ವಯಸ್ಸಿಗೆ ಭಾರತ ಪುರುಷರ ತಂಡಕ್ಕೆ ಆಯ್ಕೆಯಾಗಿ, ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 1989ರಲ್ಲಿ ಸಚಿನ್ ತಮ್ಮ 16 ವರ್ಷ 205 ದಿನಗಳ ವಯಸ್ಸಿನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಮುಂಬರುವ ವಿದೇಶಿ ಪ್ರವಾಸದಲ್ಲಿ ವೈಭವ್ ಕಣಕ್ಕೆ ಇಳಿಸಿದರೆ ಸಚಿನ್ ಅವರ ದಾಖಲೆ ಮುರಿದು ಭಾರತ ಪರ ದಾಖಲೆ ಬರೆಯಲಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed