Dhanush-Aishwarya Divorce: ಧನುಷ್ ಡಿವೋರ್ಸ್‌ಗೆ ಕಾರಣ ‘ಅವಳಲ್ಲ’! ರಜನಿಕಾಂತ್ ಪುತ್ರಿಯ ವಿಚ್ಛೇದನದ ಅಸಲಿ ಸಂಗತಿ ಇಲ್ಲಿದೆ! | | ACTPnews

ಧನುಷ್-ಐಶ್ವರ್ಯಾ ಡಿವೋರ್ಸ್‌ಗೇನು ಕಾರಣ?


Last Updated:

Dhanush-Aishwarya Divorce: ಧನುಷ್ ಹಾಗೂ ಐಶ್ವರ್ಯಾ 18 ವರ್ಷ ಸಂಸಾರ ನಡೆಸಿದ್ದರು. ಆದರೆ ಅದರ ಬಳಿಕ ಇಬ್ಬರೂ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಇಬ್ಬರ ನಡುವಿನ ವಿಚ್ಛೇದನಕ್ಕೆ ಅವರು ಕಾರಣ, ಇವರು ಕಾರಣ ಎಂಬ ರೂಮರ್ಸ್ ಕೇಳಿ ಬಂತು. ಆದರೆ ಅಸಲಿ ಕಾರಣ ಅದಲ್ಲ, ಇದು ಅಂತಿದ್ದಾರೆ ಧನುಷ್ ಆಪ್ತರು!

ಧನುಷ್-ಐಶ್ವರ್ಯಾ ಡಿವೋರ್ಸ್‌ಗೇನು ಕಾರಣ?
ಧನುಷ್-ಐಶ್ವರ್ಯಾ ಡಿವೋರ್ಸ್‌ಗೇನು ಕಾರಣ?

ತಮಿಳಿನ ಖ್ಯಾತ ನಟ ಧನುಷ್ (Dhanush) ಹಾಗೂ ಸೂಪರ್ ಸ್ಟಾರ್ ರಜನಿಕಾಂತ್‌ (Rajinikanth) ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ (Aishwarya Rajinikanth) ಡಿವೋರ್ಸ್ ಆಗೋರೋದು ಗೊತ್ತೇ ಇದೆ. ಈ ಇಬ್ಬರೂ ದಕ್ಷಿಣ ಭಾರತದ ಸಿನಿಮಾ ಜಗತ್ತಿನಲ್ಲಿ ತುಂಬಾ ಪ್ರಸಿದ್ಧರಾದ ವ್ಯಕ್ತಿಗಳು. ಧನುಷ್ ಒಬ್ಬ ಪ್ರಸಿದ್ಧ ನಟ, ಐಶ್ವರ್ಯಾ ರಜನಿಕಾಂತ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು. ಅಲ್ಲದೇ ಆಕೆ ಚಿತ್ರ ನಿರ್ಮಾಣ ಮತ್ತು ನೃತ್ಯ ಕಲೆಯಲ್ಲಿ ತೊಡಗಿರುವರು. ಈ ದಂಪತಿ ಮದುವೆಯಾಗಿ, 18 ವರ್ಷ ಸಂಸಾರ ನಡೆಸಿದ್ದರು. ಆದರೆ ಅದರ ಬಳಿಕ ಇಬ್ಬರೂ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಇಬ್ಬರ ನಡುವಿನ ವಿಚ್ಛೇದನಕ್ಕೆ ಅವರು ಕಾರಣ, ಇವರು ಕಾರಣ ಎಂಬ ರೂಮರ್ಸ್ ಕೇಳಿ ಬಂತು. ಆದರೆ ಅಸಲಿ ಕಾರಣ ಅದಲ್ಲ, ಇದು ಅಂತಿದ್ದಾರೆ ಧನುಷ್ ಆಪ್ತರು.

18 ವರ್ಷಗಳ ಬಳಿಕ ಧನುಷ್, ಐಶ್ವರ್ಯಾ ವಿಚ್ಛೇದನ

ಐಶ್ವರ್ಯಾ ಹಾಗೂ ಧನುಷ್ ಪ್ರೀತಿಸಿ, 2004, ನವೆಂಬರ್ 18ರಂದು ಮದುವೆಯಾಗಿದ್ದರು. ಅವರ ಮದುವೆಯು ಚೆನ್ನೈನಲ್ಲಿ ಬಹಳ ದೊಡ್ಡ ರೀತಿಯಲ್ಲಿ, ಅದ್ಧೂರಿಯಾಗಿ ನಡೆದಿತ್ತು. ಅವರಿಗೆ ಎರಡು ಮಕ್ಕಳಿದ್ದಾರೆ. 2006ರಲ್ಲಿ ಹಿರಿಯ ಮಗ ಯಾತ್ರಾ ರಾಜ್ ಜನಿಸಿದ್ರೆ, ಚಿಕ್ಕ ಮಗ ಲಿಂಗರಾಜ್ 2010ರಲ್ಲಿ ಜನಿಸಿದ್ದ. 18 ವರ್ಷಗಳ ದಾಂಪತ್ಯ ಜೀವನದ ನಂತರ ಧನುಷ್, ಐಶ್ವರ್ಯಾ 2022, ಜನವರಿ 17ರಂದು ತಮ್ಮ ವಿವಾಹ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿದ್ದರು.
ಡಿವೋರ್ಸ್ ಬಗ್ಗೆ ಘೋಷಿಸಿದ್ದ ದಂಪತಿ

ಅಂದು ಅವರಿಬ್ಬರೂ ಒಟ್ಟಿಗೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದರು. “18 ವರ್ಷಗಳ ಕಾಲ ನಾವು ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಜೀವನವನ್ನು ಕಳೆದಿದ್ದೇವೆ. ಈ ಪಯಣವು ಬೆಳವಣಿಗೆ, ಅರ್ಥಮಾಡಿಕೊಳ್ಳುವಿಕೆ, ಹೊಂದಿಕೊಳ್ಳುವಿಕೆ ಮತ್ತು ಬದಲಾವಣೆಗಳಿಂದ ಕೂಡಿತ್ತು. ಈಗ ನಮ್ಮ ದಾರಿಗಳು ಬೇರೆ ಬೇರೆಯಾಗಿವೆ. ನಾವು ದಂಪತಿಗಳಾಗಿ ಬೇರ್ಪಡುವ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮನ್ನು ವ್ಯಕ್ತಿಗಳಾಗಿ ಅರ್ಥಮಾಡಿಕೊಳ್ಳುವ ಸಮಯ ಬೇಕು. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಖಾಸಗಿತನಕ್ಕೆ ಬೆಲೆ ಕೊಡಿ” ಎಂದು ಮನವಿ ಮಾಡಿಕೊಂಡಿದ್ದರು.

ಸದ್ಯ ಇಬ್ಬರೂ ಬೇರೆ ಬೇರೆ

2024ರಲ್ಲಿ ಅವರು ಚೆನ್ನೈ ಕುಟುಂಬ ನ್ಯಾಯಾಲಯದಲ್ಲಿ ಪರಸ್ಪರ ಸಮ್ಮತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ನವೆಂಬರ್ 27, 2024ರಂದು ನ್ಯಾಯಾಲಯವು ಅವರ ವಿಚ್ಛೇದನವನ್ನು ಅನುಮೋದಿಸಿತು. ಈಗ ಅವರು ಕಾನೂನುಬದ್ಧವಾಗಿ ಬೇರೆಯಾಗಿದ್ದಾರೆ. ಆದರೆ ಮಕ್ಕಳ ವಿಷಯದಲ್ಲಿ ಇಬ್ಬರೂ ಒಟ್ಟಿಗೆ ಪ್ಲಾನ್ ಮಾಡಿದ್ದಾರೆ. ಮಕ್ಕಳಿಗೆ ಉತ್ತಮ ಜೀವನ ಕೊಡುವುದು ಅವರ ಆದ್ಯತೆ ಎಂದು ಹೇಳಲಾಗುತ್ತದೆ. ವಿಚ್ಛೇದನದ ನಂತರವೂ ಅವರ ನಡುವೆ ಯಾವುದೇ ಕಹಿ ಇಲ್ಲ. ಮುಖ್ಯ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಒಬ್ಬರ ಕೆಲಸವನ್ನು ಇನ್ನೊಬ್ಬರು ಪ್ರಶಂಸಿಸುತ್ತಾರೆ.

ಹಲವರ ಜೊತೆ ಧನುಷ್ ಹೆಸರು ಥಳುಕು

ಇನ್ನು ಡಿವೋರ್ಸ್‌ ಆಗುತ್ತಿದ್ದಂತೆ ಹಲವು ನಟಿಯರ ಜೊತೆ ಧನುಷ್ ಹೆಸರು ಥಳುಕು ಹಾಕಿಕೊಂಡಿತ್ತು. ತಮಿಳಿನ ಖ್ಯಾತ ನಟಿಯರ ಜೊತೆ ಧನುಷ್ ಹೆಸರು ಕೇಳಿ ಬಂದಿದ್ದು, ಇದೇ ಕಾರಣಕ್ಕೆ ಐಶ್ವರ್ಯಾ ರಜನಿಕಾಂತ್ ಡಿವೋರ್ಸ್‌ ನೀಡಿದ್ರು ಎನ್ನುವಂತ ಅಂತೆ ಕಂತೆಗಳು ಕೇಳಿ ಬಂದಿದ್ದವು.

ಕುಟುಂಬಕ್ಕೆ ಟೈಮ್ ಕೊಡ್ತಿರಲಿಲ್ಲವಾ ಧನುಷ್?

ಆದರೆ ಕೆಲವು ವರದಿಗಳ ಪ್ರಕಾರ, ದನುಷ್ ಅವರು ಬಹಳ ವರ್ಕಹಾಲಿಕ್ ಎನ್ನಲಾಗಿದೆ. ಅವರು ನಿರಂತರವಾಗಿ ಚಿತ್ರಗಳಲ್ಲಿ ನಟಿಸುತ್ತಾ, ಹೊರಗಡೆ ಶೂಟಿಂಗ್‌ಗಳಿಗೆ ಹೋಗುತ್ತಾ, ಪ್ರಯಾಣ ಮಾಡುತ್ತಾ ಇದ್ದರು. ಇದರಿಂದ ಕುಟುಂಬ ಜೀವನಕ್ಕೆ ಸಮಯ ಕೊಡುವುದು ಕಡಿಮೆಯಾಯಿತು ಎಂದು ಹೇಳಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಜಗಳ ಬಂದಾಗ ದನುಷ್ ಮತ್ತೊಂದು ಸಿನಿಮಾದಲ್ಲಿ ತೊಡಗಿಕೊಳ್ಳುತ್ತಿದ್ದರು ಎನ್ನುವ ವರದಿಗಳಿವೆ. ಹೀಗೆ ನಿಧಾನವಾಗಿ ಅವರ ನಡುವಿನ ಸಂಬಂಧವು ದೂರವಾಯಿತು ಎಂದು ತಿಳಿದುಬಂದಿದೆ. ಇದೊಂದೇ ಕಾರಣ ಹೊರತು, ಬೇರೆ ನಟಿಯರು ಅಥವಾ ಮೂರನೇ ಸಂಬಂಧ ಕಾರಣವಲ್ಲ ಅಂತಿದ್ದಾರೆ ಅವರ ಆಪ್ತರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed