Imtiaz Ali: ಹಿಂದೂ ಬಾಯ್​ಫ್ರೆಂಡ್ ಜೊತೆ ಎಂಗೇಜ್ ಆದ ಇಮ್ತಿಯಾಜ್ ಅಲಿ ಮಗಳು | Imtiaz Ali s Daughter Ida Ali Gets Engaged to her hindu boyfriend | | ACTPnews

ಇದಾ ಅಲಿ


Last Updated:

Imtiaz Ali: ಖ್ಯಾತ ಬಾಲಿವುಡ್ ನಟನ ಮಗಳು ಹಿಂದೂ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅವರಿಗೆ ಅಭಿನಂದನೆಗಳ ಸುರಿಮಳೆಯಾಗಿದೆ.

ಇದಾ ಅಲಿ
ಇದಾ ಅಲಿ

ನಿರ್ದೇಶಕ ಇಮ್ತಿಯಾಜ್ ಅಲಿ ಅವರ ಪುತ್ರಿ, ಸಿನಿಮಾ ನಿರ್ಮಾಪಕಿ ಮತ್ತು ಬರಹಗಾರ್ತಿ ಇದಾ ಅಲಿ (Ida Ali) ತಮ್ಮ ದೀರ್ಘಕಾಲದ ಹಿಂದೂ ಬಾಯ್​ಫ್ರೆಂಡ್ ಕ್ರಿಶ್ ಅಗರ್ವಾಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದಾ ಜುಲೈ 12 ರ ಭಾನುವಾರದಂದು ಖಾಸಗಿ ಬೀಚ್‌ಸೈಡ್ ಪ್ರಪೋಸಲ್‌ನ ಕಿರು ವೀಡಿಯೊವನ್ನು ಶೇರ್ ಮಾಡಿ ಎಂಗೇಜ್ಮೆಂಟ್ ವಿಚಾರ ಘೋಷಿಸಿದರು.

ಈ ವಿಡಿಯೋ ಅವರ ಸುಂದರ ಕ್ಷಣವನ್ನು ಸರಳವಾಗಿ ತೋರಿಸಿದೆ. ಪರ್ವತಗಳಿಂದ ಕೂಡಿದ ಶಾಂತವಾದ ಕಡಲತೀರದ ನೋಟದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ, ನಂತರ ಇದಾ ವಜ್ರದ ಉಂಗುರವನ್ನು ತೋರಿಸಲು ತನ್ನ ಕೈಯನ್ನು ಎತ್ತುತ್ತಾಳೆ. ನಂತರ ಕ್ರಿಶ್ ಶೀಘ್ರದಲ್ಲೇ ಫ್ರೇಮ್​ಗೆ ಬರುತ್ತಾರೆ. ನಂತರ ಈ ಜೋಡಿ  ಸೆಲ್ಫಿ ತೆಗೆದುಕೊಳ್ಳುತ್ತಾರೆ.

ಇದಾ ನಿಶ್ಚಿತಾರ್ಥವನ್ನು ಅನೌನ್ಸ್ ಮಾಡಿದ ಕೂಡಲೇ, ಕಾಮೆಂಟ್‌ಗಳ ವಿಭಾಗದಲ್ಲಿ ಸೆಲೆಬ್ರಿಟಿಗಳು ಅಭಿಮಾನಿಗಳು ಅಭಿನಂದಿಸೋಕೆ ಶುರು ಮಾಡಿದರು. ಮೈನ್ ವಾಪಸ್ ಆವುಂಗಾ ಚಿತ್ರದಲ್ಲಿ ನಟಿಸಿರುವ ಶಾರ್ವರಿ ಮತ್ತು ವೇದಾಂಗ್ ರೈನಾ ಈ ಜೋಡಿಗೆ ಶುಭ ಹಾರೈಸಿದರು.

ಸಾಕ್ಷಿ ಶಿವದಾಸನಿ, ಓರ್ರಿ ಎಂದೇ ಜನಪ್ರಿಯರಾಗಿರುವ ಓರ್ಹಾನ್ ಅವತ್ರಮಣಿ, ಮಂಜರಿ ಫಡ್ನಿಸ್ ಮತ್ತು ಆಲಿಯಾ ಕಶ್ಯಪ್ ಕೂಡ ಇದಾ ಮತ್ತು ಕ್ರಿಶ್ ಅವರನ್ನು ಅಭಿನಂದಿಸಿದರು. ಹಲವಾರು ಸ್ನೇಹಿತರು ಮತ್ತು ಫಾಲೋವರ್ಸ್ ಈ ಪ್ರಪೋಸಲ್ ವೀಡಿಯೊಗೆ ಖುಷಿಯಿಂದ ಪ್ರತಿಕ್ರಿಯಿಸಿದರು.

ಕ್ರಿಶ್ ಸಾರ್ವಜನಿಕರ ಗಮನದಿಂದ ದೂರವೇ ಉಳಿದಿದ್ದಾರೆ. ಆದಾಗ್ಯೂ, ಅವರು ಹಲವು ವರ್ಷಗಳಿಂದ ಇದಾ ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಬ್ಬರೂ ವೆಕೇಷನ್ಸ್ ಫೋಟೋ ಶೇರ್ ಮಾಡುತ್ತಿರುತ್ತಾರೆ. ಅವರ ವಿವಾಹದ ಬಗ್ಗೆ ಇನ್ನೂ ಯಾವುದೇ ವಿಚಾರ ರಿವೀಲ್ ಆಗಿಲ್ಲ.

ಇದಾ ಅಲಿ ಯಾರು?

26 ನೇ ವಯಸ್ಸಿನಲ್ಲಿ, ಇದಾ ತನ್ನ ತಂದೆಯ ಸಿನಿಮಾಗಳಿಂದ ಪ್ರತ್ಯೇಕವಾದ ವೃತ್ತಿಜೀವನವನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ. 17 ನೇ ವಯಸ್ಸಿನಲ್ಲಿ ಲಿಫ್ಟ್ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ ನಂತರ ಅವರು ಮೊದಲು ಗಮನ ಸೆಳೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed