Hrithik Roshan: ಹೃತಿಕ್-ಸುಸೇನ್ ಡಿವೋರ್ಸ್ ಸೀಕ್ರೆಟ್! ಕೊನೆಗೂ ಬಯಲಾಯ್ತು ಆ 400 ಕೋಟಿ ರೂ. ಜೀವನಾಂಶದ ಅಸಲಿ ಸತ್ಯ! | | ACTPnews

ಹೃತಿಕ್ ರೋಷನ್


Last Updated:

ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ವಿಚ್ಛೇದನದ ಸಮಯದಲ್ಲಿ 400 ಕೋಟಿ ರೂಪಾಯಿ ಜೀವನಾಂಶ ನೀಡಲಾಗಿದೆ ಎಂಬ ಸುದ್ದಿ ದೇಶಾದ್ಯಂತ ವ್ಯಾಪಕವಾಗಿ ಹರಡಿತ್ತು.

ಹೃತಿಕ್ ರೋಷನ್
ಹೃತಿಕ್ ರೋಷನ್

ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಹಾಗೂ ಸುಸೇನ್ ಖಾನ್ Sussanne Khan) ಅವರ ವಿಚ್ಛೇದನವು (Divorce) ಬಾಲಿವುಡ್‌ನಲ್ಲಿ ಅತೀ ಹೆಚ್ಚು ಚರ್ಚೆಗೆ ಗ್ರಾಸವಾದ ವಿಷಯಗಳಲ್ಲಿ ಒಂದಾಗಿದೆ. ಸುಮಾರು 14 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಈ ಜೋಡಿ 2014ರಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ವೈವಾಹಿಕ ಸಂಬಂಧವನ್ನು ಕೊನೆಗೊಳಿಸಿತು. ಆದರೆ ವಿಚ್ಛೇದನಕ್ಕಿಂತಲೂ ಹೆಚ್ಚು ಸುದ್ದಿಯಾಗಿದ್ದು, ಸುಸೇನ್ ಖಾನ್ ಅವರು ಹೃತಿಕ್ ರೋಷನ್ ಅವರಿಂದ 400 ಕೋಟಿ ರೂಪಾಯಿ ಜೀವನಾಂಶ ಪಡೆದಿದ್ದಾರೆ ಎಂಬ ವದಂತಿ.

ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ವಿಚ್ಛೇದನದ ಸಮಯದಲ್ಲಿ 400 ಕೋಟಿ ರೂಪಾಯಿ ಜೀವನಾಂಶ ನೀಡಲಾಗಿದೆ ಎಂಬ ಸುದ್ದಿ ದೇಶಾದ್ಯಂತ ವ್ಯಾಪಕವಾಗಿ ಹರಡಿತ್ತು. ಈ ಮಾಹಿತಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರಿಂದ ಅನೇಕರು ಈ ಸುದ್ದಿಯನ್ನು ನಿಜವೆಂದು ನಂಬಿದ್ದರು. ಆದರೆ ಇದೀಗ ಫರಾ ಖಾನ್ ಅಲಿ ಈ ಎಲ್ಲ ವರದಿಗಳನ್ನು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಫರಾ ಖಾನ್ ಅಲಿ ಹೇಳಿದ್ದೇನು?

ಇತ್ತೀಚೆಗೆ ವಿಕ್ಕಿ ಲಾಲ್ವಾನಿ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಫರಾ ಖಾನ್ ಅಲಿ, ವಿಚ್ಛೇದನದ ವೇಳೆ 400 ಕೋಟಿ ರೂಪಾಯಿ ಜೀವನಾಂಶ ಪಡೆದಿದ್ದಾರೆ ಎಂಬ ಸುದ್ದಿಗೆ ಯಾವುದೇ ಆಧಾರವಿಲ್ಲ ಎಂದು ತಿಳಿಸಿದ್ದಾರೆ. ಈ ರೀತಿಯ ವದಂತಿಗಳು ತಮ್ಮ ಕುಟುಂಬಕ್ಕೆ ಸಾಕಷ್ಟು ನೋವು ತಂದಿವೆ ಎಂದು ಹೇಳಿದ್ದಾರೆ.

ಹಾಗೆಯೇ ಹೃತಿಕ್ ಮತ್ತು ಸುಸೇನ್ ಇಬ್ಬರೂ ತಮ್ಮ ವೈಯಕ್ತಿಕ ಜೀವನದ ಅತ್ಯಂತ ಸೂಕ್ಷ್ಮ ಹಂತವನ್ನು ಅತ್ಯಂತ ಪ್ರಬುದ್ಧತೆ ಮತ್ತು ಪರಸ್ಪರ ಗೌರವದೊಂದಿಗೆ ನಿರ್ವಹಿಸಿದ್ದಾರೆ. ಅವರ ವಿಚ್ಛೇದನದಲ್ಲಿ ಯಾವುದೇ ವೈಮನಸ್ಸು ಇರಲಿಲ್ಲ ಮತ್ತು ಸಂಪೂರ್ಣ ಸೌಹಾರ್ದಯುತವಾಗಿ ಪ್ರಕ್ರಿಯೆ ಪೂರ್ಣಗೊಂಡಿತ್ತು ಎಂದು ಅವರು ವಿವರಿಸಿದ್ದಾರೆ.

ಅದೇ ಕಾರಣಕ್ಕೆ ಸುಸೇನ್ ಯಾವುದೇ ಆರ್ಥಿಕ ಲಾಭವನ್ನು ನಿರೀಕ್ಷಿಸಿರಲಿಲ್ಲ. ವಿಚ್ಛೇದನದ ಬಳಿಕವೂ ಅವರು ಹೃತಿಕ್ ರೋಷನ್ ಹಾಗೂ ಅವರ ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ರಾಕೇಶ್ ರೋಷನ್ ಮತ್ತು ಪಿಂಕಿ ರೋಷನ್ ಸೇರಿದಂತೆ ಕುಟುಂಬದ ಸದಸ್ಯರು ಇಂದಿಗೂ ಸುಸೇನ್ ಅವರನ್ನು ಆತ್ಮೀಯವಾಗಿ ಕಾಣುತ್ತಾರೆ ಎಂದು ಫರಾ ತಿಳಿಸಿದ್ದಾರೆ.

ಇದನ್ನೂ ಓದಿ: Alpha: ಕಥೆಯೇ ಇಲ್ಲ! ಆಲಿಯಾ ಸಿನಿಮಾಗೆ ಭಾರೀ ಟೀಕೆ, ಆಲ್ಫಾಗೆ ಒಂದೂವರೆ ರೇಟಿಂಗ್

ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ವಿಚ್ಛೇದನದ ಬಳಿಕವೂ ತಮ್ಮ ಇಬ್ಬರು ಮಕ್ಕಳಿಗಾಗಿ ಸ್ನೇಹಪೂರ್ವಕ ಸಂಬಂಧವನ್ನು ಮುಂದುವರಿಸಿಕೊಂಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಇಬ್ಬರೂ ಕುಟುಂಬದ ಕಾರ್ಯಕ್ರಮಗಳಲ್ಲಿ, ಮಕ್ಕಳ ಜೊತೆಗಿನ ಪ್ರವಾಸಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಈ ಕಾರಣದಿಂದಾಗಿ ಅವರ ಸಂಬಂಧವು ವಿಚ್ಛೇದನದ ಬಳಿಕವೂ ಪರಸ್ಪರ ಗೌರವ ಮತ್ತು ಜವಾಬ್ದಾರಿಯ ಮಾದರಿಯಾಗಿದೆ ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಸಂಬಂಧ ಅಂತ್ಯಗೊಂಡರೂ, ಪೋಷಕರಾಗಿ ತಮ್ಮ ಕರ್ತವ್ಯವನ್ನು ಇಬ್ಬರೂ ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ.

ವದಂತಿಗಳಿಗೆ ತೆರೆ ಎಳೆದ ಸ್ಪಷ್ಟನೆ

ಒಟ್ಟಾರೆಯಾಗಿ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ 400 ಕೋಟಿ ರೂಪಾಯಿ ಜೀವನಾಂಶದ ಸುದ್ದಿಗೆ ಫರಾ ಖಾನ್ ಅಲಿ ಅವರ ಹೇಳಿಕೆ ಅಂತಿಮ ಸ್ಪಷ್ಟನೆ ನೀಡಿದಂತಾಗಿದೆ. ಈ ಹೇಳಿಕೆಯಿಂದ ವಿಚ್ಛೇದನದ ಕುರಿತು ಹರಡಿದ್ದ ಪ್ರಮುಖ ವದಂತಿಗೆ ತೆರೆ ಬಿದ್ದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed