Last Updated:
ಓಕ್ಲ್ಯಾಂಡ್ ಕೊಲಿಸಿಯಂ ಕ್ರೀಡಾಂಗಣದಲ್ಲಿ ನಡೆದ ಈ ರೋಮಾಂಚಕ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಎಂಐ ನ್ಯೂಯಾರ್ಕ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 266 ರನ್ಗಳಿಸಿತ್ತು. ಆದರೆ ವಾಷಿಂಗ್ಟನ್ ಫ್ರೀಡಂ ತಂಡವು 18.4 ಓವರ್ಗಳಲ್ಲಿ ಕೇವಲ 4 ವಿಕೆಟ್ಗಳ ನಷ್ಟಕ್ಕೆ 270 ರನ್ ಗಳಿಸಿ ಗೆದ್ದು ಕ್ವಾಲಿಫೈಯರ್ 2 ತಲುಪಿತು.
ಮೇಜರ್ ಲೀಗ್ ಕ್ರಿಕೆಟ್ (MLC) 2026ರ ಎಲಿಮಿನೇಟರ್ ಪಂದ್ಯದಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ಸ್ಟೀವ್ ಸ್ಮಿತ್ ನೇತೃತ್ವದ ವಾಷಿಂಗ್ಟನ್ ಫ್ರೀಡಂ ತಂಡವು MI ನ್ಯೂಯಾರ್ಕ್ ತಂಡವನ್ನ ನಿಗದಿಪಡಿಸಿದ 267 ರನ್ಗಳ ಬೃಹತ್ ಗುರಿಯನ್ನು ಕೇವಲ 18.4 ಓವರ್ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಚರಿತ್ರೆ ಸೃಷ್ಟಿಸಿದೆ. ಈ ಮೂಲಕ, ವಾಷಿಂಗ್ಟನ್ ಫ್ರೀಡಂ ತಂಡ T20 ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಧಿಕ ರನ್-ಚೇಸ್ ಅನ್ನು ಪೂರ್ಣಗೊಳಿಸಿದ ತಂಡ ಎಂಬ ವಿಶ್ವದಾಖಲೆಯನ್ನ ನಿರ್ಮಿಸಿತು. ಓಕ್ಲ್ಯಾಂಡ್ ಕೊಲಿಸಿಯಂ ಕ್ರೀಡಾಂಗಣದಲ್ಲಿ ನಡೆದ ಈ ರೋಮಾಂಚಕ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಎಂಐ ನ್ಯೂಯಾರ್ಕ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 266 ರನ್ಗಳಿಸಿತ್ತು. ಆದರೆ ವಾಷಿಂಗ್ಟನ್ ಫ್ರೀಡಂ ತಂಡವು 18.4 ಓವರ್ಗಳಲ್ಲಿ ಕೇವಲ 4 ವಿಕೆಟ್ಗಳ ನಷ್ಟಕ್ಕೆ 270 ರನ್ ಗಳಿಸಿ ಗೆದ್ದು ಕ್ವಾಲಿಫೈಯರ್ 2 ತಲುಪಿತು. ಆದರೆ MI ನ್ಯೂಯಾರ್ಕ್ ಪಂದ್ಯಾವಳಿಯಿಂದ ಹೊರಬಿತ್ತು.
ಈ ರೋಮಾಂಚಕ ಪಂದ್ಯದಲ್ಲಿ, ವಾಷಿಂಗ್ಟನ್ ಫ್ರೀಡಂ ಟಾಸ್ ಗೆದ್ದು MI ನ್ಯೂಯಾರ್ಕ್ ಅನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. MI ನ್ಯೂಯಾರ್ಕ್ ಕಳಪೆ ಆರಂಭವನ್ನು ಪಡೆಯಿತು, ಕೇವಲ 9 ರನ್ಗಳಾಗುವಷ್ಟರಲ್ಲಿ ಮೊನಾಂಕ್ ಪಟೇಲ್ ಕಳೆದುಕೊಂಡಿತು. ಆದರೆ ನಾಯಕ ನಿಕೋಲಸ್ ಪೂರನ್ ಕ್ವಿಂಟನ್ ಡಿ ಕಾಕ್ ಜೊತೆಗೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು, ಎರಡನೇ ವಿಕೆಟ್ಗೆ 118 ರನ್ಗಳ ಜೊತೆಯಾಟ ನೀಡಿದರು. 24 ಎಸೆತಗಳಲ್ಲಿ 51 ರನ್ ಗಳಿಸಿದ ನಂತರ ಡಿ ಕಾಕ್ ಔಟಾದರು, ನಿಕೋಲಸ್ ಪೂರನ್ ಕೇವಲ 33 ಎಸೆತಗಳಲ್ಲಿ 106 ರನ್ ಗಳಿಸಿ ಅದ್ಭುತ ಶತಕ ಗಳಿಸಿ ನಿರ್ಗಮಿಸಿದರು.
ಪೂರನ್ ತಮ್ಮ ಇನ್ನಿಂಗ್ಸ್ನಲ್ಲಿ 5 ಬೌಂಡರಿ ಮತ್ತು 13 ಬೃಹತ್ ಸಿಕ್ಸರ್ಗಳಿದ್ದವು. ನಂತರ ಅಬ್ಬರ ಮುಂದುವರಿಸಿದ ಕೀರನ್ ಪೊಲಾರ್ಡ್ 25 ಎಸೆತಗಳಲ್ಲಿ 1 ಬೌಂಡರಿ ಮತ್ತು 8 ಸಿಕ್ಸರ್ಗಳೊಂದಿಗೆ 64 ರನ್ ಗಳಿಸಿದರು. ಕೊನೆಯಲ್ಲಿ, ಟ್ರೆಂಟ್ ಬೌಲ್ಟ್ 22 ರನ್ಗಳನ್ನು ಸೇರಿಸಿ ತಂಡದ ಮೊತ್ತವನ್ನ 250ರ ಗಡಿ ದಾಟಿಸಿದರು. ಇವರಿಬ್ಬರ ಅಬ್ಬರದಿಂದ MI ನ್ಯೂಯಾರ್ಕ್ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ ಒಟ್ಟು 266 ರನ್ ಗಳಿಸಿತು. ವಾಷಿಂಗ್ಟನ್ ಫ್ರೀಡಂ ಪರ, ರಚಿನ್ ರವೀಂದ್ರ 4 ವಿಕೆಟ್ಗಳೊಂದಿಗೆ ಅಗ್ರ ವಿಕೆಟ್ ಪಡೆದರೆ, ಬೆನ್ ದ್ವಾರ್ಷೀಯಿಸ್ 2 ವಿಕೆಟ್ ಪಡೆದರು. ಮಿಚೆಲ್ ಓವನ್ ಮತ್ತು ನಿಖಿಲ್ ಚೌಧರಿ ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಗುರಿ ಬೆನ್ನಟ್ಟಿದ ಫ್ರೀಡಂ ತಂಡ ಕೇವಲ 10 ರನ್ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಈ ಹಂತದಲ್ಲಿ ವಾಷಿಂಗ್ಟರ್ ಭಾರೀ ಅಂತರದಲ್ಲಿ ಸೋಲು ಕಾಣಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ನಾಯಕ ಸ್ಟೀವ್ ಸ್ಮಿತ್ ಹಾಗೂ ಆ್ಯಂಡ್ರಿಸ್ ಗೌಸ್ 3ನೇ ವಿಕೆಟ್ ಜೊತೆಯಾಟದಲ್ಲಿ 241 ರನ್ಗಳ ದಾಖಲೆಯ ಜೊತೆಯಾಟ ನಡೆಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಗೌಸ್ 51 ಎಸೆತಗಳಲ್ಲಿ 10 ಬೌಂಡರಿ, 12 ಸಿಕ್ಸರ್ಗಳ ಸಹಿತ 132 ರನ್ಗಳಿಸಿದರೆ, ಸ್ಟೀವ್ ಸ್ಮಿತ್ 48 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್ಗಳ ಸಹಿತ ಅಜೇಯ 110 ರನ್ಗಳಿಸಿದರು. ಮ್ಯಾಕ್ಸ್ವೆಲ್ ಅಜೇಯ 7 ರನ್ಗಳಿಸಿದರು.
ಸ್ಮಿತ್ ಹಾಗೂ ಗೌಸ್ ಸಿಡಿಲಬ್ಬರದ ಶತಕದ ನೆರವಿನಿಂದ ವಾಷಿಂಗ್ಟನ್ ಫ್ರೀಡಂ T20 ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ವಿಶ್ವದಾಖಲೆ ನಿರ್ಮಿಸಿತು. ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡ ಕೆಕೆಆರ್ ವಿರುದ್ಧ 262 ರನ್ಗಳ ಗುರಿಯನ್ನ ಬೆನ್ನಟ್ಟಿ ಗೆಲುವು ಸಾಧಿಸಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ 259 ರನ್ಗಳ ಗುರಿಯನ್ನ ಚೇಸ್ ಮಾಡಿ ಗೆದ್ದಿದೆ. ಇದು ಒಟ್ಟಾರೆ ಟಿ20ಯಲ್ಲಿ 3ನೇ ಗರಿಷ್ಠ ಚೇಸ್, ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ಚೇಸ್ ಆಗಿದೆ.
Highest Successful Run Chase: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತ ಚೇಸ್ ಮಾಡಿ ಚರಿತ್ರೆ ಸೃಷ್ಟಿಸಿದ ಸ್ಟೀವ್ ಸ್ಮಿತ್ ತಂಡ! ಪಂಜಾಬ್ ವಿಶ್ವದಾಖಲೆ ಉಡೀಸ್














