Last Updated:
ಸಸೆಕ್ಸ್ ತಂಡದ ಪರ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಆಡುತ್ತಿರುವ ಕ್ರೋಕೊಂಬ್ ಕೇವಲ 7 ದಿನಗಳ ಅಂತರದಲ್ಲಿ ಎರಡು ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಅಬ್ಬರಿಸಿದ್ದರು. ಅವರ ಈ ಭರ್ಜರಿ ಫಾರ್ಮ್ ಅನ್ನು ಗಮನಿಸಿದ ರಾಷ್ಟ್ರೀಯ ಆಯ್ಕೆಗಾರರು, ಅವರಿಗೆ ಏಕದಿನ ತಂಡದಲ್ಲಿ ಸ್ಥಾನ ನೀಡುವ ಮೂಲಕ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರು ಏಕದಿನ (ODI) ಮತ್ತು 3 ಟಿ20 ಅಂತರರಾಷ್ಟ್ರೀಯ ಪಂದ್ಯಗಳ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತಂಡವನ್ನು ಪ್ರಕಟಿಸಿದೆ. ಹ್ಯಾರಿ ಬ್ರೂಕ್ ನಾಯಕತ್ವದ ಏಕದಿನ ತಂಡದಲ್ಲಿ, ಇತ್ತೀಚೆಗೆ ಕೇವಲ 7 ದಿನಗಳ ಅಂತರದಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದು ಸಂಚಲನ ಮೂಡಿಸಿದ್ದ ಅಪಾಯಕಾರಿ ಬೌಲರ್ಗೆ ಅವಕಾಶ ನೀಡಲಾಗಿದೆ. ನಿಜ ಹೇಳಬೇಕೆಂದರೆ, 24 ವರ್ಷದ ವೇಗದ ಬೌಲರ್ ಹೆನ್ರಿ ಕ್ರೋಕೊಂಬ್ ಅವರಿಗೆ ಮೊದಲ ಬಾರಿಗೆ ಇಂಗ್ಲೆಂಡ್ ತಂಡದಿಂದ ಕರೆ ಬಂದಿದೆ.














