Hasanamba Festival: ನೀವು ಒಳ್ಳೆ ಕ್ರೀಡಾಪಟು ಆಗಿದ್ದರೆ ಇಲ್ಲಿದೆ ರಾಜ್ಯ ಮಟ್ಟದ ವೇದಿಕೆ; ಅರ್ಜಿ ಹಾಕಿ, ಗೆಲ್ಲೋಕೆ ತಯಾರಾಗಿ! | ಕ್ರೀಡಾ ಸುದ್ದಿ | ACTPnews

Rapid Read


Last Updated:

ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ–2026ರ ಅಂಗವಾಗಿ ಗ್ರಾಮೀಣ ಭಾಗದ ನಾಗರಿಕರಿಗಾಗಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತರು ಅಕ್ಟೋಬರ್ 5ರಿಂದ ಅಕ್ಟೋಬರ್ 11ರವರೆಗೆ ನೋಂದಣಿ ಮಾಡಿಕೊಳ್ಳಬಹುದು.

ಹಾಸನಾಂಬಾ ಜಾತ್ರೆ
ಹಾಸನಾಂಬಾ ಜಾತ್ರೆ

ಹಾಸನ: ಹಾಸನಾಂಬ ಹಾಗೂ ಸಿದ್ದೇಶ್ವರ ಗ್ರಾಮೀಣ ಜಾತ್ರಾ ಮಹೋತ್ಸವ–2026ರ ಅಂಗವಾಗಿ ಗ್ರಾಮೀಣ ಭಾಗದ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಭೆಗಳಿಗೆ ವೇದಿಕೆ (Stage) ಕಲ್ಪಿಸಲು ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಗ್ರಾಮೀಣ ಯುವಜನರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕ್ರೀಡೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮಹೋತ್ಸವದ ಅಂಗವಾಗಿ ನಡೆಯಲಿರುವ ಸ್ಪರ್ಧೆಗಳಲ್ಲಿ (Compitition) ಭಾಗವಹಿಸಲು ಆಸಕ್ತರಿಗೆ ಅಕ್ಟೋಬರ್ 5ರಿಂದ 11ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಮಟ್ಟದಿಂದ ಆರಂಭವಾಗಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದವರೆಗೆ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ.

ವೈಯಕ್ತಿಕ ವಿಭಾಗದಲ್ಲಿ ಓಟ, ಚದುರಂಗ, ಬ್ಯಾಡ್ಮಿಂಟನ್

ಕ್ರೀಡೋತ್ಸವದಲ್ಲಿ ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ವೈಯಕ್ತಿಕ ವಿಭಾಗದಲ್ಲಿ ಚೆಲುವಿನ ಓಟ, 100 ಮೀಟರ್, 200 ಮೀಟರ್, 400 ಮೀಟರ್ ಹಾಗೂ 1500 ಮೀಟರ್ ಓಟ, ಜೊತೆಗೆ ಚದುರಂಗ ಮತ್ತು ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿವೆ. ಹೀಗಾಗಿ ಓಟದ ಸ್ಪರ್ಧೆಗಳ ಜೊತೆಗೆ ಬುದ್ಧಿವಂತಿಕೆ ಹಾಗೂ ಕೌಶಲ್ಯ ಆಧಾರಿತ ಚದುರಂಗ, ಬ್ಯಾಡ್ಮಿಂಟನ್‌ಗೂ ಅವಕಾಶ ಕಲ್ಪಿಸಲಾಗಿದೆ.

ಕಬಡ್ಡಿಯಿಂದ ಖೋ-ಖೋವರೆಗೆ ಗುಂಪು ಆಟಗಳು

ಗುಂಪು ವಿಭಾಗದಲ್ಲೂ ಹಲವು ಜನಪ್ರಿಯ ಗ್ರಾಮೀಣ ಕ್ರೀಡೆಗಳನ್ನು ಆಯ್ಕೆ ಮಾಡಲಾಗಿದೆ. ಕಬಡ್ಡಿ, ಹಗ್ಗ ಜಗ್ಗಾಟ, ಕುಸ್ತಿ, ವಾಲಿಬಾಲ್ ಹಾಗೂ ಖೋ-ಖೋ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಹಾಗೂ ತಂಡ ಆಧಾರಿತ ಆಟಗಳ ಮೂಲಕ ಯುವಕರ ಪ್ರತಿಭೆಯನ್ನು ಗುರುತಿಸುವ ಉದ್ದೇಶ ಹೊಂದಲಾಗಿದೆ.

ಗ್ರಾಮದಿಂದ ಜಿಲ್ಲಾ ಮಟ್ಟದವರೆಗೆ ಸ್ಪರ್ಧೆ

ಈ ಕ್ರೀಡೋತ್ಸವದ ಪ್ರಮುಖ ವಿಶೇಷತೆಯೆಂದರೆ ಸ್ಪರ್ಧೆಗಳನ್ನು ಗ್ರಾಮ ಮಟ್ಟ, ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಹಂತ ಹಂತವಾಗಿ ಆಯೋಜಿಸಲಾಗುತ್ತಿದೆ. ಗ್ರಾಮ ಮಟ್ಟದಲ್ಲಿ ಪ್ರತಿಭೆ ತೋರಿಸುವ ಕ್ರೀಡಾಪಟುಗಳಿಗೆ ಮುಂದಿನ ಹಂತಗಳಿಗೆ ತೆರಳಲು ಅವಕಾಶ ಸಿಗಲಿದೆ. ಜಿಲ್ಲಾಮಟ್ಟದಲ್ಲಿ ವಿಜೇತರಾಗುವ ಕ್ರೀಡಾಪಟುಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಒಬ್ಬರಿಗೆ ಎರಡು ವಿಭಾಗಗಳಲ್ಲಿ ಮಾತ್ರ ಅವಕಾಶ

ಸ್ಪರ್ಧಾರ್ಥಿಗಳಿಗೆ ವಿಶೇಷ ನಿಯಮವನ್ನೂ ಪ್ರಕಟಿಸಲಾಗಿದೆ. ಒಬ್ಬ ವ್ಯಕ್ತಿ ಒಂದು ವೈಯಕ್ತಿಕ ಕ್ರೀಡೆ ಹಾಗೂ ಒಂದು ಗುಂಪು ಆಟದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ. ಹೀಗಾಗಿ ವೈಯಕ್ತಿಕ ವಿಭಾಗದಲ್ಲಿ ಒಂದು ಆಟ ಆಯ್ಕೆ ಮಾಡಿಕೊಂಡು, ಗುಂಪು ವಿಭಾಗದಲ್ಲಿ ಮತ್ತೊಂದು ಆಟದಲ್ಲಿ ಭಾಗವಹಿಸಬಹುದು.

ಅ.11ರವರೆಗೆ ನೋಂದಣಿ

ಇದನ್ನೂ ಓದಿ: Hasanamba Temple: ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ, ಈ ಬಾರಿಯ ವಿಶೇಷತೆಗಳೇನು ಗೊತ್ತಾ?

ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲು ಆಸಕ್ತರು ಅಕ್ಟೋಬರ್ 11ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಗ್ರಾಮೀಣ ಭಾಗದ ಯುವಕರು ಹಾಗೂ ಕ್ರೀಡಾ ಪ್ರತಿಭೆಗಳು ಈ ಅವಕಾಶವನ್ನು ಬಳಸಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಆಯೋಜಕರು ಕರೆ ನೀಡಿದ್ದಾರೆ. ನೋಂದಣಿ ಹಾಗೂ ಸ್ಪರ್ಧೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಪಿಡಿಒ, ಸಿಡಿಪಿಒ, ಇಒ ಅಥವಾ ಸಿಒ ಕಚೇರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಕ್ರೀಡೆಯತ್ತ ಆಸಕ್ತಿ ಹೊಂದಿರುವ ಯುವಕರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಈ ಕ್ರೀಡೋತ್ಸವ ಉತ್ತಮ ವೇದಿಕೆಯಾಗಲಿದೆ. ಹಾಸನಾಂಬ ಜಾತ್ರೆಯ ಸಂಭ್ರಮದ ನಡುವೆ ಕ್ರೀಡಾ ಕಣವೂ ಸಜ್ಜಾಗುತ್ತಿದ್ದು, ಗ್ರಾಮೀಣ ಪ್ರತಿಭೆಗಳು ಜಿಲ್ಲಾ ಮಟ್ಟದ ವೇದಿಕೆಯಲ್ಲಿ ಮಿಂಚಲು ಅವಕಾಶ ಪಡೆಯಲಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed