Hardik Pandya: ಕೆಕೆಆರ್ ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ಮುಂಬೈ ನಾಯಕ ಹಾರ್ದಿಕ್​​ಗೆ ಬಿಸಿಸಿಐ ಬಿಗ್​ ಶಾಕ್! ಕಾರಣ ಇಲ್ಲಿದೆ | ಕ್ರೀಡಾ ಸುದ್ದಿ | ACTPnews

ಹಾರ್ದಿಕ್ ಪಾಂಡ್ಯ


Last Updated:

ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅನುಚಿತವಾಗಿ ವರ್ತಿಸಿದ್ದಾರೆ. ಪರಿಣಾಮ ಹಾರ್ದಿಕ್ ಪಾಂಡ್ಯ ವಿರುದ್ಧ ಅಸಮಾಧಾನಗೊಂಡಿರುವ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ.

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

ಮುಂಬೈ ಇಂಡಿಯನ್ಸ್ (MI) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಐಪಿಎಲ್‌ (IPL) 2026 ರಿಂದ ಹೊರಬಿದ್ದಿದೆ. ಇದರ ನಡುವೆ ಮುಂಬೈ ತಂಡವು ತನ್ನ ಉಳಿದ ಲೀಗ್ (League) ಪಂದ್ಯಗಳನ್ನು ಆಡುತ್ತಿದೆ. ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅನುಚಿತವಾಗಿ ವರ್ತಿಸಿದ್ದಾರೆ. ಪರಿಣಾಮ ಹಾರ್ದಿಕ್ ಪಾಂಡ್ಯ ವಿರುದ್ಧ ಬಿಸಿಸಿಐ (BCCI) ಕಠಿಣ ಕ್ರಮ ಕೈಗೊಂಡಿದೆ. ಇದು ನಿಧಾನಗತಿಯ ಓವರ್ (Slow over) ರೇಟ್ ಪ್ರಕರಣ ಎಂದು ನೀವು ಭಾವಿಸುತ್ತಿದ್ದರೆ, ತಪ್ಪು. ಹಾರ್ದಿಕ್ ಪಾಂಡ್ಯ ಪಂದ್ಯದ ಸಮಯದಲ್ಲಿ ಮಾಡಬಾರದ ಕೆಲಸವನ್ನು ಮಾಡಿದ್ದಾರೆ.

ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಆಟಗಾರರು ಮತ್ತು ತಂಡದ ಅಧಿಕಾರಿಗಳಿಗೆ ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಅನ್ನು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಉಲ್ಲಂಘಿಸಿದ್ದಾರೆ. ಇದಕ್ಕಾಗಿ ಹಾರ್ದಿಕ್ ಪಾಂಡ್ಯ ಅವರಿಗೆ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಐಪಿಎಲ್‌ನಲ್ಲಿ ಇಂತಹ ಡಿಮೆರಿಟ್ ಪಾಯಿಂಟ್‌ಗಳು ಹೆಚ್ಚಾದರೆ, ಅವರು ಮುಂದಿನ ಪಂದ್ಯಗಳಿಂದ ನಿಷೇಧವನ್ನು ಎದುರಿಸಬೇಕಾಗುತ್ತದೆ.

ಹಾರ್ದಿಕ್ ಪಾಂಡ್ಯ ಮಾಡಿದ್ದೇನು?

ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ನೆಲದ ಉಪಕರಣಗಳು ಅಥವಾ ಫಿಕ್ಸ್ಚರ್‌ಗಳು ಮತ್ತು ಫಿಟ್ಟಿಂಗ್‌ಗಳನ್ನು ಅನುಚಿತವಾಗಿ ಬಳಸುವುದಕ್ಕೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಹಾರ್ದಿಕ್ ಪಾಂಡ್ಯ ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿದೆ. ಪಂದ್ಯದ ಎರಡನೇ ಇನ್ನಿಂಗ್ಸ್‌ನ 10 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಈ ಘಟನೆ ನಡೆದಿದೆ.

ಇದೇನಾ ಆಕ್ರೋಶಕ್ಕೆ ಕಾರಣ?

ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಅಸಹನೆ ತೋರಲು ಮುಂಬೈ ಫೀಲ್ಡರ್‌ಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಸ್ಪಷ್ಟ. ಆ ಓವರ್‌ಗೆ ಮುನ್ನ, ಮುಂಬೈ ಫೀಲ್ಡರ್‌ಗಳಾದ ದೀಪಕ್ ಚಾಹರ್ ಮತ್ತು ರಾಬಿನ್ ಮಿಂಜ್ ಅವರು ಕೆಕೆಆರ್ ಬ್ಯಾಟರ್ ರೋವ್‌ಮನ್ ಪೊವೆಲ್ ಸುಲಭ ಕ್ಯಾಚ್ ಅನ್ನು ಕೈಬಿಟ್ಟರು. ಪೊವೆಲ್ ಅವರ ಟಾಪ್-ಎಡ್ಜ್ ಕ್ಯಾಚ್ ಹಿಡಿಯಲು ಅವರಿಬ್ಬರೂ ಮುಂದಾಗದ ಕಾರಣ, ಚೆಂಡು ಬೌಂಡರಿ ಲೈನ್ ಬಳಿ ಅವರ ನಡುವೆ ಬಿತ್ತು. ಆ ಹೊತ್ತಿಗೆ, ಪೊವೆಲ್ ಕೇವಲ 14 ರನ್ ಗಳಿಸಿದ್ದರು. ಈ ಸುಲಭ ಕ್ಯಾಚ್ ಮಿಸ್ ಮಾಡಿಕೊಂಡ ಬಗ್ಗೆ ಪಾಂಡ್ಯ ತೀವ್ರ ನಿರಾಶೆಗೊಂಡರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports