Last Updated:
ನಟಿ ಪ್ರೀತಿ ಜಿಂಟಾ ಹನುಮಾನ್ ಅಂಶ್ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿದ್ದು, ಅಲ್ಲಿಂದಲೇ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ವಿಶಾಲ್ ಚತುರ್ವೇದಿ (Vishal Chaturvedi) ನಿರ್ದೇಶನದ ಹನುಮಾನ್ ಅಂಶ್ (Hanuman Ansh) ಸಿನಿಮಾ ಯಾವುದೇ ದೊಡ್ಡ ಪ್ರಚಾರದ ಸದ್ದಿಲ್ಲದೆ ಚಿತ್ರಮಂದಿರಗಳಿಗೆ ಕಾಲಿಟ್ಟಿತ್ತು. ಆದರೆ ಬಿಡುಗಡೆಯಾದ ಬಳಿಕ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಚರ್ಚೆ ಹೆಚ್ಚಾಗುತ್ತಿದ್ದು, ಇದೀಗ ಬಾಲಿವುಡ್ನ ಹಲವು ಸೆಲೆಬ್ರಿಟಿಗಳ ಮೆಚ್ಚುಗೆ ಕೂಡ ಚಿತ್ರಕ್ಕೆ ಸಿಗುತ್ತಿದೆ. ವರುಣ್ ಧವನ್ (Varun Dhawan) ಮತ್ತು ಆದಿತ್ಯ ಧರ್ ಬಳಿಕ ನಟಿ ಪ್ರೀತಿ ಜಿಂಟಾ (Preity Zinta) ಕೂಡ ಹನುಮಾನ್ ಅಂಶ್ ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.














