Last Updated:
ಹನುಮಾನ್ ಅಂಶ್ ಚಿತ್ರದ ಗಳಿಕೆ 50 ಕೋಟಿ ರೂಪಾಯಿ ಗಡಿ ದಾಟಿದ ಬೆನ್ನಲ್ಲೇ ನಿರ್ದೇಶಕ ವಿಶಾಲ್ ಚತುರ್ವೇದಿ ಎರಡನೇ ಭಾಗದ ಕೆಲಸ ಆರಂಭವಾಗಿರುವುದನ್ನು ಖಚಿತಪಡಿಸಿದ್ದಾರೆ.
ದೊಡ್ಡ ಸ್ಟಾರ್‌ಗಳ ಸಿನಿಮಾಗಳ ನಡುವೆ ಯಾವುದೇ ಸದ್ದು-ಗದ್ದಲವಿಲ್ಲದೆ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಚಿತ್ರವೊಂದು ಇದೀಗ ಬಾಕ್ಸಾಫೀಸ್‌ನಲ್ಲಿ (Box Office) ಭರ್ಜರಿ ಸದ್ದು ಮಾಡುತ್ತಿದೆ. ಆಧ್ಯಾತ್ಮಿಕ ಕಥಾಹಂದರದ ಹನುಮಾನ್ ಅಂಶ್ (Hanuman Ansh) ಸಿನಿಮಾ ಆರಂಭದಲ್ಲಿ ನಿಧಾನಗತಿಯ ಕಲೆಕ್ಷನ್ ಕಂಡಿದ್ದರೂ, ಪ್ರೇಕ್ಷಕರ ಬಾಯಿಂದ ಬಾಯಿಗೆ ಹರಡಿದ ಉತ್ತಮ ಪ್ರತಿಕ್ರಿಯೆಯಿಂದ ದಿನದಿಂದ ದಿನಕ್ಕೆ ಗಳಿಕೆ ಹೆಚ್ಚಿಸಿಕೊಂಡಿದೆ. ಇದೀಗ ಸಿನಿಮಾ 50 ಕೋಟಿ ರೂಪಾಯಿ ಗಡಿ ದಾಟಿರುವ ಬೆನ್ನಲ್ಲೇ ಚಿತ್ರದ ಸೀಕ್ವೆಲ್‌ಗೂ ಅಧಿಕೃತವಾಗಿ ಚಾಲನೆ ಸಿಕ್ಕಿದೆ.














