Last Updated:
ಆಗ್ರಾದ ಚಿತ್ರಮಂದಿರವೊಂದರಲ್ಲಿ ಪ್ರೇಕ್ಷಕರು ಚಪ್ಪಲಿ ಬಿಚ್ಚಿಟ್ಟು ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದು, ಸಿನಿಮಾ ಮತ್ತೊಮ್ಮೆ ಸುದ್ದಿಯಲ್ಲಿದೆ.
ಬಾಲಿವುಡ್‌ನ ಭಕ್ತಿಪ್ರಧಾನ ಸಿನಿಮಾ ಹನುಮಾನ್ ಅಂಶ್ (Hanuman Ansh) ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ವಿಶೇಷ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ಪ್ರದರ್ಶನದ ವೇಳೆ ಕೆಲವರು ಭಾವುಕರಾಗಿ ಕಣ್ಣೀರಿಟ್ಟರೆ, ಇನ್ನು ಕೆಲವರು ಭಕ್ತಿಯಲ್ಲಿ ತಲ್ಲೀನರಾಗಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದಾರೆ. ಇದೀಗ ಆಗ್ರಾದ ಚಿತ್ರಮಂದಿರವೊಂದರಲ್ಲಿ ಪ್ರೇಕ್ಷಕರು ಚಪ್ಪಲಿ ಬಿಚ್ಚಿಟ್ಟು ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದು, ಸಿನಿಮಾ ಮತ್ತೊಮ್ಮೆ ಸುದ್ದಿಯಲ್ಲಿದೆ.














