Halli Power Reloaded: ಮತ್ತೆ ಬರ್ತಿದೆ ‘ಹಳ್ಳಿ ಪವರ್’, ಪ್ರೋಮೋ ಮೇಕಿಂಗ್ ವಿಡಿಯೋ ಔಟ್! | | ACTPnews

ಅಕುಲ್ ಬಾಲಾಜಿ 'ಹಳ್ಳಿ ಪವರ್' ಮತ್ತೆ ಬರ್ತಿದೆ; ಪ್ರೋಮೋ ಮೇಕಿಂಗ್ ವಿಡಿಯೋ ಔಟ್!


Last Updated:

ಅಕುಲ್ ಬಾಲಾಜಿ ನಡೆಸಿಕೊಟ್ಟ ಹಳ್ಳಿ ಪವರ್ ಶೋ ಮತ್ತೆ ಬರ್ತಿದೆ. ಹಳ್ಳಿ ಪವರ್ ರೀಲೋಡೆಡ್ ಅಂತಲೇ ಇದಕ್ಕೆ ಹೆಸರು ಕೊಟ್ಟಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿದೆ. ಪ್ರೋಮೋ ಮೇಕಿಂಗ್ ವಿಡಿಯೋ ಕೂಡ ಮಜವಾಗಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.

ಅಕುಲ್ ಬಾಲಾಜಿ 'ಹಳ್ಳಿ ಪವರ್' ಮತ್ತೆ ಬರ್ತಿದೆ; ಪ್ರೋಮೋ ಮೇಕಿಂಗ್ ವಿಡಿಯೋ ಔಟ್!
ಅಕುಲ್ ಬಾಲಾಜಿ ‘ಹಳ್ಳಿ ಪವರ್’ ಮತ್ತೆ ಬರ್ತಿದೆ; ಪ್ರೋಮೋ ಮೇಕಿಂಗ್ ವಿಡಿಯೋ ಔಟ್!

ಹಳ್ಳಿ ಪವರ್ (Halli Power) ಮತ್ತೆ ಬರ್ತಿದೆ. ಈ ಸಲ ಇದಕ್ಕೆ ಹಳ್ಳಿ ಪವರ್ ರೀಲೋಡೆಡ್ (Halli Power Reloaded) ಅಂತಲೇ ಹೆಸರಿಟ್ಟಿದ್ದಾರೆ. ಇಲ್ಲಿವರೆಗೂ ಒಂದು ಚಿಕ್ಕ ಪ್ರೋಮೋ ಬರ್ತಾ ಇತ್ತು. ಆದರೆ, ಇದೀಗ ಅಕುಲ್ ಬಾಲಾಜಿ ಇರೋ ಪ್ರೋಮೋ ಶೂಟ್‌ನ ಮೇಕಿಂಗ್ (Promo Shoot Making) ಹೊರ ಬಂದಿದೆ. ಇದರಲ್ಲಿ ಅಕುಲ್ ಬಾಲಾಜಿ (Akul Balaji) ಒಂದಷ್ಟು ವಿಷಯ ಹೇಳಿದ್ದಾರೆ. ಇದರ ವಿವರ ಇಲ್ಲಿದೆ ಓದಿ.

ಹಳ್ಳಿ ಪವರ್ ರೀಲೋಡೆಡ್

ಹಳ್ಳಿ ಪವರ್ ಮತ್ತೆ ಬರ್ತಿದೆ. ಕಳೆದ ಸಲ ಇದು ಸಕ್ಸಸ್ ಆಗಿದೆ. ಮೊದಲ ಪ್ರಯತ್ನದಲ್ಲಿಯೇ ಇದು ಜನರ ಮನಸ್ಸನ್ನ ಗೆದ್ದಿದೆ. ಸಂಗೊಳ್ಳಿ ರಾಯಣ್ಣನ ಊರು ಸಂಗೊಳ್ಳಿಯಲ್ಲಿಯೇ ಹಳ್ಳಿ ಪವರ್ ಶೋ ನಡೆದಿತ್ತು.

Zee Kannada Akul Balaji Halli Power Reloaded Promo Making Video Released

ಜೀ ಕನ್ನಡದಲ್ಲಿ ಹಳ್ಳಿ ಪವರ್ ರೀಲೋಡೆಡ್

(ಚಿತ್ರ ಕೃಪೆ: ಜೀ ಕನ್ನಡ ಇನ್‌ಸ್ಟಾಗ್ರಾಮ್)

ಆದರೆ, ಸಲ ಎಲ್ಲಿ ನಡೆಯುತ್ತದೆ ಅನ್ನುವ ಕುತೂಹಲವೂ ಇದೆ. ಮತ್ತೊಮ್ಮೆ ಬೆಳಗಾವಿಗೆ ಬರ್ತೀವಿ ಅಂತ ಅಕುಲ್ ಬಾಲಾಜಿ ಮೇಕಿಂಗ್ ವಿಡಿಯೋದಲ್ಲಿ ಎಲ್ಲೂ ಹೇಳಿಲ್ಲ. ಆದರೆ, ಹಳ್ಳಿ ಪವರ್ ಮತ್ತೆ ಶುರು ಆಗುತ್ತಿದೆ. ಈ ಸಲ ರೀಲೋಡೆಡ್ ಅಂತಲೇ ಡೈಲಾಗ್ ಹೊಡೆದಿದ್ದಾರೆ.
ಜೀ ಕನ್ನಡದಲ್ಲಿ ಹಳ್ಳಿ ಪವರ್

ಹಳ್ಳಿ ಪವರ್ ರೀಲೋಡೆಡ್ ಈ ಸಲ ಜೀ ಕನ್ನಡದಲ್ಲಿಯೇ ಬರ್ತಿದೆ. ಆದರೆ, ಕಳೆದ ಸಲ ಇದು ಜೀ ಕನ್ನಡದ ಪವರ್ ಚಾನೆಲ್ ಅಲ್ಲಿಯೇ ಬರ್ತಿತ್ತು.

ಈ ಬಾರಿ ಇದು ಜೀ ಕನ್ನಡದಲ್ಲಿಯೇ ಬರ್ತಿದೆ. ಈಗಾಗಲೇ ಈ ಶೋದ ಅಕುಲ್ ಬಾಲಾಜಿ ಪ್ರೋಮೋ ಕೂಡ ಶೂಟ್ ಆಗಿದೆ. ಇದರ ಮೇಕಿಂಗ್ ಕೂಡ ರಿಲೀಸ್ ಆಗಿದೆ.

ಜೀ ಕನ್ನಡ ಪೇಜ್ ಅಲ್ಲಿ ಪ್ರೋಮೋ

ಈಗಾಗಲೇ ಹೇಳಿದ ಅಕುಲ್ ಬಾಲಾಜಿ ಪ್ರೋಮೋ ಮೇಕಿಂಗ್ ವಿಡಿಯೋ ಇನ್‌ಸ್ಟಾಗ್ರಾಮ್‌ನ ಜೀ ಕನ್ನಡ ಪೇಜ್ ಅಲ್ಲಿಯೇ ರಿಲೀಸ್ ಆಗಿದೆ.

Zee Kannada Akul Balaji Halli Power Reloaded Promo Making Video Released

ಹಳ್ಳಿ ಪವರ್ ಯಾವಾಗಿನಿಂದ ಶುರು

(ಚಿತ್ರ ಕೃಪೆ: ಜೀ ಕನ್ನಡ ಇನ್‌ಸ್ಟಾಗ್ರಾಮ್)

ಹಾಗೆ ಈ ಒಂದು ಶೋದ ಪ್ರೋಮೋ ಕೂಡ ರಿಲೀಸ್ ಆಗಿದೆ. ಇವೆರಡನ್ನು ನೋಡಿದರೆ, ಈ ಸಲ ಹಳ್ಳಿ ಪವರ್ ರೀಲೋಡೆಡ್ ವಿಶೇಷವಾಗಿಯೇ ಇದೆ ಅನಿಸುತ್ತಿದೆ.

ಹಳ್ಳಿ ಪವರ್ ಯಾವಾಗಿನಿಂದ ಶುರು

ಹಳ್ಳಿ ಪವರ್ ರೀಲೋಡೆಡ್ ಯಾವಾಗಿನಿಂದ ಶುರು ಅನ್ನುವ ಪ್ರಶ್ನೆ ಇದೆ. ಅದಕ್ಕೆ ಜೀ ಕನ್ನಡ ಈ ಪೋಮೋದಲ್ಲಿ ಒಂದು ವಿಷಯ ಬಿಟ್ಟುಕೊಟ್ಟಿದೆ.

ಅಕುಲ್ ಬಾಲಾಜಿ ಸಖತ್ ಶೋ

ಅಕುಲ್ ಬಾಲಾಜಿ ಅವರ ಈ ಹಿಂದಿನ ಹಳ್ಳಿ ಪವರ್ ಶೋ ವರ್ಕ್ ಆಗಿದೆ. ಸಂಗೊಳ್ಳಿಯ ಜನ ಇದನ್ನ ಮೆಚ್ಚಿಕೊಂಡಿದ್ದಾರೆ. ಅಷ್ಟೆ ಸಪೋರ್ಟ್ ಕೂಡ ಮಾಡಿದ್ದಾರೆ.

ಜನರು ಇದನ್ನ ಟಿವಿಯಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ. ಇಷ್ಟು ಬೇಗ ಮುಗೀತಾ ಅಂತಲೂ ಕೇಳಿದವರು ಇದ್ದಾರೆ. ಆದರೆ, ಇದೇ ಶೋ ಇದೀಗ ಹಳ್ಳಿ ಪವರ್ ರೀಲೋಡೆಡ್ ಅನ್ನುವ ಹೆಸರಲ್ಲಿಯೇ ಬರ್ತಿದೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports