Guinness World Record: ‘ಮುತ್ತು’ ಕೊಟ್ಟು ವಿಶ್ವದಾಖಲೆ ಬರೆದ ಜೋಡಿ! 30 ಸೆಕೆಂಡ್‌ನಲ್ಲಿ ಕೊಟ್ಟ ‘ಕಿಸ್’ ಎಷ್ಟು ಗೊತ್ತಾ? | ಟ್ರೆಂಡಿಂಗ್ ಸುದ್ದಿ | ACTPnews

ಮುತ್ತಿನಲ್ಲೇ ಗಿನ್ನೆಸ್ ದಾಖಲೆ ಬರೆದ ಜೋಡಿ


Last Updated:

Guinness World Record: ನೀವು ನಿಮ್ಮ ಹೆಂಡತಿಗೆ, ಗಂಡನಿಗೆ, ಪ್ರಿಯತಮೆಗೆ ಅಥವಾ ಪ್ರಿಯಕರನಿಗೆ ಎಷ್ಟು ಮುತ್ತು ಕೊಡ್ತೀರಾ? ಹೀಗಂತ ಕೇಳಿದ್ರೆ ಛೀ ಇದೆಂಥಾ ಪ್ರಶ್ನೆ ಅಂತ ಮೂಗು ಮುರಿಯಬಹುದು. ಆದರೆ ಇಲ್ಲೊಂದು ಜೋಡಿ ಮಡಿವಂತಿಕೆ ಬಿಟ್ಟು, ಎಲ್ಲರೆದುರು ಮುತ್ತು ಕೊಟ್ಟು ಕೊಟ್ಟೇ ವಿಶ್ವದಾಖಲೆ ಬರೆದಿದೆ!

ಮುತ್ತಿನಲ್ಲೇ ಗಿನ್ನೆಸ್ ದಾಖಲೆ ಬರೆದ ಜೋಡಿ
ಮುತ್ತಿನಲ್ಲೇ ಗಿನ್ನೆಸ್ ದಾಖಲೆ ಬರೆದ ಜೋಡಿ

ಬ್ರೆಜಿಲ್: ನೀವು ನಿಮ್ಮ ಹೆಂಡತಿಗೆ (Wife), ಗಂಡನಿಗೆ (Husband), ಪ್ರಿಯತಮೆಗೆ (Lover) ಅಥವಾ ಪ್ರಿಯಕರನಿಗೆ ಎಷ್ಟು ಮುತ್ತು (kisses) ಕೊಡ್ತೀರಾ? ಹೀಗಂತ ಕೇಳಿದ್ರೆ ಛೀ ಇದೆಂಥಾ ಪ್ರಶ್ನೆ ಅಂತ ಮೂಗು ಮುರಿಯಬಹುದು. ಮಡಿವಂತರು ಮಾಡೋಕೆ ಬೇರೆ ಕೆಲ್ಸ ಇಲ್ವಾ ಅಂತ ಗರಂ ಆಗಬಹುದು. ಆದರೆ ಇಲ್ಲೊಂದು ಜೋಡಿ ಮಡಿವಂತಿಕೆ ಬಿಟ್ಟು, ಎಲ್ಲರೆದುರು ಮುತ್ತು ಕೊಟ್ಟು ಕೊಟ್ಟೇ ವಿಶ್ವದಾಖಲೆ ಬರೆದಿದೆ! ಹೌದು, ಬ್ರೆಜಿಲ್‌ನ ಡಾಕ್ಟರ್ ದಂಪತಿ ಗಿನ್ನೆಸ್ ವಿಶ್ವ ದಾಖಲೆ (Guinness World Record) ಬರೆದಿದೆ. ಹಳೆಯ ರೆಕಾರ್ಡ್ ಬ್ರೇಕ್ ಮಾಡಿ, ಹೊಸ ರೆಕಾರ್ಡ್ ಸೆಟ್ ಮಾಡಿದ್ದಾರೆ!

ಕಿಸ್ ಕೊಟ್ಟು ವಿಶ್ವದಾಖಲೆ ಬರೆದ ಜೋಡಿ

ಬ್ರೆಜಿಲ್‌ನ ವೈದ್ಯ ಪ್ರೇಮಿಗಳಾದ 32 ವರ್ಷದ ರೆನಾಟೋ ಬೈಮಾ ಗೈಯಾ ಹಾಗೂ ಸ್ನೇಹಿತೆ, 33 ವರ್ಷದ ನಯಾರಾ ರೋಬರ್ಟಾ ರಿಬೀರೊ ಡಿ ಮರಿನ್ಸ್ ಮುತ್ತಿನಲ್ಲೇ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ವೃತ್ತಿಯಿಂದ ಇಬ್ಬರೂ ಡಾಕ್ಟರ್‌ಗಳಾಗಿದ್ದು, ಈ ಹಿಂದೆ ಕೊರೊನಾ ಸಮಯದಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಒಂದು ವರ್ಷದ ಅರ್ಧಕ್ಕೂ ಹೆಚ್ಚು ಕಾಲ ಪ್ರೀತಿಯಲ್ಲಿ ಇದ್ದಾರೆ. “ನಾವು ವಿಶ್ವದ ಶ್ರೇಷ್ಠ ದಂಪತಿ” ಎಂದು ನಂಬಿ ಈ ದಾಖಲೆ ಮಾಡಿದ್ದಾಗಿ ಹೇಳಿದ್ದಾರೆ.

ಕೇವಲ 30 ಸೆಕೆಂಡ್‌ನಲ್ಲಿ 195 ಬಾರಿ ಕಿಸ್!

ಜುಲೈ 6ರಂದು ಅಂತರರಾಷ್ಟ್ರೀಯ ಮುತ್ತು ದಿನದಂದು ಈ ಪ್ರಯತ್ನ ನಡೆಯಿತು. ರೆನಾಟೋ ಕೆನ್ನೆಗೆ ನಯಾರಾ ವೇಗವಾಗಿ ಮುತ್ತುಗಳನ್ನು ಕೊಡುತ್ತಿದ್ದರು. ನಯಾರಾ ಆನಂದದಿಂದ ನಗುತ್ತಿದ್ದರು. ಈ ಜೋಡಿ ಕೇವಲ ಅರ್ಧ ನಿಮಿಷ ಅಂದರೆ 30 ಸೆಕೆಂಡ್‌ಗಳಲ್ಲಿ 195 ಬಾರಿ ಮುತ್ತಿಟ್ಟು ಹೊಸ ದಾಖಲೆ ನಿರ್ಮಿಸಿದ್ದಾರೆ. ಉತ್ತಮ ಸಮನ್ವಯ, ಸಮಯದ ಸರಿಯಾದ ಬಳಕೆ ಮತ್ತು ವೇಗದಿಂದ ಈ ಸಾಧನೆ ಸಾಧ್ಯವಾಯಿತು. ಇದು ಸುಲಭವಲ್ಲ ಎಂದು ಇಬ್ಬರೂ ಹೇಳಿದ್ದಾರೆ.

ಈಗಾಗಲೇ ಹಲವು ದಾಖಲೆ ಬರೆದ ರೆನಾಟೋ

ರೆನಾಟೋ ಈಗಾಗಲೇ ಹಲವು ದಾಖಲೆಗಳನ್ನು ಮಾಡಿದ್ದಾರೆ. ಪುಸ್ತಕಗಳನ್ನು 6.68 ಸೆಕೆಂಡ್‌ನಲ್ಲಿ ಜೋಡಿಸಿ ಕೆಡವುವುದು, ಪುರುಷರಲ್ಲಿ ಅತಿ ಹೆಚ್ಚು ಕಾಲು ತಿರುಗಿಸುವುದು (210.66 ಡಿಗ್ರಿ) ಸೇರಿದಂತೆ ಅನೇಕ ದಾಖಲೆಗಳು ಅವರ ಹೆಸರಿನಲ್ಲಿವೆ. ಈಗ ಬ್ರೆಜಿಲ್‌ನ ಅತಿ ಹೆಚ್ಚು ಗಿನ್ನಿಸ್ ದಾಖಲೆಗಳನ್ನು ಹೊಂದಿದ ವ್ಯಕ್ತಿ ಎನಿಸಿದ್ದಾರೆ. ನಯಾರಾ ಹೆಸರನ್ನೂ ದಾಖಲೆ ಪುಸ್ತಕದಲ್ಲಿ ಸೇರಿಸುವುದು ಇವರ ಉದ್ದೇಶವಾಗಿತ್ತು.

ಮತ್ತೊಂದು ಮುತ್ತಿನ ದಾಖಲೆ ಬರೆಯುವ ಬಯಕೆ

ರೆನಾಟೋ ಟೇಕ್ವಾಂಡೋ ಬ್ಲ್ಯಾಕ್ ಬೆಲ್ಟ್ ಹೊಂದಿದ್ದಾರೆ. “ಗೆಲ್ಲುವುದಕ್ಕೆ ನಾನು ಅಡಿಕ್ಟ್” ಎನ್ನುತ್ತಾರೆ. ADHD ಇದ್ದರೂ ಎಲ್ಲವನ್ನೂ ಸಾಧಿಸಬಹುದು ಎಂದು ತೋರಿಸುವುದು, ಮೂಳೆ ಕಶೇರುಕೆ ದಾನಿ ಎಂಬ ಸಂದೇಶ ಹರಡುವುದು ಅವರ ಗುರಿ. ಮುಂದೆ ಒಂದು ನಿಮಿಷದಲ್ಲಿ ಅತಿ ಹೆಚ್ಚು ಮುತ್ತುಗಳ ದಾಖಲೆ ಮುರಿಯುವ ಯೋಜನೆಯಿದೆ. ಈ ವಿಶೇಷ ದಾಖಲೆ ಜನರನ್ನು ಆಕರ್ಷಿಸಿದೆ. ಪ್ರೀತಿ ಮತ್ತು ಸಮನ್ವಯದಿಂದ ಯಾವುದೇ ಸಾಧನೆ ಸಾಧ್ಯ ಎಂದು ತೋರಿಸಿದೆ.

ಮುತ್ತಿನಲ್ಲಿ ಹಿಂದಿನ ವಿಶ್ವ ದಾಖಲೆ ಯಾರ ಹೆಸರಿನಲ್ಲಿತ್ತು?

ಹಿಂದಿನ ದಾಖಲೆ ಬ್ರಿಟನ್‌ನ ಜೋಡಿ ಜೋಶುವಾ ಸಾಂಡರ್ಸ್ ಮತ್ತು ಜೆನ್ನಿ ಟ್ರಾಯ್  ಎಂಬುವರ ಹೆಸರಿನಲ್ಲಿತ್ತು. ಈ ಜೋಡಿ 1 ನಿಮಿಷದಲ್ಲಿ 146 ಮುತ್ತುಗಳನ್ನು ಕೊಟ್ಟಿತ್ತು. ಅದಾದ ಬಳಿಕ 1 ನಿಮಿಷದಲ್ಲಿ ಅತಿ ಹೆಚ್ಚು ಮುತ್ತುಗಳ ದಾಖಲೆ ಬರೆದಿದ್ದು ಜಪಾನ್‌ನ (ಚೆರಿ ಯೋಶಿತಾಕೆ ಮತ್ತು ಕುಮಿಕೋ ಶಿರಟೋರಿ ಎಂಬ ಜೋಡಿ. 2020ರಲ್ಲಿ ಇವರು 1 ನಿಮಿಷದಲ್ಲಿ 277 ಕಿಸ್ ಕೊಟ್ಟು ವಿಶ್ವ ದಾಖಲೆ ಬರೆದಿದ್ದರು. ಇದೀಗ 30 ನಿಮಿಷದಲ್ಲಿ ದಾಖಲೆ ಬರೆದ ಬ್ರೆಜಿಲ್ ದಂಪತಿ, ಮುಂದೆ 1 ನಿಮಿಷದ ದಾಖಲೆಯನ್ನೂ ಮುರಿಯುವ ಯೋಜನೆಯಲ್ಲಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed