Last Updated:
ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡದ ಕ್ವಾಲಿಫೈಯರ್-2ರ ಚೇಸಿಂಗ್ನಲ್ಲಿ ಸಾಯಿ ಸುದರ್ಶನ್ ಮತ್ತೆ ಹಿಟ್ ವಿಕೆಟ್ ಆದರು. ಇದರೊಂದಿಗೆ ಸಾಯಿ ಸುದರ್ಶನ್ ಐಪಿಎಲ್ನ ಅತ್ಯಂತ ದುರದೃಷ್ಟಕರ ಬ್ಯಾಟರ್ ಎನಿಕೊಂಡರು. ಐಪಿಎಲ್ನಲ್ಲಿ ಸಾಯಿ ಸುದರ್ಶನ್ ಹಿಟ್ ವಿಕೆಟ್ ಆಗಿರುವುದು ಇದೇ ಮೊದಲಲ್ಲ.
ಐಪಿಎಲ್ 2026 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಕ್ವಾಲಿಫೈಯರ್- 2 ಪಂದ್ಯದ ವೇಳೆ ಸಾಯಿ ಸುದರ್ಶನ್ ಮತ್ತೆ ಹಿಟ್ ವಿಕೆಟ್ ಆದರು. ಸತತ ಎರಡು ನಾಕೌಟ್ ಪಂದ್ಯಗಳಲ್ಲಿಹಿಟ್ ವಿಕೆಟ್ ಆಗಿ ಔಟಾದ ಸಾಯಿ ಸುದರ್ಶನ್ ವಿಚಿತ್ರ ಕಾಕತಾಳೀಯ ಘಟನೆಗಳಲ್ಲಿ ಒಂದನ್ನು ಸೃಷ್ಟಿಸಿದರು. ಕ್ವಾಲಿಫೈಯರ್- 1 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೂ ಇದೇ ರೀತಿ ಔಟಾಗಿದ್ದರು. ಇದಾದ ಕೇವಲ ಎರಡು ದಿನಗಳ ಅಂತರದಲ್ಲಿ ಗುಜರಾತ್ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಮತ್ತೊಮ್ಮೆ ಅದ್ಭುತ ಇನ್ನಿಂಗ್ಸ್ ಅಂತ್ಯ ಕಂಡರು.
ಪ್ಲೇಆಫ್ನಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಸುದರ್ಶನ್ ವಿಚಿತ್ರ ಹಿಟ್ ವಿಕೆಟ್ ಔಟಾಗಿದ್ದರು. ಈಗ ರಾಜಸ್ಥಾನ ವಿರುದ್ಧವೂ ಸಾಯಿ ಸುದರ್ಶನ್ ಆಫ್ ಸೈಡ್ನಲ್ಲಿ ಸ್ಕ್ವೇರ್ ಹಿಂದೆ ಶಾಟ್ ಹೊಡೆಯುವ ಭರದಲ್ಲಿ ಮತ್ತೆ ಹಿಟ್ ವಿಕೆಟ್ ಔಟಾದರು. ಈ ಅಸಾಮಾನ್ಯ ಔಟಾಗುವಿಕೆಯು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಸತತ ನಾಕೌಟ್ ಪಂದ್ಯಗಳಲ್ಲಿ ಒಂದೇ ರೀತಿಯಲ್ಲಿ ಸಾಯಿ ಸುದರ್ಶನ್ ಔಟಾಗುವ ಮೂಲಕ ಬೇಡದ ದಾಖಲೆಯನ್ನು ಮಾಡಿದ್ದಾರೆ. ಸಾಯಿ ಸುದರ್ಶನ್ ಔಟಾದ ರೀತಿ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.
May 29, 2026 11:31 PM IST
GT vs RR: ಸಾಯಿ ಸುದರ್ಶನ್ ಐಪಿಎಲ್ನ ಅತ್ಯಂತ ದುರದೃಷ್ಟಕರ ಬ್ಯಾಟರ್? ಮಾಡಿದ ತಪ್ಪನ್ನು ಎಷ್ಟು ಬಾರಿ ಮಾಡ್ತೀಯಾ ಗುರು ಎಂದ ಫ್ಯಾನ್ಸ್!













