Last Updated:
Rahul Gandhi Meeting: ಕಟು ಮಾತುಗಳು ಪರ್ಯಾಯವಾಗಿ ಆತನ ಎದೆಯನ್ನು ಗಾಸಿಗೊಳಿಸಿದ್ದವು. ಅವಮಾನದ ಜ್ವಾಲೆ ತಡೆಯಲಾಗಲಿಲ್ಲ. ನಾಯಕರ ಸಮ್ಮುಖದಲ್ಲೇ ಆತ ಕುರ್ಚಿಯಿಂದ ದಿಢೀರ್ ಎದ್ದು ನಿಂತು ಹೊರನಡೆದಾಗ ಇಡೀ ಸಭೆ ಶಾಕ್ ಆಯಿತು. ಮುಂದೆ ಆತ ಏನು ಮಾಡಲಿದ್ದಾನೆ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ರಾಹುಲ್ ಸಮ್ಮುಖದ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿತ್ತು. ಹೈಕಮಾಂಡ್ ಕಣ್ಣುಗಳು ಆತನ ಮೇಲಿದ್ದವು. ಇದ್ದಕ್ಕಿದ್ದಂತೆ ಸೋಲಿನ ಚಾಟಿ ಬೀಸಿತು. ಸ್ವಂತ ಕೋಟೆಯನ್ನೇ ಕಾಯದವನು ನೀನು ಎಂಬ ಕಟು ಮಾತುಗಳು ಪರ್ಯಾಯವಾಗಿ ಆತನ ಎದೆಯನ್ನು ಗಾಸಿಗೊಳಿಸಿದ್ದವು ಎನ್ನಲಾಗಿದೆ. ಅವಮಾನದ ಜ್ವಾಲೆ ತಡೆಯಲಾಗಲಿಲ್ಲ. ನಾಯಕರ ಸಮ್ಮುಖದಲ್ಲೇ ಆತ ಕುರ್ಚಿಯಿಂದ ದಿಢೀರ್ ಎದ್ದು ನಿಂತು ಹೊರನಡೆದಾಗ ಇಡೀ ಸಭೆ ಶಾಕ್ ಆಯಿತು. ಮುಂದೆ ಆತ ಏನು ಮಾಡಲಿದ್ದಾನೆ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಪಂಜಾಬ್ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ನಲ್ಲಿ ಉಂಟಾದ ಅಸಮಾಧಾನ ಇದೀಗ ಬಹಿರಂಗ ಬಂಡಾಯದ ರೂಪ ಪಡೆದುಕೊಂಡಿದೆ. ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಪಕ್ಷದ ನಾಯಕ ರಾಹುಲ್ ಸಮ್ಮುಖದಲ್ಲೇ ನಡೆದ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಕಾಂಗ್ರೆಸ್ನ ಒಳಜಗಳ ಮತ್ತೊಮ್ಮೆ ಬೀದಿಗೆ ಬಿದ್ದಿದೆ. ಸಭೆಯ ಮಧ್ಯದಲ್ಲೇ ಪಂಜಾಬ್ ವಿಧಾನಸಭೆಯ ಪ್ರತಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಿಜ್ವಾ ಎದ್ದು ಹೊರ ನಡೆದಿರುವ ಘಟನೆ ಪಕ್ಷದೊಳಗಿನ ಅಸಮಾಧಾನ ಎಷ್ಟು ಗಂಭೀರವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಮಾಡಲಾಗದ ಹಿನ್ನೆಲೆ ಪಂಜಾಬ್ ಕಾಂಗ್ರೆಸ್ ನಾಯಕರ ಸಭೆಯನ್ನು ರಾಹುಲ್ ಗಾಂಧಿ ಕರೆದಿದ್ದರು. ಚುನಾವಣಾ ಸೋಲಿನ ಕಾರಣಗಳು, ಪಕ್ಷದ ಸಂಘಟನೆ ದುರ್ಬಲವಾಗಿರುವುದು ಹಾಗೂ ನಾಯಕರ ನಡುವಿನ ಒಳಜಗಳಗಳ ಬಗ್ಗೆ ಚರ್ಚೆ ನಡೆಯಬೇಕಾಗಿತ್ತು. ಆದರೆ ಸಭೆ ಆರಂಭವಾದ ಕೆಲವೇ ಹೊತ್ತಿನಲ್ಲಿ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ ಆರಂಭಿಸಿದ್ದರಿಂದ ವಾತಾವರಣ ಗೊಂದಲಮಯವಾಯಿತು.
ಸಭೆಯಲ್ಲಿ ಕೆಲ ನಾಯಕರು ಚುನಾವಣಾ ನಿರ್ವಹಣೆಯಲ್ಲಿ ಗಂಭೀರ ದೋಷಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ರಾಜ್ಯ ಘಟಕದ ನಾಯಕರ ವಿರುದ್ಧವೇ ಅಸಮಾಧಾನ ಹೊರಹಾಕಿದರು. ಇದೇ ವೇಳೆ, ತನ್ನ ಅಭಿಪ್ರಾಯಕ್ಕೆ ಸೂಕ್ತ ಗೌರವ ಸಿಗುತ್ತಿಲ್ಲ ಎಂದು ಅಸಮಾಧಾನಗೊಂಡ ಪ್ರತಾಪ್ ಸಿಂಗ್ ಬಾಜ್ವಾ ಸಭೆಯಿಂದ ಎದ್ದು ಹೊರ ನಡೆದಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಎದುರಲ್ಲೇ ಈ ಘಟನೆ ನಡೆದಿರುವುದು ಕಾಂಗ್ರೆಸ್ ಹೈಕಮಾಂಡ್ಗೆ ಮುಜುಗರ ಉಂಟುಮಾಡಿದೆ.
ಪಂಜಾಬ್ ಕಾಂಗ್ರೆಸ್ನಲ್ಲಿ ಹಲವು ವರ್ಷಗಳಿಂದ ಗುಂಪುಗಾರಿಕೆ ಮುಂದುವರಿದಿರುವುದು ಹೊಸ ವಿಷಯವಲ್ಲ. ವಿವಿಧ ನಾಯಕರು ತಮ್ಮದೇ ಪ್ರಭಾವ ವಲಯ ನಿರ್ಮಿಸಿಕೊಂಡಿದ್ದು, ಚುನಾವಣಾ ಸಮಯದಲ್ಲಿ ಈ ಒಳಜಗಳಗಳು ಹೆಚ್ಚು ತೀವ್ರವಾಗುತ್ತವೆ. ಹಿಂದೆ ಕೂಡ ಪಂಜಾಬ್ ಕಾಂಗ್ರೆಸ್ನಲ್ಲಿ ಏಕತೆ ತೋರಿಸಲು ರಾಹುಲ್ ಗಾಂಧಿ ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ನಾಯಕತ್ವದ ಪೈಪೋಟಿ ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳು ಪಕ್ಷದ ಒಗ್ಗಟ್ಟಿಗೆ ಅಡ್ಡಿಯಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರತಾಪ್ ಸಿಂಗ್ ಬಾಜ್ವಾ ಪಂಜಾಬ್ ಕಾಂಗ್ರೆಸ್ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದು, ಈಗ ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದಾರೆ. ಅವರು ಹಲವು ಬಾರಿ ಪಕ್ಷದ ಒಳಗಿನ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೂ, ಈ ಬಾರಿ ಸಭೆಯಿಂದಲೇ ಹೊರ ನಡೆದಿರುವುದು ದೊಡ್ಡ ರಾಜಕೀಯ ಸಂದೇಶವಾಗಿ ಕಾಣುತ್ತಿದೆ. ರಾಜಕೀಯ ವಲಯದಲ್ಲಿ ಈಗ “ಪಂಜಾಬ್ ಕಾಂಗ್ರೆಸ್ನಲ್ಲಿ ನಾಯಕತ್ವದ ಸಂಘರ್ಷ ತಾರಕಕ್ಕೇರಿದೆಯೇ? ಎಂಬ ಪ್ರಶ್ನೆ ಚರ್ಚೆಯಾಗುತ್ತಿದೆ. ಒಂದು ಕಡೆ ಆಮ್ ಆದ್ಮಿ ಪಕ್ಷ ಸರ್ಕಾರವನ್ನು ಎದುರಿಸಬೇಕಿರುವ ಕಾಂಗ್ರೆಸ್, ಮತ್ತೊಂದೆಡೆ ತನ್ನೊಳಗಿನ ಬಿಕ್ಕಟ್ಟನ್ನೇ ನಿಯಂತ್ರಿಸಲು ಹರಸಾಹಸ ಪಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.
ರಾಹುಲ್ ಗಾಂಧಿ ಸಭೆಯಲ್ಲಿ ಪಕ್ಷದ ನಾಯಕರಿಗೆ “ಒಗ್ಗಟ್ಟಿನಿಂದ ಕೆಲಸ ಮಾಡಬೇಕು” ಎಂಬ ಸಂದೇಶ ನೀಡಲು ಯತ್ನಿಸಿದರೂ, ಸಭೆಯಲ್ಲೇ ಬಹಿರಂಗ ಅಸಮಾಧಾನ ಸ್ಫೋಟಗೊಂಡಿರುವುದು ಹೈಕಮಾಂಡ್ಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಮತ್ತೆ ಬಲಿಷ್ಠವಾಗಬೇಕಾದರೆ ಮೊದಲು ಒಳಜಗಳ ನಿಲ್ಲಬೇಕು ಎಂಬ ಅಭಿಪ್ರಾಯ ಪಕ್ಷದ ಕಾರ್ಯಕರ್ತರಲ್ಲೂ ಕೇಳಿಬರುತ್ತಿದೆ.
May 29, 2026 11:09 PM IST













