GT vs RR: ಐಪಿಎಲ್ ಕ್ವಾಲಿಫೈಯರ್- 2 ರದ್ದಾದರೆ, ಫೈನಲ್‌ಗೆ ಎಂಟ್ರಿ ಕೊಡುವ ಟೀಮ್ ಯಾವುದು? | ಕ್ರೀಡಾ ಸುದ್ದಿ | ACTPnews

ಶುಭ್​ಮನ್ ಗಿಲ್ - ರಿಯಾನ್ ಪರಾಗ್


Last Updated:

ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಲಿದೆ. ಇದರಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ಮುನ್ನಡೆಯುತ್ತದೆ. ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಶುಭ್​ಮನ್ ಗಿಲ್ - ರಿಯಾನ್ ಪರಾಗ್
ಶುಭ್​ಮನ್ ಗಿಲ್ – ರಿಯಾನ್ ಪರಾಗ್

ಐಪಿಎಲ್ (IPL) 2026 ರ ಫೈನಲ್‌ (Final) ಗಾಗಿ ರೇಸ್ (Race) ಈಗ ಅಂತಿಮ ಪಂದ್ಯವನ್ನು ತಲುಪಿದೆ. ಈ ವರ್ಷದ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ (Champion) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಯಾರು ಎದುರಿಸುತ್ತಾರೆ ಎಂಬುದನ್ನು ನಿರ್ಧರಿಸುವ ಸಮಯ ಬಂದಿದೆ. ಫೈನಲ್ ತಲುಪಲು ಗುಜರಾತ್ ಟೈಟಾನ್ಸ್ (GT) ಮತ್ತು ರಾಜಸ್ಥಾನ ರಾಯಲ್ಸ್ (RR) ತಂಡಗಳು (Teams) ಮುಖಾಮುಖಿಯಾಗುತ್ತಿವೆ. ಪ್ಲೇಆಫ್ (Playoff) ಸುತ್ತಿನ ಎರಡನೇ ಕ್ವಾಲಿಫೈಯರ್ ಪಂದ್ಯ ಗುಜರಾತ್ ಮತ್ತು ರಾಜಸ್ಥಾನ ನಡುವೆ ನಡೆಯಲಿದೆ. ಗೆದ್ದ ತಂಡ ನೇರವಾಗಿ ಫೈನಲ್‌ಗೆ ಮುನ್ನಡೆಯುತ್ತದೆ. ಸೋತ ತಂಡವು ಟೂರ್ನಿಯಿಂದ ಹೊರಗುಳಿಯಲಿದೆ. ಆದರೆ ಈ ಪಂದ್ಯ ಮಳೆ (Rain) ಯಿಂದಾಗಿ ರದ್ದಾದರೆ, ಯಾವ ತಂಡ ಫೈನಲ್‌ಗೆ ಮುನ್ನಡೆಯುತ್ತದೆ? ಎಂಬ ಚರ್ಚೆ ನಡೆಯುತ್ತಿದೆ.

ಐಪಿಎಲ್ ಫೈನಲ್ ಪಂದ್ಯವು ಮೇ 31 ರ ಭಾನುವಾರ ನಡೆಯಲಿದೆ. ಹಾಲಿ ಚಾಂಪಿಯನ್ ಆರ್​​ಸಿಬಿ ತಂಡವು ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ಫೈನಲ್ ಪಂದ್ಯದಲ್ಲಿ ಆರ್​​ಸಿಬಿ ತಂಡ ಗುಜರಾತ್ ಅಥವಾ ರಾಜಸ್ಥಾನವನ್ನು ಎದುರಿಸಲಿದೆ. ಫೈನಲ್ ತಲುಪಲು, ಈ ಎರಡೂ ತಂಡಗಳು ಮೇ 29 ರಂದು ಕ್ವಾಲಿಫೈಯರ್ 2 ರಲ್ಲಿ ಮುಖಾಮುಖಿಯಾಗಲಿವೆ. ಮಳೆ ಅಥವಾ ಯಾವುದೇ ಇತರ ಕಾರಣದಿಂದಾಗಿ ಪಂದ್ಯ ರದ್ದಾದರೆ, ಯಾವುದೇ ಮೀಸಲು ದಿನವಿರುವುದಿಲ್ಲ. ಅಂತಹ ಸಂದರ್ಭದಲ್ಲಿ, ಐಪಿಎಲ್ ನಿಯಮಗಳ ಆಧಾರದ ಮೇಲೆ ಪಂದ್ಯವನ್ನು ನಿರ್ಧರಿಸಲಾಗುತ್ತದೆ.

ಫೈನಲ್ ತಲುಪುವುದು ಯಾವ ತಂಡ?

ಗುಜರಾತ್ ಮತ್ತು ರಾಜಸ್ಥಾನ ನಡುವಿನ ಕ್ವಾಲಿಫೈಯರ್-2 ಪಂದ್ಯವು ಮೇ 29 ರ ಶುಕ್ರವಾರದಂದು ಮುಲ್ಲನ್‌ಪುರದ (ನ್ಯೂ ಚಂಡೀಗಢ) ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಯಾವುದೇ ಸಂದರ್ಭದಲ್ಲಿ ಈ ಪಂದ್ಯದಲ್ಲಿ ಒಂದೇ ಒಂದು ಚೆಂಡನ್ನು ಆಡದಿದ್ದರೆ, ಅಂಪೈರ್‌ಗಳು ಮೊದಲು ಸೂಪರ್ ಓವರ್ ಸಾಧ್ಯತೆಯನ್ನು ಪರಿಶೀಲಿಸುತ್ತಾರೆ. ಇದು ವಿಜೇತರನ್ನು ನಿರ್ಧರಿಸುತ್ತದೆ.

ಪಂದ್ಯದ ದಿನದಂದು ಹವಾಮಾನ ಹೇಗಿರುತ್ತದೆ?

ಪಂದ್ಯಕ್ಕೆ ಹವಾಮಾನ ನಿಜವಾಗಿಯೂ ಬೆದರಿಕೆ ಹಾಕುತ್ತಿದೆಯೇ? ಉತ್ತರ ಇಲ್ಲ. ಮೇ 28, ಗುರುವಾರ ಮತ್ತು ಮೇ 29, ಶುಕ್ರವಾರ ಬೆಳಿಗ್ಗೆ ನಡುವೆ ನ್ಯೂ ಚಂಡೀಗಢ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದಕ್ಕಾಗಿ ಆರೆಂಜ್ ಅಲರ್ಟ್ ನೀಡಲಾಗಿದೆ. ಇದಾದ ನಂತರ, ಶುಕ್ರವಾರ ಮತ್ತು ರಾತ್ರಿಯಿಡೀ ಆಕಾಶವು ಸ್ಪಷ್ಟವಾಗಿರುತ್ತದೆ. ಮಳೆಯ ನಿರೀಕ್ಷೆಯಿಲ್ಲ. ಸಂಜೆ ತಾಪಮಾನವು 35 ಡಿಗ್ರಿಯಿಂದ 28 ಡಿಗ್ರಿಗೆ ಇಳಿಯುತ್ತದೆ.

ಉಭಯ ತಂಡಗಳ ದಾಖಲೆ

ಐಪಿಎಲ್ 2026 ರಲ್ಲಿ ಗುಜರಾತ್ ಮತ್ತು ರಾಜಸ್ಥಾನ ತಂಡಗಳು ಲೀಗ್ ಹಂತದಲ್ಲಿ ಈಗಾಗಲೇ ಎರಡು ಬಾರಿ ಮುಖಾಮುಖಿಯಾಗಿದ್ದು, 1-1 ಸಮಬಲ ಸಾಧಿಸಿವೆ. ಅಹಮದಾಬಾದ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ 6 ರನ್‌ಗಳಿಂದ ಗೆದ್ದಿತು. ಮುಂದಿನ ಪಂದ್ಯವನ್ನು ರಾಜಸ್ಥಾನದ ತವರು ಮೈದಾನ ಜೈಪುರದಲ್ಲಿ ಆಡಲಾಯಿತು. ಈ ಪಂದ್ಯವನ್ನು ಗುಜರಾತ್ ಟೈಟಾನ್ಸ್ 77 ರನ್‌ಗಳಿಂದ ಬೃಹತ್ ಗೆಲುವು ಸಾಧಿಸಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed