Gramayana Movie: ಮುದ್ದೆ ಮುರಿದ ಹಂಗೆ ಮುದ್ದಿಸಿ ತಿಂದೆ ಈ ಜೀವವನ್ನೇ! ವಿನಯ್-ಮೇಘಾ ಪ್ರೀತಿ ತುಂಬಿದ ಹಾಡು ರಿಲೀಸ್ | | ACTPnews

Vinay Rajkumar Megha Shetty Graamaayana Movie Latest Song Updates


ಏನೇ ಹೇಳು ಕುಸುಮ…

ಗ್ರಾಮಾಯಣ ಚಿತ್ರ ಹೆಸರೇ ಹೇಳುವಂತೆ ಗ್ರಾಮೀಣ ಸೊಗಡಿನ ಚಿತ್ರವೇ ಆಗಿದೆ. ವಿನಯ್ ರಾಜ್‌ಕುಮಾರ್ ಅವರಿಗೆ ಇಲ್ಲಿ ಮೇಘಾ ಶೆಟ್ಟಿ ಜೋಡಿ ಆಗಿದ್ದಾರೆ. ಕುಸುಮ ಅನ್ನೋ ರೋಲ್ ಅನ್ನೆ ಇಲ್ಲಿ ಮಾಡಿದ್ದಾರೆ.
ಸರಳ ಪದಗಳ ಚೆಂದದ ಸಾಹಿತ್ಯ

ನಾಯಕಿ ಕುಸುಮ ಮೇಲೇನೆ ಇಲ್ಲೊಂದು ಹಾಡು ಇದೆ. “ಏನೇ ಹೇಳು ಕುಸುಮ” ಅಂತ ಇದು ಸಾಗುತ್ತದೆ. ಪ್ರಮೋದ್ ಮರವಂತೆ ಬರೆದಿರೋ ಈ ಹಾಡನ್ನ ನಿಹಾಲ್ ತಾವ್ರೋ ಮತ್ತು ಶಶಿ ಕಲ್ಲೂರ್ ಹಾಡಿದ್ದಾರೆ.

ಪೂರ್ಣಚಂದ್ರ ತೇಜಸ್ವಿ

ಗ್ರಾಮಾಯಾಣ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಕೊಟ್ಟಿದ್ದಾರೆ. ಎಲ್ಲ ಹಾಡುಗಳು ವಿಶೇಷವಾಗಿಯೇ ಇವೆ. ಪ್ರತಿ ಹಾಡಿನಲ್ಲೂ ಹೊಸತನ ಇದೆ.

ಸರಳ ಪದಗಳ ಚೆಂದದ ಸಾಹಿತ್ಯ

ಸಂಗೀತ ಮತ್ತು ಸಾಹಿತ್ಯ ಎರಡೂ ಈ ಹಾಡಿನಲ್ಲಿ ತುಂಬಾನೆ ಚೆನ್ನಾಗಿ ಹೊಂದಿಕೊಂಡಿವೆ. ಸರಳ ಪದಗಳು ಇಲ್ಲಿ ಶ್ರೀಮಂತವಾಗಿಯೇ ಕೇಳಿಸುತ್ತವೆ.

ಸಂಗೀತದಲ್ಲಿ ಆ ಶಕ್ತಿ ಇದೆ. ಹಳ್ಳಿಯ ಹುಡುಗ ಮತ್ತು ಹುಡುಗಿ ಪ್ರೀತಿಯಲ್ಲಿ ಬಿದ್ದರೆ, ಅವರ ಪ್ರೀತಿ ಹೇಗಿರುತ್ತದೆ ಅನ್ನೊದು ಇಲ್ಲಿ ಹೆಚ್ಚು ಇಂಟ್ರಸ್ಟಿಂಗ್ ಅನಿಸುತ್ತದೆ.

ಹಾಡಿನ ಸಾಲುಗಳು…

ಏನೇ ಹೇಳು ಕುಸುಮ…

ಕುಂತರು ನಿಂತರು ನೀನೆ ಕಣೆ..

ಮುದ್ದೆ ಮುರಿದ ಹಂಗೆ

ಮುದ್ದಿಸಿ ತಿಂದೆ ಈ ಜೀವವನೆ..

ಈ ಒಂದಷ್ಟು ಸಾಲುಗಳಲ್ಲಿಯೇ ಸುಮಾರು ವಿಚಾರಗಳಿವೆ. ನಾಯಕಿಯ ಹೆಸರು ಇಲ್ಲಿದೆ. ಕುಸುಮ ಮೇಲೆ ನಾಯಕನ ಪ್ರೀತಿ ಅದೆಷ್ಟು ಇದೆ ಅನ್ನೋದು ತಿಳಿಯುತ್ತದೆ.

ಇದರ ಜೊತೆಗೆ ಗ್ರಾಮೀಣ ಭಾಗದ ಮುದ್ದೆ ವಿಚಾರ ಮತ್ತು ಹೋಲಿಕೆನೂ ಇಲ್ಲಿದೆ. “ಮುದ್ದಿಸಿ ತಿಂದೆ ಈ ಜೀವವನೆ” ಅನ್ನೋದು ಪ್ರೀತಿಸುವ ಕುಸುಮಳ ಪ್ರೀತಿಯ ಕಾಟ ಇನ್ನೆಷ್ಟು ಅನ್ನೊದು ಹೇಳುತ್ತದೆ.

Vinay Rajkumar Megha Shetty Graamaayana Movie Latest Song Updates

ವಿನಯ್-ಮೇಘಾ ಪ್ರೀತಿ ತುಂಬಿದ ಹಾಡು ರಿಲೀಸ್
ಇದು ಲಿರಿಕಲ್ ವಿಡಿಯೋ

ಗ್ರಾಮಾಯಾಣ ಚಿತ್ರದ ಈ ಕುಸುಮ ಹಾಡಿನ ಲಿರಿಕಲ್ ವಿಡಿಯೋ ಮಾತ್ರ ರಿಲೀಸ್ ಆಗಿದೆ. ಇದರಲ್ಲಿ ಬಳಕೆ ಮಾಡಿರೋ ಫೋಟೋಗಳು ಅಷ್ಟೆ ಚೆಂದ ಇವೆ.

ಈ ಚಿತ್ರದ ಹಾಡುಗಳು ವಿಶೇಷವಾಗಿವೆ. ಲಿರಿಕಲ್ ವ್ಯಾಲ್ಯೂ ಮತ್ತು ಮ್ಯೂಸಿಕಲ್ ವ್ಯಾಲ್ಯೂ ಇರೋ ಗೀತೆಗಳೆ ಆಗಿವೆ. ಗ್ರಾಮೀಣ ಸೊಗಡಗಿನ ಈ ಚಿತ್ರ ನಿಂತು ಹೋಗಿತ್ತು. ಆದರೆ, ಮತ್ತೆ ಶುರು ಆಗಿ ಈಗ ರಿಲೀಸ್ ಹಂತಕ್ಕೆ ಬಂದಿದೆ.

ಡೈರೆಕ್ಟರ್ ಮೊದಲ ಸಿನಿಮಾ

ದೇವನೂರುಚಂದ್ರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ. ಇದರಲ್ಲಿ ಒಂದು ಒಳ್ಳೆ ಕತೆ ಹೇಳಿದ್ದಾರೆ ಅನ್ನುವ ಮಾತು ಇವೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಕ್ಯಾಮರಾವರ್ಕ್ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed