Last Updated:
ಗ್ರಾಮಾಯಣ ಸಿನಿಮಾದ ಶೋ ಸ್ಟಾಪ್ ಆಗುತ್ತಾ? ಸದ್ಯ ಇರೋ ವಿವಾದ ಏನು? ನ್ಯೂಸ್ -18 ಕನ್ನಡ ಡಿಜಿಟಲ್ ಗೆ ನಿರ್ಮಾಪಕ ಲಹರಿ ವೇಲು ಹೇಳೋದು ಏನು? ಆ ವಿವರ ಇಲ್ಲಿದೆ ಓದಿ.
ಗ್ರಾಮಾಯಣ ಚಿತ್ರಕ್ಕೆ (Graamaayana Movie) ಎರಡು ಸಲ ಮುಹೂರ್ತ ಆಗಿದೆ. ಮೊದಲ ಸಲ ನಿರ್ಮಾಪಕ ಎನ್. ಲಕ್ಷ್ಮೀನರಸಿಂಹ ಮೂರ್ತಿ ಅವರು ಈ ಚಿತ್ರಕ್ಕೆ ಮುಹೂರ್ತ ಮಾಡಿದರು. ಆದರೆ, ಈ ಚಿತ್ರದ ನಿರ್ಮಾಪಕ ಎನ್. ಲಕ್ಷ್ಮೀನರಸಿಂಹ ಮೂರ್ತಿ ಹಾಗೂ ಡೈರೆಕ್ಟರ್ ದೇವನೂರು ಚಂದ್ರು (Director Devanuru Chandru) ನಡುವೆ ಏನೋ ಮನಸ್ಥಾಪ ಬಂತು. ಹಾಗಾಗಿಯೇ ಈ ಚಿತ್ರ ನಿಂತೆ ಹೋಯಿತು. ಆದರೆ, ಮುಂದೆ ಕೆಲವು ದಿನಗಳಲ್ಲಿ ನಿರ್ಮಾಪಕ ಎನ್. ಲಕ್ಷ್ಮೀನರಸಿಂಹ ಮೂರ್ತಿ ಅವರು ತೀರಿ ಹೋದರು. ಆದರೆ, ಈ ಚಿತ್ರದ ಎಲ್ಲ ಹಕ್ಕನ್ನು ನಿರ್ಮಾಪಕ ಎನ್. ಲಕ್ಷ್ಮೀನರಸಿಂಹ ಮೂರ್ತಿ (Producer N. Lakshminarasimha Murthy) ಅವರ ಪತ್ನಿ ಲತಾ ಶ್ರೀ ಮೂರ್ತಿ ಅವರು ದೇವನೂರು ಚಂದ್ರು ಅವರಿಗೆ ಹಸ್ತಾಂತರಿಸಿದರು. ಮುಂದೆ ಏನೆಲ್ಲ ಆಯಿತು? ಚಿತ್ರದ ನಿರ್ಮಾಪಕ ಲಹರಿ ವೇಲು ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಹೇಳಿದ್ದೇನು ಅನ್ನೋದು ಇಲ್ಲಿದೆ ಓದಿ.
ನಿರ್ಮಾಪಕ ಲಹರಿ ವೇಲು ನ್ಯೂಸ್-18 ಕನ್ನಡಕ್ಕೆ ಹೇಳಿದ್ದೇನು?
(ಚಿತ್ರ ಕೃಪೆ: ಲಹರಿ ವೇಲು ಇನ್‌ಸ್ಟಾಗ್ರಾಮ್)
ಹೆಚ್ಚು ಕಡಿಮೆ ಎರಡು ವರ್ಷ ಈ ಚಿತ್ರದ ಮೇಲೆ ಕೆಲಸ ಆಗಿದೆ. ಜುಲೈ-3 ರಂದು ಈ ಚಿತ್ರ ತೆರೆಗೂ ಬಂದಿದೆ. ಅಷ್ಟರಲ್ಲಿಯೇ ಇದೀಗ ಗ್ರಾಮಾಯಣ ಚಿತ್ರದ ಮೊದಲ ನಿರ್ಮಾಪಕ ಎನ್. ಲಕ್ಷ್ಮೀನರಸಿಂಹ ಮೂರ್ತಿ ಅವರ ಪುತ್ರಿ ಮತ್ತು ಪುತ್ರ ಕೋರ್ಟ್ ಮೆಟ್ಟಿಲೇರಿದ್ದಾರೆ.
ಗ್ರಾಮಾಯಣ ಚಿತ್ರದ ಸರ್ವ ಹಕ್ಕನ್ನ ನಮ್ಮ ತಾಯಿ ಲತಾ ಅವರು ನಮ್ಮ ಸಮ್ಮತಿ ಇಲ್ಲದೆ ಹಸ್ತಾಂತರಿಸಿದ್ದಾರೆ ಅಂತಲೇ ಮಕ್ಕಳಾದ 18 ವರ್ಷದ ಎಲ್. ಮನೋಹರ್ ಕೃಷ್ಣ ಮತ್ತು 10 ವರ್ಷದ ಕುಮಾರಿ ಎಲ್. ಸಂಸ್ಕೃತಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ತಾಯಿ ‘ಅಸೈನ್ಮೆಂಟ್ ಅಗ್ರಿಮೆಂಟ್’ ರಹಸ್ಯ ಒಪ್ಪಂದ ಮೂಲಕ ಈ ಹಕ್ಕು ಮಾರಿದ್ದಾರೆ. ತಮಗೆ ಸಿಗಬೇಕಾದ ಹಣದಿಂದ ವಂಚಿತರಾಗಿದ್ದೇವೆ ಅಂತಲೇ ಇವರು ಕೋರ್ಟ್ ಗೆ ಹೋಗಿದ್ದಾರೆ ಅನ್ನುವ ವಿಷಯವನ್ನ ಸಿನಿ ಬಜ್ ವರದಿ ಮಾಡಿದೆ.
ಏನಿದು ಗ್ರಾಮಾಯಣ ಚಿತ್ರದ ರಾಮಾಯಣ
(ಚಿತ್ರ ಕೃಪೆ: ವಿನಯ್ ರಾಜ್‌ಕುಮಾರ್ ಇನ್‌ಸ್ಟಾಗ್ರಾಮ್)
ಆದರೆ, ಗ್ರಾಮಾಯಣ ಚಿತ್ರ ಟೇಕ್ ಓವರ್ ಮಾಡಿಕೊಂಡ ಲಹರಿ ವೇಲು ಅವರು ಈ ವಿಚಾರವಾಗಿ ಮಾತನಾಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಇವರು ಏನ್ ಹೇಳಿದರು ಅನ್ನೊದು ಇಲ್ಲಿದೆ ಓದಿ.
ನಮ್ಮ ಚಿತ್ರಕ್ಕೆ ಇಲ್ಲಿವರೆಗೂ ಏನೂ ತೊಂದರೆ ಆಗಿಯಲ್ಲ. ಆ ರೀತಿ ಯಾವುದೇ ಪೇಪರ್ಸ್ ಬಂದಿಲ್ಲ. ನಮ್ಮ ಲೀಗಲ್ ಟೀಮ್ ಇದನ್ನ ನೋಡಿಕೊಳ್ಳುತ್ತದೆ ಅಂತಲೇ ಗ್ರಾಮಾಯಣ ಚಿತ್ರದ ನಿರ್ಮಾಪಕ ಲಹರಿ ವೇಲು ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka













