Last Updated:
ವಿಚ್ಛೇದನ, ರಹಸ್ಯ ಮದುವೆ ಸೇರಿದಂತೆ ಹಲವು ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಇದೀಗ ಗೋವಿಂದ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ.
ಬಾಲಿವುಡ್ ನಟ ಹಾಗೂ ಮಾಜಿ ಸಂಸದ ಗೋವಿಂದ (Govinda) ವೈಯಕ್ತಿಕ ಜೀವನದ ಕುರಿತಾದ ವದಂತಿಗಳು ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿವೆ. ವಿಚ್ಛೇದನ, ರಹಸ್ಯ ಮದುವೆ ಸೇರಿದಂತೆ ಹಲವು ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಇದೀಗ ಗೋವಿಂದ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ. ತಮ್ಮ ಮತ್ತು ಕುಟುಂಬದ ಕುರಿತು ಸುಳ್ಳು, ಮಾನಹಾನಿಕರ ಮಾಹಿತಿಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.














