Last Updated:
ಕರ್ನಾಟಕ ಸರ್ಕಾರ 2ನೇ ಪಿಯುಸಿ Passed Freshers ಗೆ KSEAB ಫಲಿತಾಂಶದ ಆಧಾರದ ಮೇಲೆ DigiLocker ಮೂಲಕ QR Code ಇರುವ ಡಿಜಿಟಲ್ TC ನೀಡಲು ಆದೇಶಿಸಿದೆ
ಬೆಂಗಳೂರು: 2ನೇ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ (Students) ಕ್ರಾಂತಿಕಾರಿ ಸಿಹಿ ಸುದ್ದಿ! ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಇನ್ನು ಮುಂದೆ 2ನೇ ಪಿಯುಸಿ (2nd Puc) ಉತ್ತೀರ್ಣರಾದ “Passed Freshers” ವಿದ್ಯಾರ್ಥಿಗಳಿಗೆ KSEAB ಫಲಿತಾಂಶ ದತ್ತಾಂಶದ ಆಧಾರದ ಮೇಲೆ DigiLocker ಮೂಲಕ “ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ” (Digital TC) QR Code ಸಹಿತ ವಿತರಿಸಲಾಗುತ್ತದೆ!
ದಿನಾಂಕ: 16-07-2025ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ 16ನೇ UIDIC ಸಭೆ ನಿರ್ಣಯದಂತೆ ವಿದ್ಯಾರ್ಥಿಗಳ ಆಧಾರ್ ನವೀಕರಣಕ್ಕಾಗಿ “Universal Client” ತಂತ್ರಾಂಶ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದ್ದು, ದಾಖಲೆಗಳ ನೈಜತೆಯನ್ನು ಆನ್‌ಲೈನ್ ಮೂಲಕ ಪರಿಶೀಲಿಸಿ TC ವಿತರಿಸಲು ತೀರ್ಮಾನಿಸಲಾಗಿದೆ.
ದಾಖಲಾತಿ ಇನ್ನು ಸುಲಭ
ಈ ಡಿಜಿಟಲ್ TC ವ್ಯವಸ್ಥೆಯ ಪ್ರಯೋಜನಗಳು ಏನೆಂದರೆ QR Code ಇರುವ ಡಿಜಿಟಲ್ TC ಮೂಲಕ ವಿಶ್ವವಿದ್ಯಾಲಯಗಳು, ಆಧಾರ್ ಕೇಂದ್ರಗಳು ತಕ್ಷಣ ನೈಜತೆ ಪರಿಶೀಲಿಸಬಹುದು. ನಕಲಿ ದಾಖಲೆಗಳ ಭೀತಿ ಇಲ್ಲ! ಶುಲ್ಕ ಬಾಕಿ ಮುಂತಾದ ಅನಾವಶ್ಯಕ ಕಾಲಂಗಳನ್ನು ತೆಗೆದು ಪ್ರಕ್ರಿಯೆ ಸರಳಗೊಳಿಸಲಾಗಿದೆ. ಫಲಿತಾಂಶ ಪ್ರಕಟವಾದ ತಕ್ಷಣ DigiLocker ನಲ್ಲಿ TC ಸಿದ್ಧವಾಗುವುದರಿಂದ ಕಾಲೇಜಿಗೆ ಅಲೆದಾಡದೆ ಉನ್ನತ ಶಿಕ್ಷಣ ಪ್ರವೇಶಾತಿ ಸುಲಭವಾಗಲಿದೆ. ರಾಜ್ಯದ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಈ ಆದೇಶ ಅನ್ವಯಿಸಲಿದ್ದು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕರು ಮತ್ತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಈ ಆದೇಶ ಜಾರಿಗೊಳಿಸಲಿದ್ದಾರೆ.
Bangalore [Bangalore],Bangalore,Karnataka













