ಕೆ. ದೀಪನ್ ಲಿಂಗೇಶ್ ತಮ್ಮ ಮೊದಲ ಮೂರು ಎಸೆತಗಳಲ್ಲಿ ಕೆ. ರಾಜ್‌ಕುಮಾರ್, ಶ್ಯಾಮ್ ಸುಂದರ್ ಮತ್ತು ಜೆ. ಕೌಶಿಕ್ ಅವರನ್ನು ಡಕ್ ಔಟ್ ಮಾಡಿದರು, ರಾಜ್‌ಕುಮಾರ್ ಮತ್ತು ಶ್ಯಾಮ್ ಸುಂದರ್ ಇಬ್ಬರೂ ಕ್ಯಾಚ್ ಔಟ್ ಆದರೆ ಜೆ. ಕೌಶಿಕ್ ಅವರನ್ನು ಬೌಲ್ಡ್ ಮಾಡಿದರು. ಕೆ. ದೀಪನ್ ಲಿಂಗೇಶ್ ಅದ್ಭುತ ಸ್ಪೆಲ್ ಮಾಡಿದ ನಂತರ, ಮಣಿಮಾರನ್ ಸಿದ್ಧಾರ್ಥ್ 4ನೇ ಓವರ್‌ನಲ್ಲಿ ತಿರುಚ್ಚಿಗೆ ಮತ್ತೊಂದು ಆಘಾತ ನೀಡಿದರು. ಆ ಓವರ್‌ನಲ್ಲಿ ಸಿದ್ಧಾರ್ಥ್ ಇಬ್ಬರು ತಿರುಚ್ಚಿ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. ಸಿದ್ಧಾರ್ಥ್ 4 ವಿಕೆಟ್, ಲಿಂಗೇಶ್ 3 ವಿಕೆಟ್ ಪಡೆದು ತಿರುಚ್ಚಿಯನ್ನ 99ಕ್ಕೆ ಆಲೌಟ್ ಮಾಡಲು ನೆರವಾದರು.













