Last Updated:
ಬೃಂದಾವಿಹಾರಿ ಸಿನಿಮಾದ ಹುಬ್ಬಳ್ಳಿ ಪ್ರೀ-ರಿಲೀಸ್ ಇವೆಂಟ್ ಭರ್ಜರಿ ಆಗಿಯೇ ಪ್ಲಾನ್ ಆಗಿದೆ. ಸತತ 4 ಗಂಟೆಯ ಈ ಒಂದು ಕಾರ್ಯಕ್ರಮ ನಡೆಯುತ್ತಿದೆ. ಗಣೇಶ್ ಮತ್ತು ದೇವಿಕಾ ಭಟ್ ಇಲ್ಲಿ ಪರ್ಫಾರ್ಮ್ ಮಾಡುತ್ತಿದ್ದಾರೆ. ಕಾಮಿಡಿ ಸ್ಕಿಟ್ ಕೂಡ ಇವೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿವೆ ಓದಿ.
ಹುಬ್ಬಳ್ಳಿಯಲ್ಲಿ (Hubballi) ಬೃಂದಾವಿಹಾರಿ ಚಿತ್ರದ (Brindavihari Movie) ದೊಡ್ಡ ಕಾರ್ಯಕ್ರಮವೇ ಪ್ಲಾನ್ ಆಗಿದೆ. ಸತತ ಸುಮಾರು ನಾಲ್ಕು ಗಂಟೆಯ ಕಾರ್ಯಕ್ರಮ ಇದಾಗಿದೆ. ಸಂಜೆ 6 ಗಂಟೆಗೆ ಶುರು ಆಗುವ ಈ ಪ್ರೀ-ರಿಲೀಸ್ ಇವೆಂಟ್ ಅಲ್ಲಿ ಹಾಡು-ಡ್ಯಾನ್ಸು, ಕಾಮಿಡಿ ಸ್ಕಿಟ್ ಹೀಗೆ ಎಲ್ಲವನ್ನು ಪ್ಲಾನ್ ಮಾಡಿದ್ದಾರೆ. ಬೃಂದಾವಿಹಾರಿ ಸಿನಿಮಾ (Brindavihari Movie) ಅದೆಷ್ಟು ಕಲರ್‌ಫುಲ್ ಆಗಿದಿಯೋ ಈ ಕಾರ್ಯಕ್ರಮವು ಅಷ್ಟೆ ಕಲರ್‌ಪುಲ್ ಆಗಿರುತ್ತದೆ. ನೆಹರು ಮೈದಾನದಲ್ಲಿ ಈ ಪ್ರೀ-ರಿಲೀಸ್ ಇವೆಂಟ್ (Pre Release Event) ನಡೀತಿದೆ. ಇದರ ಇನ್ನಷ್ಟು ಅಧಿಕೃತ ವಿವರ ಇಲ್ಲಿದೆ ಓದಿ.
ಬೃಂದಾವಿಹಾರಿ ಪ್ರೀ-ರಿಲೀಸ್ ಇವೆಂಟ್ ನಾಲ್ಕು ಗಂಟೆ ಇರುತ್ತದೆ. ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ತಂಡ ಇಲ್ಲಿ ನೃತ್ಯ ಪ್ರದರ್ಶನ ಇರುತ್ತದೆ. ಬೃಂದಾವಿಹಾರಿ ಹಾಡಿಗೇನೆ ಇವರು ಡ್ಯಾನ್ಸ್ ಮಾಡಲಿದ್ದಾರೆ.
4 ಗಂಟೆ ಕಾರ್ಯಕ್ರಮ
(ಚಿತ್ರ ಕೃಪೆ: ಬೃಂದಾವಿಹಾರಿ ಟೀಮ್)
ಹಾಸ್ಯ ಕಲಾವಿದರಾದ ಜಗ್ಗಪ್ಪ ಹಾಗೂ ಮಂಜು ಪಾವಗಡ ಇಲ್ಲಿ ಕಾಮಿಡಿ ಸ್ಕಿಟ್ ಮಾಡ್ತಿದ್ದಾರೆ. ಇಲ್ಲಿ ಇನ್ನೂ ಒಂದು ವಿಶೇಷ ಇದೆ. ಅದೇನು ಗೊತ್ತಾ? ಹೌದು, ಗಣಿ ಇಲ್ಲಿ ಪರ್ಫಾಮೆನ್ಸ್ ಕೊಡ್ತಿದ್ದಾರೆ.
ಬೃಂದಾವಿಹಾರಿ ಚಿತ್ರದಲ್ಲಿ ಸುಂದರವಾದ ಹಾಡುಗಳಿವೆ. ಚೆಂದದ ಮ್ಯೂಸಿಕ್ ಇದೆ. ಎರಡೂ ಇರೋ ಈ ಚಿತ್ರದಲ್ಲಿ ದೇವಿಕಾ ಭಟ್ ಹಾಗೂ ಗಣಿ ಜೋಡಿ ಮೋಡಿ ಮಾಡುತ್ತಿದೆ.
ಬೃಂದಾವಿಹಾರಿ ಚಿತ್ರದ ಈ ಪ್ರೀ-ರಿಲೀಸ್ ಇವೆಂಟ್ ಸಂಜೆ 6 ಗಂಟೆ ಹೊತ್ತಿಗೆ ಶುರು ಆಗುತ್ತದೆ. ಹೆಚ್ಚು ಕಡಿಮೆ ರಾತ್ರಿ 10 ಗಂಟೆ ವರೆಗೂ ಇದು ನಡೆಯುತ್ತದೆ.
ಈ ಒಂದು ಕಾರ್ಯಕ್ರಮಕ್ಕೆ ಬೃಂದಾವಿಹಾರಿ ಚಿತ್ರ ತಂಡ ಆಗಮಿಸುತ್ತಿದೆ. ಕುರಿತು ಪ್ರತಾಪ್, ಗಿಲ್ಲಿ ನಟ, ಜಗಪ್ಪ, ರಂಗಾಯಣ ರಘು, ದೇವಿಕಾ ಭಟ್, ಗೋಲ್ಡನ್ ಸ್ಟಾರ್ ಗಣೇಶ್, ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜು, ರಂಗಾಯಣ ರಘು, ಸಾಧು ಕೋಕಿಲ ಸೇರಿದಂತೆ ಇನ್ನು ಅನೇಕರು ಆಗಮಿಸುತ್ತಿದ್ದಾರೆ.
ಗಣಿ-ದೇವಿಕಾ ಭಟ್ ಡಾನ್ಸ್
(ಚಿತ್ರ ಕೃಪೆ: ಬೃಂದಾವಿಹಾರಿ ಟೀಮ್)
ಹುಬ್ಬಳ್ಳಿಯ ಪ್ರೀ-ರಿಲೀಸ್ ಇವೆಂಟ್ ಅಲ್ಲಿ ಚಿತ್ರದ 6 ನೇ ಹಾಡು ರಿಲೀಸ್ ಆಗುತ್ತಿದೆ. ಈಗಾಗಲೇ ಐದು ಹಾಡು ರಿಲೀಸ್ ಆಗಿವೆ. ಈ ಹಾಡುಗಳಲ್ಲಿ ಎಲ್ಲವೂ ಬಹುತೇಕ ಜನರ ಹೃದಯ ಗೆದ್ದಿವೆ.
ಅಬ್ದುಲ್ ಹೇಶಮ್ ವಹಾಬ್ ಅವರ ಸಂಗೀತ ಹಿಟ್ ಆದರೆ ಆಯಿತು. ಸಿನಿಮಾ ಹಿಟ್ ಅನ್ನುವ ನಂಬಿಕೆ ಇದೆ. ಈ ಬೃಂದಾವಿಹಾರಿ ಚಿತ್ರದ ವಿಚಾರದಲ್ಲೂ ಹಾಡುಗಳು ಚೆನ್ನಾಗಿ ಬಂದಿವೆ. ಜನರ ಮೆಚ್ಚುಗೆಯನ್ನು ಇವು ಪಡೆದುಕೊಂಡಿವೆ.
ಅದ್ಭುಲ್ ಹೇಶಮ್ ವಹಾಬ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದ ಈ ಚಿತ್ರದ ಹಾಡುಗಳಿಗೆ ಬೇರೆಯದ್ದೇ ಹೊಳಪು ನೀಡಿವೆ ಅಂತಲೇ ಹೇಳಬಹುದು.














