Last Updated:
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬೃಂದಾವಿಹಾರಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ದಸರಾ ಹಬ್ಬದ ಸಮಯದಲ್ಲಿಯೇ ಈ ಚಿತ್ರ ತೆರೆ ಕಾಣುತ್ತಿದೆ. ಜೈಲರ್-2 ಚಿತ್ರದ ಸಮಯದಲ್ಲಿಯೇ ಈ ಸಿನಿಮಾ ಬರ್ತಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿನಯದ ಬೃಂದಾವಿಹಾರಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಚಿತ್ರ ದಸರಾ ಹಬ್ಬದ ಸಂದರ್ಭದಲ್ಲಿಯೇ ರಿಲೀಸ್ ಆಗುತ್ತಿದೆ. ಹಾಗಾಗಿಯೇ ಈ ಸಡಗರದಲ್ಲಿ ಗಣೇಶ್ ಹಬ್ಬ ಅನ್ನು ಹಾಗೆ ಈ ಚಿತ್ರ ಬರ್ತಿದೆ. ಡೈರೆಕ್ಟರ್ ಶ್ರೀನಿವಾಸ ರಾಜು (Srinivas Raju) ಈ ಸಿನಿಮಾ ಡೈರೆಕ್ಷನ್ ಮಾಡಿದ್ದಾರೆ. ಕೃಷ್ಣಂ ಪ್ರಣಯ ಸಖಿ ಚಿತ್ರ ಆದ್ಮೇಲೆ ಗಣೇಶ್ (Ganesh) ಮತ್ತು ಶ್ರೀನಿವಾಸ್ ರಾಜು ಈ ಬೃಂದಾವಿಹಾರಿ ಚಿತ್ರ (Brindhavihari Movie) ಮಾಡಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.














