Last Updated:
ಗೋಲ್ಡನ್ ಸ್ಟಾರ್ ಗಣೇಶ್ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ಸಡಗರದಲ್ಲಿ ಇವರ ಎರಡು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ್ಯತೆ ಇದೆ. ಈ ಸಿನಿಮಾಗಳು ಒಂದೇ ತಿಂಗಳಲ್ಲಿಯೇ ಎರಡು ವಾರದ ಅಂತರದಲ್ಲಿಯೇ ರಿಲೀಸ್ ಅನ್ನುವ ಸುದ್ದಿನೂ ಇದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ಈ ವರ್ಷ 48 ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ಹೊತ್ತಲ್ಲಿ ಒಂದು ಸುದ್ದಿ ಹೊರ ಬಂದಿದೆ. ಇದನ್ನ ಅಧಿಕೃತವಾಗಿಯೇ ಜನ್ಮ ದಿನದಂದೇ ಅನೌನ್ಸ್ ಮಾಡ್ತಾರೆ ಅನ್ನುವ ಮಾಹಿತಿನೂ ಇದೆ. ಆದರೆ, ಅಸಲಿಗೆ ಈ ವಿಷಯ ಏನು ಅಂತ ಬಂದ್ರೆ, ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳು (Movies) ಬರ್ತಿವೆ. ಒಂದೇ ತಿಂಗಳಲ್ಲಿಯೇ ಇವು ರಿಲೀಸ್ ಆಗುತ್ತಿವೆ. ಈ ಎರಡೂ ಸಿನಿಮಾಗಳ (Two Movies) ಒಂದು ಸ್ಟೋರಿ ಇಲ್ಲಿದೆ ಓದಿ.
ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ ಜೀವನದಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾ ಮಹತ್ವದ ಸಿನಿಮಾನೇ ಆಗಿದೆ. ಈ ಚಿತ್ರ ಗಣೇಶ್ ಅವರಿಗೆ ದೊಡ್ಡ ಗೆಲುವು ತಂದು ಕೊಡ್ತು.
ಈ ಸಿನಿಮಾ ಆದ್ಮೇಲೆ ಹೆಚ್ಚು ಕಡಿಮೆ ಎರಡು ವರ್ಷದಿಂದ ಗಣೇಶ್ ಅವರ ಯಾವುದೇ ಚಿತ್ರವೂ ಬಂದಿಲ್ಲ. ಆದರೆ, ಈ ಚಿತ್ರದ ಬಳಿಕ ಗಣೇಶ್ ನಾಲ್ಕು ಸಿನಿಮಾಗಳನ್ನ ಒಪ್ಪಿದ್ದಾರೆ. ಆ ನಾಲ್ಲು ಚಿತ್ರಗಳಲ್ಲಿ ಎರಡು ಈಗ ರಿಲೀಸ್ ಹಂತಕ್ಕೆ ಬಂದಿವೆ.
ಪಿನಾಕ ಚಿತ್ರದ ಬಹುತೇಕ ಕೆಲಸ ಮುಗಿದೆ. ರಿಲೀಸ್ಗೂ ಈ ಚಿತ್ರ ಸಜ್ಜಾಗುತ್ತಿದೆ. ಆದರೆ, ಈ ಚಿತ್ರ ಯಾವಾಗ ರಿಲೀಸ್ ಅನ್ನುವ ಪ್ರಶ್ನೆನೂ ಇತ್ತು.
ಇದಕ್ಕೆ ಗಣೇಶ್ ಜನ್ಮ ದಿನದಂದು ಉತ್ತರ ಸಿಗುವ ಸಾಧ್ಯತೆ ಇದೆ. ಅಂದ್ರೆ, ಪಿನಾಕ ಚಿತ್ರದ ರಿಲೀಸ್ ಡೇಟ್ ಈ ದಿನವೇ ಅನೌನ್ಸ್ ಆಗುವ ಸುದ್ದಿ ಇದೆ. ಅಕ್ಟೋಬರ್-2 ರಂದು ಈ ಚಿತ್ರ ರಿಲೀಸ್ ಆಗುತ್ತದೆ ಅನ್ನುವ ಸುದ್ದಿ ಇದೆ.
ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಸಿನಿಮಾನೂ ರಿಲೀಸ್ ಹಂತಕ್ಕೆ ಬಂದಿದೆ. ಈ ಚಿತ್ರದ ರಿಲೀಸ್ ಯಾವಾಗ ಅನ್ನುವ ಪ್ರಶ್ನೆಗೂ ಅಕ್ಟೋಬರ್-16 ರಂದು ಈ ಚಿತ್ರ ತೆರೆ ಕಾಣುತ್ತದೆ ಅನ್ನುವ ನ್ಯೂಸ್ ಬಲವಾಗಿಯೇ ಕೇಳಿ ಬರ್ತಿದೆ. ಹಾಗೆ kannadascreens.com ಈ ಎರಡೂ ಚಿತ್ರಗಳು ಒಂದೇ ತಿಂಗಳಲ್ಲಿಯೇ ಎರಡು ವಾರದ ಅಂತರದಲ್ಲಿ ಬರ್ತಿವೆ ಅಂತಲೂ ವರದಿ ಮಾಡಿದೆ.
ಗಣೇಶ್ ಚಿತ್ರ ಜೀವನದಲ್ಲಿ ಈ ಸಿನಿಮಾಗಳು ಬೇರೆ ರೀತಿನೆ ಇವೆ. ಈ ಹಿಂದಿನ ಕೃಷ್ಣಂ ಪ್ರಣಯ ಸಖಿ ಚಿತ್ರ ಗಣೇಶ್ ಅವರಿಗೆ ಒಳ್ಳೆ ಹೆಸರು ತಂದಕೊಟ್ಟಿದೆ.
ದಂಡುಪಾಳ್ಯ ಡೈರೆಕ್ಟರ್ ಶ್ರೀನಿವಾಸ್ ಕೃಷ್ಣಂ ಪ್ರಣಯ ಸಖಿ ಚಿತ್ರದ ಪ್ರೆಸ್ ಮೀಟ್ ಅಲ್ಲಿಯೇ ಒಂದು ಮಾತು ಹೇಳಿದ್ದರು. ಈ ಚಿತ್ರ ಆದ್ಮೇಲೆ ಗಣೇಶ್ ಜೊತೆಗೆ ಮತ್ತೆ ಕೆಲಸ ಮಾಡೋಕೆ ಇಷ್ಟಪಡ್ತೀನಿ. ಇವರಲ್ಲಿ ತುಂಬಾನೆ ಪ್ರತಿಭೆ ಇದೆ. ಇದನ್ನ ತೆಗೆಯಬಹುದು ಅಂತಲೂ ಹೇಳಿದ್ದರು. ಆ ಪ್ರಕಾರ ‘ಬೃಂದಾವಿಹಾರಿ’ ಚಿತ್ರದಲ್ಲಿ ಇವರು ಒಂದಾಗಿದ್ದಾರೆ.
ಪಿನಾಕ ಚಿತ್ರದಲ್ಲಿ ಗಣೇಶ್ ಬೇರೆ ರೀತಿನೇ ಕಾಣಿಸುತ್ತಿದ್ದಾರೆ. ಈ ಹಿಂದೆ ಈ ರೀತಿಯ ಪಾತ್ರಗಳನ್ನ ಗಣೇಶ್ ಮಾಡಿಯೇ ಇಲ್ಲ. ಆದರೆ, ಡಾನ್ಸ್ ಮಾಸ್ಟರ್ ಹಾಗೂ ಈ ಚಿತ್ರದ ಡೈರೆಕ್ಟರ್ ಧನಂಜಯ್ ಇಲ್ಲಿ ಗಣೇಶ್ ಅವರಿಗೆ ಬೇರೆ ರೀತಿ ಪಾತ್ರವನ್ನೆ ಡಿಸೈನ್ ಮಾಡಿದ್ದಾರೆ.
-ರೇವನ್ ಪಿ.ಜೇವೂರ್
Bangalore,Karnataka













