Ganesh Birthday: ಗಣೇಶ್ ಬರ್ತ್​ಡೇ ಸಂಭ್ರಮ, 2 ವಾರದ ಅಂತರದಲ್ಲಿ 2 ಸಿನಿಮಾ ರಿಲೀಸ್ | golden star ganesh brindavihari pinaka movies release latest news | | ACTPnews

ಗಣೇಶ್ ಸಿನಿಮಾ


Last Updated:

ಗೋಲ್ಡನ್ ಸ್ಟಾರ್ ಗಣೇಶ್ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ಸಡಗರದಲ್ಲಿ ಇವರ ಎರಡು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ್ಯತೆ ಇದೆ. ಈ ಸಿನಿಮಾಗಳು ಒಂದೇ ತಿಂಗಳಲ್ಲಿಯೇ ಎರಡು ವಾರದ ಅಂತರದಲ್ಲಿಯೇ ರಿಲೀಸ್ ಅನ್ನುವ ಸುದ್ದಿನೂ ಇದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಗಣೇಶ್ ಸಿನಿಮಾ
ಗಣೇಶ್ ಸಿನಿಮಾ

ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ಈ ವರ್ಷ 48 ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ಹೊತ್ತಲ್ಲಿ ಒಂದು ಸುದ್ದಿ ಹೊರ ಬಂದಿದೆ. ಇದನ್ನ ಅಧಿಕೃತವಾಗಿಯೇ ಜನ್ಮ ದಿನದಂದೇ ಅನೌನ್ಸ್ ಮಾಡ್ತಾರೆ ಅನ್ನುವ ಮಾಹಿತಿನೂ ಇದೆ. ಆದರೆ, ಅಸಲಿಗೆ ಈ ವಿಷಯ ಏನು ಅಂತ ಬಂದ್ರೆ, ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳು (Movies) ಬರ್ತಿವೆ. ಒಂದೇ ತಿಂಗಳಲ್ಲಿಯೇ ಇವು ರಿಲೀಸ್ ಆಗುತ್ತಿವೆ. ಈ ಎರಡೂ ಸಿನಿಮಾಗಳ (Two Movies) ಒಂದು ಸ್ಟೋರಿ ಇಲ್ಲಿದೆ ಓದಿ.

ಒಂದೇ ತಿಂಗಳಲ್ಲಿ 2 ಚಿತ್ರ ರಿಲೀಸ್

ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ ಜೀವನದಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾ ಮಹತ್ವದ ಸಿನಿಮಾನೇ ಆಗಿದೆ. ಈ ಚಿತ್ರ ಗಣೇಶ್ ಅವರಿಗೆ ದೊಡ್ಡ ಗೆಲುವು ತಂದು ಕೊಡ್ತು.

ಈ ಸಿನಿಮಾ ಆದ್ಮೇಲೆ ಹೆಚ್ಚು ಕಡಿಮೆ ಎರಡು ವರ್ಷದಿಂದ ಗಣೇಶ್ ಅವರ ಯಾವುದೇ ಚಿತ್ರವೂ ಬಂದಿಲ್ಲ. ಆದರೆ, ಈ ಚಿತ್ರದ ಬಳಿಕ ಗಣೇಶ್ ನಾಲ್ಕು ಸಿನಿಮಾಗಳನ್ನ ಒಪ್ಪಿದ್ದಾರೆ. ಆ ನಾಲ್ಲು ಚಿತ್ರಗಳಲ್ಲಿ ಎರಡು ಈಗ ರಿಲೀಸ್‌ ಹಂತಕ್ಕೆ ಬಂದಿವೆ.

ಪಿನಾಕ ರಿಲೀಸ್ ಹೊಸ ನ್ಯೂಸ್

ಪಿನಾಕ ಚಿತ್ರದ ಬಹುತೇಕ ಕೆಲಸ ಮುಗಿದೆ. ರಿಲೀಸ್‌ಗೂ ಈ ಚಿತ್ರ ಸಜ್ಜಾಗುತ್ತಿದೆ. ಆದರೆ, ಈ ಚಿತ್ರ ಯಾವಾಗ ರಿಲೀಸ್ ಅನ್ನುವ ಪ್ರಶ್ನೆನೂ ಇತ್ತು.

ಇದಕ್ಕೆ ಗಣೇಶ್ ಜನ್ಮ ದಿನದಂದು ಉತ್ತರ ಸಿಗುವ ಸಾಧ್ಯತೆ ಇದೆ. ಅಂದ್ರೆ, ಪಿನಾಕ ಚಿತ್ರದ ರಿಲೀಸ್ ಡೇಟ್ ಈ ದಿನವೇ ಅನೌನ್ಸ್ ಆಗುವ ಸುದ್ದಿ ಇದೆ. ಅಕ್ಟೋಬರ್-2 ರಂದು ಈ ಚಿತ್ರ ರಿಲೀಸ್ ಆಗುತ್ತದೆ ಅನ್ನುವ ಸುದ್ದಿ ಇದೆ.

‘ಬೃಂದಾವಿಹಾರಿ’ ಸಿನಿಮಾ

ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಸಿನಿಮಾನೂ ರಿಲೀಸ್ ಹಂತಕ್ಕೆ ಬಂದಿದೆ. ಈ ಚಿತ್ರದ ರಿಲೀಸ್ ಯಾವಾಗ ಅನ್ನುವ ಪ್ರಶ್ನೆಗೂ ಅಕ್ಟೋಬರ್-16 ರಂದು ಈ ಚಿತ್ರ ತೆರೆ ಕಾಣುತ್ತದೆ ಅನ್ನುವ ನ್ಯೂಸ್ ಬಲವಾಗಿಯೇ ಕೇಳಿ ಬರ್ತಿದೆ. ಹಾಗೆ kannadascreens.com ಈ ಎರಡೂ ಚಿತ್ರಗಳು ಒಂದೇ ತಿಂಗಳಲ್ಲಿಯೇ ಎರಡು ವಾರದ ಅಂತರದಲ್ಲಿ ಬರ್ತಿವೆ ಅಂತಲೂ ವರದಿ ಮಾಡಿದೆ.

ಗಣೇಶ್ ಚಿತ್ರ ಜೀವನದಲ್ಲಿ ಈ ಸಿನಿಮಾಗಳು ಬೇರೆ ರೀತಿನೆ ಇವೆ. ಈ ಹಿಂದಿನ ಕೃಷ್ಣಂ ಪ್ರಣಯ ಸಖಿ ಚಿತ್ರ ಗಣೇಶ್ ಅವರಿಗೆ ಒಳ್ಳೆ ಹೆಸರು ತಂದಕೊಟ್ಟಿದೆ.

ದಂಡುಪಾಳ್ಯ ಡೈರೆಕ್ಟರ್ ಶ್ರೀನಿವಾಸ್ ಕೃಷ್ಣಂ ಪ್ರಣಯ ಸಖಿ ಚಿತ್ರದ ಪ್ರೆಸ್ ಮೀಟ್ ಅಲ್ಲಿಯೇ ಒಂದು ಮಾತು ಹೇಳಿದ್ದರು. ಈ ಚಿತ್ರ ಆದ್ಮೇಲೆ ಗಣೇಶ್ ಜೊತೆಗೆ ಮತ್ತೆ ಕೆಲಸ ಮಾಡೋಕೆ ಇಷ್ಟಪಡ್ತೀನಿ. ಇವರಲ್ಲಿ ತುಂಬಾನೆ ಪ್ರತಿಭೆ ಇದೆ. ಇದನ್ನ ತೆಗೆಯಬಹುದು ಅಂತಲೂ ಹೇಳಿದ್ದರು. ಆ ಪ್ರಕಾರ ‘ಬೃಂದಾವಿಹಾರಿ’ ಚಿತ್ರದಲ್ಲಿ ಇವರು ಒಂದಾಗಿದ್ದಾರೆ.

ಪಿನಾಕ ಸಿನಿಮಾ

ಪಿನಾಕ ಚಿತ್ರದಲ್ಲಿ ಗಣೇಶ್ ಬೇರೆ ರೀತಿನೇ ಕಾಣಿಸುತ್ತಿದ್ದಾರೆ. ಈ ಹಿಂದೆ ಈ ರೀತಿಯ ಪಾತ್ರಗಳನ್ನ ಗಣೇಶ್ ಮಾಡಿಯೇ ಇಲ್ಲ. ಆದರೆ, ಡಾನ್ಸ್‌ ಮಾಸ್ಟರ್ ಹಾಗೂ ಈ ಚಿತ್ರದ ಡೈರೆಕ್ಟರ್ ಧನಂಜಯ್ ಇಲ್ಲಿ ಗಣೇಶ್ ಅವರಿಗೆ ಬೇರೆ ರೀತಿ ಪಾತ್ರವನ್ನೆ ಡಿಸೈನ್ ಮಾಡಿದ್ದಾರೆ.

-ರೇವನ್ ಪಿ.ಜೇವೂರ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed