Last Updated:
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ. ಬೆಂಗಳೂರಿನ ಫೋರಂ ಐಎಎಸ್ನಲ್ಲಿ ತರಬೇತಿ. ಜುಲೈ 10 ಕೊನೆಯ ದಿನಾಂಕ.
ಚಿಕ್ಕಮಗಳೂರು: ಐಎಎಸ್ (IAS) ಅಥವಾ ಐಪಿಎಸ್ (IPS) ಅಧಿಕಾರಿಯಾಗಬೇಕೆಂಬುದು ಲಕ್ಷಾಂತರ ವಿದ್ಯಾರ್ಥಿಗಳ (Students) ಕನಸು. ಆದರೆ, ತರಬೇತಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಸಾಧ್ಯವಾಗದ ಪ್ರತಿಭಾವಂತ (Talent) ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇದೀಗ ಮಹತ್ವದ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದೆ. ಬೆಂಗಳೂರಿನ ಪ್ರತಿಷ್ಠಿತ ‘ಫೋರಂ ಐಎಎಸ್’ ಸಂಸ್ಥೆಯಲ್ಲಿ ಉಚಿತವಾಗಿ ಯುಪಿಎಸ್ಸಿ (UPSC) ತರಬೇತಿ ಪಡೆಯಲು ಈಗ ಅರ್ಜಿ (Application) ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ಜಾಲತಾಣಕ್ಕೆ https://dom.karnataka.gov.in ಭೇಟಿ ನೀಡಿ, ಅಲ್ಲಿ ನೀಡಲಾದ ಗೂಗಲ್ ಫಾರ್ಮ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು.
ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಲು ಜುಲೈ 10 ಕೊನೆಯ ದಿನಾಂಕವಾಗಿದೆ. ತಡಮಾಡಿದಲ್ಲಿ ನಿಮ್ಮ ಅವಕಾಶ ಕೈತಪ್ಪಬಹುದು, ಆದ್ದರಿಂದ ಆಸಕ್ತರು ತಕ್ಷಣವೇ ಅರ್ಜಿ ಸಲ್ಲಿಸುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ ಅಥವಾ ಯಾವುದಾದರೂ ಅನುಮಾನಗಳಿದ್ದಲ್ಲಿ, ನಿಮ್ಮ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಮೀಪವಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿಯನ್ನು ಅಥವಾ 08262-295848 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
Bangalore [Bangalore],Bangalore,Karnataka













