Last Updated:
ಕರ್ನಾಟಕ ಸರ್ಕಾರ 2026-27ರಿಂದ ಪ್ರಾಥಮಿಕದಿಂದ PGವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಈಗಾಗಲೇ ಪಾಸ್ಗೆ ಹಣ ಕಟ್ಟಿದವರಿಗೆ ಸೇವಾ ಸಿಂಧು ಮೂಲಕ ರಿಫಂಡ್ ವ್ಯವಸ್ಥೆ ಆರಂಭವಾಗಿದೆ; ಇಲ್ಲಿದೆ ನೋಡಿ ಅರ್ಜಿ ಸಲ್ಲಿಕೆ ವಿವರ
ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ (Students) ಸಾರಿಗೆ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ! 2026-27ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿ (PG) ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಸಂಪೂರ್ಣ ‘ಉಚಿತ ಬಸ್ ಪಾಸ್’ ನೀಡಲು ಕರ್ನಾಟಕ ಸರ್ಕಾರ (Government Of Karnataka) ಮಹತ್ವದ ಆದೇಶ ಹೊರಡಿಸಿದೆ. ಜೂನ್ 12, 2026 ರಿಂದಲೇ ಈ ಉಚಿತ ಪಾಸ್ಗಳ ವಿತರಣೆ (Distribution) ಭರದಿಂದ ಸಾಗಿದ್ದು, ಗರ್ಲ್ ಸ್ಟುಡೆಂಟ್ಸ್ ಈಗಾಗಲೇ ‘ಶಕ್ತಿ’ ಯೋಜನೆಯಡಿ ಉಚಿತ ಪ್ರಯಾಣದ ಲಾಭ ಪಡೆಯುತ್ತಿದ್ದಾರೆ.
ಇದೀಗ ಗಂಡುಮಕ್ಕಳು ಸೇರಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಈ ಬಂಪರ್ ಆಫರ್ ವಿಸ್ತರಣೆಯಾಗಿದ್ದು, ರಾಜ್ಯದ ಗಡಿ ಭಾಗದ ವಿದ್ಯಾರ್ಥಿಗಳೂ (ರಾಜ್ಯದೊಳಗೆ ಹಾಗೂ ಹೊರಗೆ) ಸಹ ಇದರ ಲಾಭ ಪಡೆಯಬಹುದಾಗಿದೆ. KSRTC, BMTC, NWKRTC ಹಾಗೂ KKRTC ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಬಸ್ಗಳಲ್ಲಿ ಈ ಸೌಲಭ್ಯ ಅನ್ವಯವಾಗಲಿದೆ. ಆದರೆ, ಈ ಉಚಿತ ಘೋಷಣೆಗೂ ಮುನ್ನವೇ ಹಣ ಪಾವತಿಸಿ ಪಾಸ್ ಪಡೆದುಕೊಂಡವರ ಕಥೆ ಏನು ಎಂಬ ಚಿಂತೆ ಬಿಡಿ, ನೀವು ಕಟ್ಟಿದ ಪೂರ್ಣ ಹಣವನ್ನು ಸರ್ಕಾರವೇ ನಿಮಗೆ ಮರುಪಾವತಿ (Refund) ಮಾಡುತ್ತಿದೆ!
- ಮೊದಲಿಗೆ ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್ https://sevasindhuservices.karnataka.gov.in/buspassservices/ ಗೆ ಭೇಟಿ ನೀಡಿ.
- ಅಲ್ಲಿ “Application for Refund of KSRTC, NWKRTC, KKRTC & BMTC Student Bus Pass Fee” ಎಂಬ ರಿಫಂಡ್ ಸೇವೆಯ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬರುವ OTP (ಒಟಿಪಿ) ಮೂಲಕ ಲಾಗಿನ್ ಆಗಬೇಕು.
- ಇಲ್ಲಿ ವಿದ್ಯಾರ್ಥಿಗಳು ತಮ್ಮ ಆಧಾರ್ ಆಧಾರಿತ e-KYC (ಇ-ಕೆವೈಸಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
- ಬಳಿಕ ವಿದ್ಯಾರ್ಥಿ ಅಥವಾ ಅವರ ಪೋಷಕರ ಬ್ಯಾಂಕ್ ಖಾತೆಯ ವಿವರಗಳನ್ನು ನಿಖರವಾಗಿ ನಮೂದಿಸಿ ಅರ್ಜಿ ಸಲ್ಲಿಸಿದರೆ ಸಾಕು, ಕೇವಲ 7 ದಿನಗಳ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ NEFT ಅಥವಾ RTGS ಮೂಲಕ ಪೂರ್ಣ ಹಣ ಜಮಾ ಆಗಲಿದ್ದು, ತಕ್ಷಣವೇ ನಿಮ್ಮ ಮೊಬೈಲ್ಗೆ ಕನ್ಫರ್ಮೇಷನ್ SMS ಕೂಡ ಬರಲಿದೆ!
ಸಹಾಯ-ಸಂಪರ್ಕಕ್ಕಾಗಿ ಇಲ್ಲಿ ಭೇಟಿ ನೀಡಿ
ಇದೊಂದು ನೂರಕ್ಕೆ ನೂರು ನಿಜವಾದ ಹಾಗೂ ಅಧಿಕೃತ ಸರ್ಕಾರಿ ಯೋಜನೆಯಾಗಿದ್ದು, ಸೈಬರ್ ವಂಚಕರ ಬಗ್ಗೆ ಎಚ್ಚರವಿರಲಿ! ಯಾವುದೇ ಕಾರಣಕ್ಕೂ ವಾಟ್ಸಾಪ್ ಅಥವಾ ಅಪರಿಚಿತ ಮೆಸೇಜ್ಗಳಲ್ಲಿ ಬರುವ ಖಾಸಗಿ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಫೋನ್ ಕರೆಗಳಲ್ಲಿ ನಿಮ್ಮ ಬ್ಯಾಂಕ್ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ. ಈ ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಗೊಂದಲ ಅಥವಾ ಸಮಸ್ಯೆಗಳಿದ್ದರೆ, ತಕ್ಷಣವೇ ಸೇವಾ ಸಿಂಧು ಸಹಾಯವಾಣಿ ಸಂಖ್ಯೆ 080-24410574 ಗೆ ಕರೆ ಮಾಡಬಹುದು ಅಥವಾ sevasindhu@karnataka.gov.in ಗೆ ಇಮೇಲ್ ಕಳುಹಿಸಬಹುದು. ಹಾಗೆಯೇ KSRTC ಸಹಾಯವಾಣಿ 080-26252625 ಅನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.
Bangalore [Bangalore],Bangalore,Karnataka
Jun 25, 2026 11:44 AM IST













