Last Updated:
ಲಾಲ್ಬಾಗ್ನಲ್ಲಿ 220ನೇ ಫಲಪುಷ್ಪ ಮೇಳಕ್ಕೆ ಜನಸಾಗರ. ಮಳೆ ನಡುವೆಯೂ 28 ಸಾವಿರಕ್ಕೂ ಹೆಚ್ಚು ಜನ ಭೇಟಿ. ಗಂಗರ ಇತಿಹಾಸ ಥೀಮ್ ಪ್ರಮುಖ ಆಕರ್ಷಣೆ.
ಬೆಂಗಳೂರು: ನಗರದ ಐತಿಹಾಸಿಕ ಲಾಲ್ಬಾಗ್ನಲ್ಲಿ (Lalbagh) ಸ್ವಾತಂತ್ರ್ಯ ದಿನಾಚರಣೆಯ (Independence Day) ಅಂಗವಾಗಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಮೇಳಕ್ಕೆ (Flower Show) ಅಕ್ಷರಶಃ ಜನಸಾಗರವೇ ಹರಿದುಬರುತ್ತಿದೆ. ಮಳೆಯ (Rain) ಅಬ್ಬರವನ್ನೂ ಲೆಕ್ಕಿಸದೇ ಜನತೆ ಹೂವಿನ ಲೋಕವನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದು, ಮೇಳಕ್ಕೆ ದಿನದಿಂದ ದಿನಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ.














