Last Updated:
2026 ರ ಫಿಫಾ ವಿಶ್ವಕಪ್ ಟೂರ್ನಿಯ ಬಹುಮಾನದ ಮೊತ್ತ 2023 ರ ಐಸಿಸಿ ಏಕದಿನ ವಿಶ್ವಕಪ್‌ನ ಬಜೆಟ್ ಗಿಂತ ನೂರು ಪಟ್ಟು ಹೆಚ್ಚಾಗಿದೆ.
ಬಹುನಿರೀಕ್ಷಿತ 2026 ರ ಫಿಫಾ (FIFA) ವಿಶ್ವಕಪ್(World cup)ಗೆ ಎಲ್ಲಾ 48 ತಂಡಗಳು ಸಿದ್ಧವಾಗಿವೆ. ಯುನೈಟೆಡ್ ಸ್ಟೇಟ್ಸ್ (US), ಕೆನಡಾ (Canada) ಮತ್ತು ಮೆಕ್ಸಿಕೊ (Mexico) ಆತಿಥ್ಯ ವಹಿಸುತ್ತಿರುವ ಈ ಮೆಗಾ ಫುಟ್‌ಬಾಲ್ (Football) ಟೂರ್ನಿ ಜೂನ್ 11 ರಂದು ಪ್ರಾರಂಭವಾಗಲಿದೆ. ಫಿಫಾ ವಿಶ್ವಕಪ್ ವಿಶ್ವದ ಅತಿದೊಡ್ಡ ಏಕೈಕ ಕ್ರೀಡಾಕೂಟವಾಗಿದೆ. ಫಿಫಾ ಎಂದರೆ ಫುಟ್‌ಬಾಲ್ ಆಡಳಿತ ಮಂಡಳಿಯಾದ ಫೆಡರೇಷನ್ ಇಂಟರ್ನ್ಯಾಷನಲ್ ಡಿ ಫುಟ್‌ಬಾಲ್ ಅಸೋಸಿಯೇಷನ್ (Federation Internationale de Football Association). 2026 ರ ಫಿಫಾ ವಿಶ್ವಕಪ್‌ನ ಬಹುಮಾನ(Prize)ದ ಮೊತ್ತವು ದಾಖಲೆ ಮುರಿಯುವ ನಿರೀಕ್ಷೆಯಿದೆ.
ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಜಂಟಿಯಾಗಿ ಆಯೋಜಿಸುತ್ತಿರುವ ಈ ಮೆಗಾ ಟೂರ್ನಿಯಲ್ಲಿ ಮೊದಲ ಬಾರಿಗೆ 48 ದೇಶಗಳು ಭಾಗವಹಿಸುತ್ತಿದ್ದು, ಒಟ್ಟು 104 ಪಂದ್ಯಗಳು ನಡೆಯಲಿವೆ. ಈ ಬಾರಿ ಪಂದ್ಯಗಳ ಸಂಖ್ಯೆ ಮಾತ್ರವಲ್ಲ, ಬಹುಮಾನದ ಮೊತ್ತವೂ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಎಷ್ಟರಮಟ್ಟಿಗೆ ಎಂದರೆ, 2026 ರ ಫಿಫಾ ವಿಶ್ವಕಪ್ ಟೂರ್ನಿಯ ಬಹುಮಾನದ ಮೊತ್ತ 2023 ರ ಐಸಿಸಿ ಏಕದಿನ ವಿಶ್ವಕಪ್‌ನ ಬಜೆಟ್ ಗಿಂತ ನೂರು ಪಟ್ಟು ಹೆಚ್ಚಾಗಿದೆ.
2022 ರ ಫಿಫಾ ವಿಶ್ವಕಪ್ ಟೂರ್ನಿಯನ್ನು ಕತಾರ್ ಆಯೋಜಿಸಿತ್ತು. ಈ ಟೂರ್ನಿ ಒಟ್ಟು ಬಹುಮಾನದ ಮೊತ್ತ 440 ಮಿಲಿಯನ್ ಆಗಿತ್ತು. ಈ ಬಾರಿ ಫಿಫಾ ವಿಶ್ವಕಪ್‌ನ ಬಹುಮಾನದ ಮೊತ್ತ 655 ಮಿಲಿಯನ್ ಆಗಿದೆ. ಭಾರತೀಯ ರೂಪಾಯಿಗಳಲ್ಲಿ, ಇದು ಸರಿಸುಮಾರು 6240 ಕೋಟಿ ರೂ. ಚಾಂಪಿಯನ್ ತಂಡವು ಕಳೆದ ಬಾರಿ 42 ಮಿಲಿಯನ್ ಪಡೆದಿದ್ದರೆ, ಈ ಬಾರಿ ಅದು 50 ಮಿಲಿಯನ್ ಅಂದರೆ, ಸುಮಾರು 476 ಕೋಟಿ ರೂ.ಗಳನ್ನು ಪಡೆಯಲಿದೆ.
ಫಿಫಾ ವಿಶ್ವಕಪ್ 2026 ರ ನಗದು ಬಹುಮಾನದ ವಿವರ
- ಚಾಂಪಿಯನ್- 50 ಮಿಲಿಯನ್- 476 ಕೋಟಿ ರೂ.
- ರನ್ನರ್-ಅಪ್- 33 ಮಿಲಿಯನ್- 314 ಕೋಟಿ ರೂ.
- 3ನೇ ಸ್ಥಾನ- 29 ಮಿಲಿಯನ್- 276 ಕೋಟಿ ರೂ.
- 4ನೇ ಸ್ಥಾನ- 27 ಮಿಲಿಯನ್- 257 ಕೋಟಿ ರೂ.
- 5ನೇ-8ನೇ ಸ್ಥಾನಗಳು- 19 ಮಿಲಿಯನ್- 181 ಕೋಟಿ ರೂ.
- 9ನೇ–16ನೇ ಸ್ಥಾನಗಳು- 15 ಮಿಲಿಯನ್- 143 ಕೋಟಿ ರೂ.
- 17ನೇ–32ನೇ ಸ್ಥಾನಗಳು- 11 ಮಿಲಿಯನ್- 105 ಕೋಟಿ ರೂ.
- 33ನೇ–48ನೇ ಸ್ಥಾನಗಳು- 9 ಮಿಲಿಯನ್- 86 ಕೋಟಿ ರೂ.
- ಸಿದ್ಧತಾ ಅನುದಾನ – 2.5 ಮಿಲಿಯನ್ (ಪ್ರತಿ ತಂಡಕ್ಕೆ) – 20 ಕೋಟಿ ರೂ.
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ನಗದು ಬಹುಮಾನದ ಮೊತ್ತ
- ಚಾಂಪಿಯನ್ಸ್ – 4 ಮಿಲಿಯನ್ – 33 ಕೋಟಿ ರೂ.
- ರನ್ನರ್-ಅಪ್- 2 ಮಿಲಿಯನ್ – 16.5 ಕೋಟಿ ರೂ.
- ಸೆಮಿಫೈನಲಿಸ್ಟ್‌ನಲ್ಲಿ ಸೋತ ತಂಡಗಳಿಗೆ – 6.6 ಕೋಟಿ ರೂ.
- ಗುಂಪು ಹಂತದಿಂದ ಹೊರಬಿದ್ದ ತಂಡಗಳಿಗೆ- 83 ಲಕ್ಷ ರೂ.
- ಗುಂಪು ಹಂತದ ಪಂದ್ಯದ ಗೆಲುವಿನ ಬೋನಸ್– (ಪ್ರತಿ ಗೆಲುವಿಗೆ) 33 ಲಕ್ಷ ರೂ.
FIFA WC 2026: ಫಿಫಾದ ಬಹುಮಾನ ಮೊತ್ತ ಕೇಳಿದ್ರೆ ನಿಮಗೆ ತಲೆ ತಿರುಗೋದು ಗ್ಯಾರೆಂಟಿ! ವಿನ್ನರ್ ಬಿಡಿ, ಕೊನೆ ಸ್ಥಾನದ ತಂಡಕ್ಕೂ ಸಿಗಲಿದೆ ಕೋಟಿ ಕೋಟಿ!













