FIFA 2026: ಮೆಸ್ಸಿ ತಂಡದ ವಿರುದ್ಧ ತಿರುಗಿ ಬಿದ್ದ ಫುಟ್ಬಾಲ್ ಫ್ಯಾನ್ಸ್​! ಅರ್ಜೆಂಟೀನಾವನ್ನು ಫಿಫಾದಿಂದ ಹೊರಗಿಡುವಂತೆ 75 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿಂದ ಒತ್ತಾಯ? ಕಾರಣವೇನು? | ಕ್ರೀಡಾ ಸುದ್ದಿ | ACTPnews

ಅರ್ಜೆಂಟೀನಾ


Last Updated:

ಫಿಫಾ ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮುಂಚೆ ಅರ್ಜೆಂಟೀನಾವನ್ನು ಹೊರಗಿಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ಅರ್ಜೆಂಟೀನಾ
ಅರ್ಜೆಂಟೀನಾ

ಫಿಫಾ (FIFA) ವಿಶ್ವಕಪ್ (World Cup) 2026ರ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ (England) ವಿರುದ್ಧ ಹಾಲಿ ಚಾಂಪಿಯನ್ ಅರ್ಜೆಂಟೀನಾ (Argentina) ತಂಡವು ಆಡಲಿದೆ. ಈ ಪಂದ್ಯಕ್ಕೂ ಮುಂಚೆಯೇ ಲಿಯೋನೆಲ್ ಮೆಸ್ಸಿ ಮತ್ತು ಅರ್ಜೆಂಟೀನಾ ತಂಡಕ್ಕೆ ಸಂಕಷ್ಟ ಎದುರಾಗಿದೆ. ಲಿಯೋನೆಲ್ ಮೆಸ್ಸಿ (Lionel Messi) ಮತ್ತು ಅರ್ಜೆಂಟೀನಾ ತಂಡಕ್ಕೆ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ರೆಫರಿಗಳ ಮೇಲಿನ ಆರೋಪಗಳು ಬಹಳ ದೊಡ್ಡ ಚರ್ಚೆಯಾಗುತ್ತಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಅರ್ಜೆಂಟೀನಾವನ್ನು ವಿಶ್ವಕಪ್‌ನಿಂದ ಹೊರಗಿಡಬೇಕು ಎಂದು ಒತ್ತಾಯಿಸಿ 75 ಲಕ್ಷಕ್ಕೂ ಹೆಚ್ಚು ಜನರು ಆನ್‌ಲೈನ್‌ನಲ್ಲಿ ಅರ್ಜಿ ಸಹಿ ಹಾಕಿದ್ದಾರೆ. ರೆಫರಿ ಪಕ್ಷಪಾತ ಎಂಬ ಆರೋಪ ಕೇಳಿ ಬಂದ ನಂತರ ಬ್ಯಾನ್ ಮಾಡುವ ಒತ್ತಾಯಗಳು ಜೋರಾಗಿವೆ.

ಅರ್ಜೆಂಟೀನಾ ಔಟ್ ಡಾಟ್ ಕಾಮ್ ವೆಬ್‌ಸೈಟ್ ಹೇಳಿಕೆಯಲ್ಲಿ ಫಿಫಾ ಮತ್ತು ರೆಫರಿಗಳು ಲಿಯೋನೆಲ್ ಮೆಸ್ಸಿ ಮತ್ತು ಅರ್ಜೆಂಟೀನಾ ಕಡೆಗೆ ಸ್ಪಷ್ಟವಾಗಿ ಪಕ್ಷಪಾತ ತೋರಿಸುತ್ತಿದ್ದಾರೆ ಎಂದು ಹೇಳಿದೆ. ವಿಜೇತರನ್ನು ಈಗಾಗಲೇ ನಿರ್ಧರಿಸಿರುವಾಗ ಉಳಿದ ತಂಡಗಳು ಏಕೆ ಸ್ಪರ್ಧೆ ಮಾಡಬೇಕು? ಅರ್ಜೆಂಟೀನಾವನ್ನು ವಿಶ್ವಕಪ್‌ನಿಂದ ಹೊರಗಿಡಿ ಮತ್ತು ಎಲ್ಲರಿಗೂ ಸಮಾನ ಅವಕಾಶ ಕೊಡಿ ಎಂದು ಒತ್ತಾಯಿಸಿದೆ.

ಇಂಗ್ಲೆಂಡ್ ವಿರುದ್ಧ ಗೆಲುವು ಸುಲಭವಲ್ಲ?

ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡಕ್ಕೆ ಸೆಮಿಫೈನಲ್‌ಗೆ ಹೋಗುವುದು ಸುಲಭವಾಗಿರಲಿಲ್ಲ. ಸ್ವಿಟ್ಜರ್ಲೆಂಡ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 90 ನಿಮಿಷಗಳಾದ ನಂತರ ಸ್ಕೋರ್ 1-1 ಆಗಿ ಸಮಬಲವಾಗಿತ್ತು. ನಂತರ ಹೆಚ್ಚುವರಿ ಸಮಯದಲ್ಲಿ ಅರ್ಜೆಂಟೀನಾ 2-1 ಗೋಲಿನ ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ತಲುಪಿತು. ಈ ಪಂದ್ಯದಲ್ಲೇ ಲಿಯೋನೆಲ್ ಮೆಸ್ಸಿ ಮತ್ತು ಅರ್ಜೆಂಟೀನಾ ತಂಡಕ್ಕೆ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪಗಳು ರೆಫರಿಗಳ ಮೇಲೆ ಕೇಳಿ ಬಂದವು.

ಈಗ ಅರ್ಜೆಂಟೀನಾ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ವಿಶ್ವಕಪ್‌ನಲ್ಲಿ ಇದುವರೆಗೆ ಇಂಗ್ಲೆಂಡ್ ವಿರುದ್ಧ ಅರ್ಜೆಂಟೀನಾ 4 ಪಂದ್ಯಗಳಲ್ಲಿ ಕೇವಲ 2 ಗೆದ್ದರೆ, ಇಂಗ್ಲೆಂಡ್ 3 ಗೆಲುವಿನ ನಗೆ ಬೀರಿದೆ. ಇಂಗ್ಲೆಂಡ್ ತಂಡ ಫಿಫಾ ವಿಶ್ವಕಪ್ ಅನ್ನು ಒಂದೇ ಬಾರಿ ಗೆದ್ದಿದೆ. ಆದ್ದರಿಂದ ಈ ಪಂದ್ಯ ಇಂಗ್ಲೆಂಡ್ ತಂಡಕ್ಕೆ ಬಹಳ ಮುಖ್ಯವಾಗಿದೆ. ಈ ಸೆಮಿಫೈನಲ್ ಗೆಲ್ಲುವ ತಂಡ ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ.

ಎರಡನೇ ಸೆಮಿಫೈನಲ್‌ ವಿಶೇಷ ಏಕೆ?

ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ತಂಡಗಳ ನಡುವಿನ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. ಫಾಕ್‌ಲ್ಯಾಂಡ್ ದ್ವೀಪಗಳ ಮೇಲಿನ ಸಾರ್ವಭೌಮತ್ವ ವಿವಾದದ ಕಾರಣದಿಂದ ಈ ಎರಡು ದೇಶಗಳ ನಡುವಿನ ಪಂದ್ಯಗಳು ಯಾವಾಗಲೂ ಬಹಳ ರೋಚಕವಾಗಿರುತ್ತದೆ .

1986ರ ಮೆಕ್ಸಿಕೋ ವಿಶ್ವಕಪ್‌ನಲ್ಲಿ ಡಿಯಾಗೋ ಮರಡೋನಾ ಅವರ ಫೇಮಸ್ ‘ಹ್ಯಾಂಡ್ ಆಫ್ ಗಾಡ್’ ಗೋಲಿನಿಂದ ಅರ್ಜೆಂಟೀನಾ 2-1 ಅಂತರದಲ್ಲಿ ಗೆದ್ದಿತ್ತು. ಈಗ 40 ವರ್ಷಗಳ ನಂತರ ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ನಡುವಿನ ಪಂದ್ಯ ನಡೆಯಲಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

FIFA 2026: ಮೆಸ್ಸಿ ತಂಡದ ವಿರುದ್ಧ ತಿರುಗಿ ಬಿದ್ದ ಫುಟ್ಬಾಲ್ ಫ್ಯಾನ್ಸ್​! ಅರ್ಜೆಂಟೀನಾವನ್ನು ಫಿಫಾದಿಂದ ಹೊರಗಿಡುವಂತೆ 75 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿಂದ ಒತ್ತಾಯ? ಕಾರಣವೇನು?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed