Farmer Scheme: ಒಂದು ರೂಪಾಯಿ ಖರ್ಚಿಲ್ಲದೇ ಬೋರ್‌ವೆಲ್‌ ಕೊರೆಸಿ; 3-9 ಲಕ್ಷ ಸಹಾಯಧನ ಕೊಡಲಿದೆ ಸರ್ಕಾರ! | | ACTPnews

ಸಹಾಯ ಧನ


Last Updated:

ಕರ್ನಾಟಕ ಸರ್ಕಾರ 2026ರಲ್ಲಿ ಗಂಗಾ ಕಲ್ಯಾಣ ಯೋಜನೆ ಪುನರಾರಂಭ, ಒಣಭೂಮಿ ಸಣ್ಣ ರೈತರಿಗೆ ಉಚಿತ ಬೋರ್‌ವೆಲ್, ಪಂಪ್‌ಸೆಟ್, ವಿದ್ಯುದ್ದೀಕರಣ, 3.5 ರಿಂದ 4.5 ಲಕ್ಷ ಸಹಾಯಧನ, ಆನ್‌ಲೈನ್ ಅರ್ಜಿ.

ಸಹಾಯ ಧನ
ಸಹಾಯ ಧನ

ಬೆಂಗಳೂರು: ಕರ್ನಾಟಕ ಸರ್ಕಾರ 2026ರಲ್ಲಿ ಮತ್ತೊಮ್ಮೆ ತನ್ನ ಮಹತ್ವಾಕಾಂಕ್ಷಿ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದು, ಒಣಭೂಮಿ (Dry Land) ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ (Farmers) ಉಚಿತ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬೋರ್‌ವೆಲ್ (Borewell) ಕೊರೆಯುವ ಖರ್ಚು, ಪಂಪ್‌ಸೆಟ್ ಅಳವಡಿಕೆ ಮತ್ತು ವಿದ್ಯುದ್ದೀಕರಣ ಸೇರಿದಂತೆ ಈ ಮೂರು ಹಂತಗಳ ಸಂಪೂರ್ಣ ವೆಚ್ಚವನ್ನೂ (Expense) ಸರ್ಕಾರವೇ ಭರಿಸಲಿದ್ದು, ರೈತರು ತಮ್ಮ ಜೇಬಿನಿಂದ ಒಂದು ರೂಪಾಯಿ ಖರ್ಚು ಮಾಡಬೇಕಾಗಿಲ್ಲ.

ಈ ಯೋಜನೆಯ ಉದ್ದೇಶವೇನು?

ಈ ಯೋಜನೆಯ ಮೂಲ ಉದ್ದೇಶ ಮೂರು ಮುಖ್ಯ ಗುರಿಗಳಲ್ಲಿ ಅಡಗಿದೆ. ಒಣಭೂಮಿ ರೈತರಿಗೆ ನೀರಾವರಿ ಒದಗಿಸುವುದು, ಕೃಷಿ ಉತ್ಪಾದನೆ ಮತ್ತು ಬೆಳೆ ವೈವಿಧ್ಯ ಹೆಚ್ಚಿಸುವುದು ಹಾಗೂ ರೈತರ ಆದಾಯ ವೃದ್ಧಿಸಿ ಬಡತನ ನಿರ್ಮೂಲನೆ ಮಾಡುವುದು. ಅಂತರ್ಜಲದ ಸುಸ್ಥಿರ ಬಳಕೆಯನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಕೃಷಿ ಚಟುವಟಿಕೆಗಳನ್ನು ಬಲಪಡಿಸುವ ಗುರಿ ಕೂಡ ಈ ಯೋಜನೆಗಿದೆ. ಈಗಾಗಲೇ ರಾಜ್ಯದಾದ್ಯಂತ ಸಾವಿರಾರು ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.

ಎಷ್ಟು ಸಹಾಯಧನ ಸಿಗುತ್ತದೆ?

ಸಾಮಾನ್ಯ ಜಿಲ್ಲೆಗಳಲ್ಲಿ ವೈಯಕ್ತಿಕ ಬೋರ್‌ವೆಲ್ ಯೋಜನೆಗೆ ₹3.50 ಲಕ್ಷದಿಂದ ₹4.00 ಲಕ್ಷ ವರೆಗೆ ಸಹಾಯಧನ ದೊರೆಯುತ್ತದೆ. ಆದರೆ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರಿನಂತಹ ಅಂತರ್ಜಲ ಮಟ್ಟ ಕುಸಿದ ಜಿಲ್ಲೆಗಳಲ್ಲಿ ₹4.50 ಲಕ್ಷ ವರೆಗೂ ಸಹಾಯ ಸಿಗಬಹುದು. ಸಹಕಾರಿ ಸಂಘ ಅಥವಾ ಗುಂಪು ಆಗಿ ಅರ್ಜಿ ಸಲ್ಲಿಸಿದರೆ ₹4 ರಿಂದ ₹9 ಲಕ್ಷ ವರೆಗೂ ಯೂನಿಟ್ ಕಾಸ್ಟ್ ಅನ್ವಯಿಸಬಹುದು.

ಈ ಯೋಜನೆಗೆ ಯಾರು ಅರ್ಹರು?

ಯೋಜನೆಗೆ ಅರ್ಹರಾಗಲು ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಮತ್ತು ಸಣ್ಣ ಅಥವಾ ಅತಿಸಣ್ಣ ರೈತರಾಗಿರಬೇಕು. ವಯಸ್ಸು 18 ರಿಂದ 55 ವರ್ಷಗಳೊಳಗಿರಬೇಕು. ಭೂ ಹಿಡುವಳಿ ವಿಷಯದಲ್ಲಿ, ಸಾಮಾನ್ಯ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ 20 ಗುಂಟೆ (ಅಂದರೆ 1.5 ಎಕರೆ) ಒಣಭೂಮಿ ಅಗತ್ಯ; ಆದರೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕೇವಲ 1 ಎಕರೆ ಸಾಕು. ಕುಟುಂಬದ ವಾರ್ಷಿಕ ಆದಾಯ ₹96,000 ರಿಂದ ₹98,000 ಮಿತಿಯೊಳಗಿರಬೇಕು (ಜಿಲ್ಲೆಗೆ ಅನುಗುಣವಾಗಿ ಬದಲಾಗಬಹುದು). ಅಲ್ಪಸಂಖ್ಯಾತರು, SC/ST, ಹಿಂದುಳಿದ ವರ್ಗ, ಮಹಿಳಾ ರೈತರು ಮತ್ತು ವಿಕಲಚೇತನ ರೈತರಿಗೆ ಆದ್ಯತೆ ನೀಡಲಾಗುತ್ತದೆ. ಒಂದು ಮುಖ್ಯ ಷರತ್ತು ಎಂದರೆ, ಆ ಭೂಮಿ ಈಗಾಗಲೇ ನೀರಾವರಿ ಸೌಲಭ್ಯ ಹೊಂದಿರಬಾರದು ಮತ್ತು ಪಟ್ಟಾ ಹೆಸರಿನಲ್ಲಿರಬೇಕು.
ಯೋಜನೆಗೆ ಅರ್ಹರಾಗಲು ಬೇಕಾದ ಮಾಹಿತಿಗಳೇನು?

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಜಾತಿ ಅಥವಾ ಅಲ್ಪಸಂಖ್ಯಾತ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, RTC/ಪಹಣಿ (ಭೂಮಿ ದಾಖಲೆ), ಬ್ಯಾಂಕ್ ಪಾಸ್‌ಬುಕ್, ಪಾಸ್‌ಪೋರ್ಟ್ ಗಾತ್ರದ ಫೋಟೋ, ಸ್ವಯಂ ಘೋಷಣಾ ಪತ್ರ, ಭೂಮಿ ತೆರಿಗೆ ಪಾವತಿ ರಸೀದಿ ಮತ್ತು ಸಣ್ಣ/ಅತಿಸಣ್ಣ ರೈತ ಪ್ರಮಾಣಪತ್ರ ಈ ದಾಖಲೆಗಳು ಅಗತ್ಯ. ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಇರುವುದೂ ಸೂಕ್ತ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಇದನ್ನೂ ಓದಿ: Bengaluru Auto: ಇದು ಆಟೋನಾ? ವಿಮಾನನಾ? ಟಿವಿ, ಫ್ಯಾನ್, ಬುಕ್ಸ್; ಬೆಂಗಳೂರು ಆಟೋ ಸಖತ್ ವೈರಲ್!

ಅರ್ಜಿ ಸಲ್ಲಿಸುವ ವಿಧಾನ ಎರಡು ರೀತಿಯಲ್ಲಿ ಇದೆ. ಆನ್‌ಲೈನ್ ಮಾರ್ಗ ಬಯಸುವವರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಫಾರ್ಮ್ ಭರ್ತಿ ಮಾಡಿ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು. ತಂತ್ರಜ್ಞಾನ ಬಳಸಲು ಕಷ್ಟವಾಗುವ ರೈತರು ಜಿಲ್ಲಾ ಅಥವಾ ತಾಲ್ಲೂಕು ಕಚೇರಿಗೆ ಅಥವಾ KMDC, DBCDC, ಅಂಬೇಡ್ಕರ್ ಅಭಿವೃದ್ಧಿ ನಿಗಮದಂತಹ ಸಂಬಂಧಿತ ನಿಗಮದ ಕಚೇರಿಗೆ ನೇರವಾಗಿ ಹೋಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸ್ವೀಕೃತವಾದ ನಂತರ ಭೂವಿಜ್ಞಾನಿಗಳು ಜಮೀನಿಗೆ ಭೇಟಿ ನೀಡಿ ಸರ್ವೆ ಮಾಡಿ ನೀರಿನ ಲಭ್ಯತೆ ಪರಿಶೀಲಿಸುತ್ತಾರೆ. ಅನುಮೋದನೆ ಸಿಕ್ಕ ನಂತರ ಬೋರ್‌ವೆಲ್ ಕೊರೆಯುವ ಕೆಲಸ ಪ್ರಾರಂಭವಾಗುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed