Last Updated:
Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಮಹತ್ವದ ನಿರ್ಧಾರ ಕೈಗೊಳ್ಳಲಿದೆಯಾ ಕೋರ್ಟ್? ಇಂದಿನ ವಿಚಾರಣೆಯಲ್ಲಿ ಏನಾಗಲಿದೆ?
ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದ ಟ್ರಯಲ್ ಇಂದು 64ನೇ ಸೆಷನ್ಸ್ ಕೋರ್ಟ್ನಲ್ಲಿ ನಡೆಯಲಿದೆ. ಈಗಾಗಲೇ ಸೆಷನ್ಸ್ ಕೋರ್ಟ್ಗೆ ಸಂಬಂಧಿಸಿದಂತೆ ಪೊಲೀಸ್ (Police) ಠಾಣೆಗಳ ನಿಯೋಜನೆ ಬದಲಾಗಿದ್ದು, ದರ್ಶನ್ (Darshan) ಪ್ರಕರಣ 59ನೇ ಸೆಷನ್ಸ್ ಕೋರ್ಟ್ಗೆ ವರ್ಗಾವಣೆಯಾಗಲಿದೆ.
ಈಗಾಗಲೇ ಪ್ರಕರಣದ ವಿಚಾರಣೆಯನ್ನ ಪ್ರತಿದಿನ ನಡೆಸಲು ಸುಪ್ರೀಂ ನಿರ್ದೇಶನ ನೀಡಿದ್ದು, ಇಂದು ಸೆಷನ್ಸ್ ಕೋರ್ಟ್ ಇದರ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜೂನ್ ಒಂದರಿಂದ ಹೊಸ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು, ವಾರದಲ್ಲಿ ಎರಡು ದಿನ ಅಥವಾ ನಾಲ್ಕು ದಿನ ವಿಚಾರಣೆ ನಡೆಸುವ ಅಧಿಕೃತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ಇಂದು 64ನೇ ಸೆಷನ್ಸ್ ಕೋರ್ಟ್ನಲ್ಲಿ ನಡೆಯಲಿದೆ. ಈಗಾಗಲೇ ಸೆಷನ್ಸ್ ಕೋರ್ಟ್ ಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳ ನಿಯೋಜನೆ ಬದಲಾಗಿದ್ದು, ದರ್ಶನ್ ಪ್ರಕರಣ 59 ನೇ ಸೆಷನ್ಸ್ ಕೋರ್ಟ್ ಗೆ ವರ್ಗಾವಣೆಯಾಗಲಿದೆ. ಈಗಾಗಲೇ ಪ್ರಕರಣದ ವಿಚಾರಣೆಯನ್ನ ಪ್ರತಿದಿನ ನಡೆಸಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದು, ಇಂದು ಸೆಷನ್ಸ್ ಕೋರ್ಟ್ ಇದರ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಜೂನ್ ಒಂದರಿಂದ ಹೊಸ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ವಾರದಲ್ಲಿ ಎರಡು ದಿನ ಅಥವಾ ನಾಲ್ಕು ದಿನ ವಿಚಾರಣೆ ನಡೆಸುವ ಅಧಿಕೃತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಇದರ ಮೇಲೆಯೇ ರೇಣುಕಾಸ್ವಾಮಿ ಕೇಸ್ ವಿಚಾರಣೆ ಎಷ್ಟು ವೇಗವಾಗಿ ನಡೆಯಲಿದೆ ಎನ್ನುವುದು ಗೊತ್ತಾಗಲಿದೆ. ಅಷ್ಟೇ ಅಲ್ಲದೆ ವಿಚಾರಣೆಯ ವೇಗದ ಮೇಲೆಯೇ ದರ್ಶನ್ ಜೈಲಿನಲ್ಲಿರುವುದು, ಹೊರ ಬರುವುದು ಎಲ್ಲವೂ ಡಿಪೆಂಡ್ ಆಗಿದೆ.
ವರದಿ: ಗಂಗಾಧರ ವಾಗಟ, ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು
Bangalore,Karnataka













