Fact Check: ಪಾಕಿಸ್ತಾನದಲ್ಲಿ ತನ್ನ ತಾಯಿಯನ್ನೇ ಮದುವೆಯಾದನಾ ಮಗ? ವೈರಲ್ ವಿಡಿಯೋ ನಿಜವೋ? ಸುಳ್ಳೋ? ಇಲ್ಲಿದೆ ಫ್ಯಾಕ್ಟ್ ಚೆಕ್ | Did the son marry his own mother in Pakistan Is the viral video real Here is a fact check | | ACTPnews

ಪಾಕಿಸ್ತಾನ ವೈರಲ್‌ ದೃಶ್ಯ


Last Updated:

ತಾಯಿಯನ್ನೇ ಮಗ ಮದುವೆಯಾಗಿದ್ದಾನೆ ಎಂಬ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇದನ್ನು ನೋಡಿ ನೆಟ್ಟಿಗರು ಭಾರೀ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಆದರೆ ಒಂದು ಕಡೆ ಇದು ಸುಳ್ಳು ಮಾಹಿತಿ ಅಂತಾನೂ ಹೇಳಲಾಗುತ್ತಿತ್ತು. ಹಾಗಿದ್ರೆ ಇದು ಎಷ್ಟು ಸತ್ಯ? ಎಷ್ಟು ಸುಳ್ಳು? ಎಂಬುದರ ಮಾಹಿತಿ ಇಲ್ಲಿದೆ ಓದಿ.

ಪಾಕಿಸ್ತಾನ ವೈರಲ್‌ ದೃಶ್ಯ
ಪಾಕಿಸ್ತಾನ ವೈರಲ್‌ ದೃಶ್ಯ

ಸೋಷಿಯಲ್‌ ಮೀಡಿಯಾದಲ್ಲಿ (Social Media) ಇತ್ತೀಚೆಗೆ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅದರಲ್ಲೂ ಕೆಲವೊಂದು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತದೆ. ಇದೀಗ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಪಾಕಿಸ್ತಾನದಲ್ಲಿ ಅಬ್ದುಲ್ ಅಹದ್ (Abdul Ahad) ಎಂಬ ವ್ಯಕ್ತಿ ತನ್ನ ತಾಯಿಯನ್ನು 18 ವರ್ಷಗಳ ನಂತರ ಮದುವೆಯಾಗಿದ್ದಾನೆ ಎಂದು ಹೇಳಲಾಗುತ್ತಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಇನ್ನು ಈ ವಿಡಿಯೋ ಜನರಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ನೋಡಿದ ಜನರಿಂದಲೂ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. 

ಹೌದು, ತಾಯಿಯನ್ನೇ ಮಗ ಮದುವೆಯಾಗಿದ್ದಾನೆ ಎಂಬ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇದನ್ನು ನೋಡಿ ನೆಟ್ಟಿಗರು ಭಾರೀ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಆದರೆ ಒಂದು ಕಡೆ ಇದು ಸುಳ್ಳು ಮಾಹಿತಿ ಅಂತಾನೂ ಹೇಳಲಾಗುತ್ತಿತ್ತು. ಹಾಗಿದ್ರೆ ಇದು ಎಷ್ಟು ಸತ್ಯ? ಎಷ್ಟು ಸುಳ್ಳು? ಎಂಬುದರ ಮಾಹಿತಿ ಇಲ್ಲಿದೆ ಓದಿ.

ಏನಿದು ವಿಡಿಯೋ?

ವಾಸ್ತವವಾಗಿ, ಟೈಮ್ಸ್ ಆಲ್ಜಿಬ್ರಾ ಹೆಸರಿನ ಸೋಷಿಯಲ್‌ ಮೀಡಿಯಾ ಅಕೌಂಟ್‌ನಿಂದ, “18 ವರ್ಷಗಳ ಕಾಲ ತನ್ನ ಬೆಳೆಸಿದ ತಾಯಿಯನ್ನೇ ಮಗ ಮದುವೆಯಾಗಿದ್ದಾನೆ ಎಂದು ಕ್ಯಾಪ್ಷನ್‌ ಹಾಕಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಸುದ್ದಿ ಸದ್ಯ ಪ್ರಪಂಚದಾದ್ಯಂತ ವೈರಲ್ ಆಗಿದೆ. ಆದರೆ ವೈರಲ್‌ ಬೆನ್ನಲ್ಲೇ ಅಬ್ದುಲ್ ಅಹದ್ ತನ್ನ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ತನ್ನ ತಾಯಿಯ ಬಗ್ಗೆ, ಆಕೆ ತನ್ನನ್ನು ಬೆಳೆಸಿದ ಬಗ್ಗೆ ಶೇರ್ ಮಾಡಿಕೊಂಡಿದ್ದಾನೆ.

ಪಾಕಿಸ್ತಾನ ವೈರಲ್‌ ದೃಶ್ಯ

ಅಸಲಿ ವಿಚಾರ ಇಲ್ಲಿದೆ

ವಾಸ್ತವವಾಗಿ, ಟೈಮ್ಸ್ ಅಲ್ಜಿಬ್ರಾ ಹೆಸರಿನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಅಬ್ದುಲ್ ಅಹದ್ ತನ್ನ ತಾಯಿಯನ್ನು ಮದುವೆಯಾಗಿದ್ದಾನೆ ಎಂದು ಹೇಳಿಕೊಂಡಿದೆ. ಆದರೆ ಈ ವಿಡಿಯೋವನ್ನು ಪರಿಶೀಲಿಸಿದಾಗ ಈ ಆರೋಪ ಸುಳ್ಳು ಎಂದು ಸಾಬೀತಾಗಿದೆ ಎಂದು ಎಬಿಪಿ ವರದಿ ಮಾಡಿದೆ. ವರದಿ ಪ್ರಕಾರ, ಅಬ್ದುಲ್ ಅಹದ್ ಎಂಬ ವ್ಯಕ್ತಿ, ಇಲ್ಲಿ ತನ್ನ ತಾಯಿಯನ್ನು ಮದುವೆಯಾಗಿಲ್ಲ, ಬದಲಿಗೆ ಅವನು ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಿದ್ದಾನೆ ಎಂದು ಹೇಳಲಾಗಿದೆ.

ತಾಯಿಯ ಸಂತೋಷಕ್ಕಾಗಿ ಈ ನಿರ್ಧಾರ

ಅಬ್ದುಲ್ ತನ್ನ ತಾಯಿಯ ಎರಡನೇ ಮದುವೆಯ ಸಂದರ್ಭದಲ್ಲಿ ಭಾವನಾತ್ಮಕ ವಿಡಿಯೋವೊಂದನ್ನು ಸಹ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಅವರು ತಮ್ಮ ತಾಯಿಯೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ ಮತ್ತು ಅವರ ತಾಯಿ 18 ವರ್ಷಗಳ ಕಾಲ ಮಕ್ಕಳನ್ನು ಹೇಗೆ ನೋಡಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ನಮಗಾಗಿ ತನ್ನ ಸಂತೋಷವನ್ನು ಸಹ ಆಕೆ ತ್ಯಾಗ ಮಾಡಿದ್ದಾಳೆ. ಆದ್ದರಿಂದ ತನ್ನ ತಾಯಿ ಇನ್ನಾದರು ಶಾಂತಿಯುತ ಮತ್ತು ಪ್ರೀತಿಯ ಜೀವನವನ್ನು ಹೊಂದಬೇಕೆಂದು ನಾನು ಬಯಸುತ್ತೇನೆ ಎಂದು ಅಬ್ದುಲ್ ಹೇಳಿದರು. ಇದೇ ಕಾರಣಕ್ಕೆ ಅಬ್ದುಲ್‌ 2ನೇ ಮದುವೆ ಮಾಡಲು ನಿರ್ಧರಿಸಿದ್ದಾನೆ ಎಂದು ಹೇಳಿದ್ದಾರೆ.

ಫಾಲೋವರ್ಸ್‌ಗೆ ಥ್ಯಾಂಕ್ಸ್ ಹೇಳಿದ ಅಬ್ದುಲ್!

ಇನ್ನು ಆರಂಭದಲ್ಲಿ ಈ ಬಗ್ಗೆ ಅಬ್ದುಲ್‌ ಅಹದ್‌ ಇದನ್ನು ಶೇರ್ ಮಾಡಲು ಹಿಂಜರಿದ್ರಂತೆ. ಆದರೆ ಅವರು ಪೋಸ್ಟ್ ಮಾಡಿದಾಗ, ಅವರು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಮೆಚ್ಚುಗೆ ಪಡೆದಿದ್ದಾರೆ. ಇನ್ನು ಪೋಸ್ಟ್ ಮೂಲಕ ಅಬ್ದುಲ್‌ ತನ್ನ ಫಾಲೋವರ್ಸ್‌ಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ!

ಆರಂಭದಲ್ಲಿ ಸುಳ್ಳು ಸುದ್ದಿಯನ್ನು ನೋಡಿ ಭಾರೀ ವಿರೋಧ ವ್ಯಕ್ತವಾಗಿದ್ದ ವಿಡಿಯೋ, ಸದ್ಯ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಬ್ದುಲ್ ಮತ್ತು ಆತನ ತಾಯಿಯ ಈ ಕಥೆ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ತಾಯಿ ಮತ್ತು ಮಗನ ಆಳವಾದ ಬಾಂಧವ್ಯ ಮತ್ತು ಮದುವೆಯಿಂದ ತಾಯಿ, ಮಗಗ ಸಂತೋಷವನ್ನು ಈ ವಿಡಿಯೋದಲ್ಲಿ ನೋಡಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಅಬ್ದುಲ್ ಅವರ ಚಿಂತನೆ ಹಾಗೂ ಅವರ ಕಾರ್ಯವೈಖರಿ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, “ನಿಮ್ಮ ಆಲೋಚನೆ ಸ್ಪೂರ್ತಿದಾಯಕವಾಗಿದೆ. ಪ್ರತಿಯೊಬ್ಬ ತಾಯಿಯೂ ಇಂತಹ ಮಗನನ್ನು ಪಡೆಯಲಿ” ಎಂದು ಬರೆದಿದ್ದಾರೆ. ಮತ್ತೊಬ್ಬರು ‘ನೀವು ಮಾಡಿದ್ದು ಸಮಾಜಕ್ಕೆ ಉದಾಹರಣೆ’ ಎಂದರು. ಅಬ್ದುಲ್ ಅವರ ಈ ಹೆಜ್ಜೆ ಸಮಾಜದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಸಂತೋಷಕ್ಕಾಗಿ ಉತ್ತಮ ಸಂದೇಶವನ್ನು ನೀಡುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed