Last Updated:
ಮದುವೆಯಾಗಿ ಬಂದವಳನ್ನೇ ನಿರ್ದೇಶಕರ ಜೊತೆ ಮಲಗೋಕೆ ಹೇಳಿದ್ರಾ ಅಮೀರ್ ಖಾನ್ ಮಲಸಹೋದರ? ಇವಾ ಗ್ರೋವರ್ ಬಿಚ್ಚಿಟ್ಟ ಕಹಿ ದಾಂಪತ್ಯದ ನೆನಪು.
ಕೆಲವೊಂದು ಸೆಲೆಬ್ರಿಟಿಗಳ (Celebrities) ಸಂದರ್ಶನ ಹಲವಾರು ಸ್ಫೋಟಕ ಸಂಗತಿಗಳನ್ನು ರಿವೀಲ್ ಮಾಡುತ್ತದೆ. ಅಂಥದ್ದೇ ಒಂದು ಘಟನೆ ನಡೆದಿದ್ದು ನಟಿ ಇವಾ ಗ್ರೋವರ್ (Eva Grover) ತಮ್ಮ ಮಾಜಿ ಪತಿ ಹೈದರ್ ಅಲಿ ಖಾನ್ ಬಗ್ಗೆ ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಹೈದರ್ ಅವರು ಆಮಿರ್ ಖಾನ್ ಅವರ ಮಲಸಹೋದರ.
ಹೈದರ್ ನಿರ್ದೇಶಕರೊಂದಿಗೆ ಮಲಗೋಕೆ ತನ್ನ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಇವಾ ಗ್ರೋವರ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಕರಿಷ್ಮಾ ಕಾ ಕರಿಷ್ಮಾ ಮತ್ತು ರೆಡಿ ನಂತಹ ಪ್ರಾಜೆಕ್ಟ್ಗಳ ಮೂ;ಲ ಹೆಸರುವಾಸಿಯಾದ ಇವಾ, ಹೈದರ್ ಅವರೊಂದಿಗಿನ ತಮ್ಮ ಸಂಕಷ್ಟದ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದು ಶಾಕಿಂಗ್ ಆಗಿದೆ.
ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಮಾತುಕತೆಯಲ್ಲಿ, ತಮ್ಮ ಗಂಡನಾಗಿದ್ದ ಹೈದರ್ ಅವರು ಇತರ ಪುರುಷರ ಜೊತೆ “ದೈಹಿಕವಾಗಿ ಆಪ್ತರಾಗಲು” ಕೇಳಿದ್ದರೇ ಎಂದು ಪ್ರಶ್ನಿಸಿದಾಗ ಇವಾ ಉತ್ತರಿಸಿದರು.
ನಟಿ “ಅವರು ಇದಕ್ಕಾಗಿ ನನಗೆ ಒತ್ತರ ಹೇರಿದ್ದರು” ಎಂದು ಹೇಳಿದರು. ನಂತರ ಹೈದರ್ ಪ್ರಾಜೆಕ್ಟ್ಗಳಿಗಾಗಿ ನಿರ್ದೇಶಕರು ಮತ್ತು ನಿರ್ಮಾಪಕರೊಂದಿಗೆ ಮಲಗಲು ಒತ್ತಾಯಿಸಿದ್ದಾರೆಯೇ ಎಂದು ಕೇಳಲಾಯಿತು.
ಇವಾ ಉತ್ತರಿಸಿ, “ನನಗೆ ಕೆಲಸದ ಕೊರತೆ ಇರಲಿಲ್ಲ. ಆದರೆ ನಾನು ಕೆಲಸ ಬಿಟ್ಟಿದ್ದಂತಹ ಸಂದರ್ಭದಲ್ಲಿ ನನ್ನ ಎಲ್ಲಾ ಎಫ್ಡಿಗಳನ್ನೂ ಬ್ರೇಕ್ ಮಾಡಿಸಿದ್ರು. ಕಾರುಗಳನ್ನು ಮಾರಿದ್ದೆ ಎಂದಿದ್ದಾರೆ.
ಆದರೇನು ಬಂತು. ಆದರೆ ಪ್ರಪೋಸಲ್ ಬರುತ್ತಲೇ ಇರುತ್ತವೆ. ದೊಡ್ಡ ದೊಡ್ಡ ಪ್ರೊಫೈಲ್ ಪ್ರಪೋಸಲ್ ಬರುತ್ತವೆ. ನನ್ನ ಮಾಜಿ ಪತಿ ಅದರಲ್ಲೇನಿದೆ? ಮಾಡು. ಇದೆಲ್ಲಾ ಮಾಡಬೇಕಾಗುತ್ತದೆ. ನಾನು ಮಾಡಿದ್ದೆ ಮಕ್ಕಳಿಗಾಗಿ. ಆದರೆ ನಂತರ ತಿರುಗಿ ನೋಡಲಿಲ್ಲ ಎಂದಿದ್ದಾರೆ.
ಹೈದರ್ ಗೆ ಸ್ಕಿಜೋಫ್ರೇನಿಯಾ ಇದೆ ಎಂದು ನಟಿ ಬಹಿರಂಗಪಡಿಸಿದರು. ಆದರೆ ಅವರು ಮದುವೆಯಾದಾಗ ಅವನ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲಿಲ್ಲ. ತನ್ನ ಮದುವೆ ಬೇಗನೆ ಹಿಂಸಾತ್ಮಕವಾಗಿ ಬದಲಾಗಿತ್ತು ಎಂದಿದ್ದಾರೆ ನಟಿ. ತನ್ನ ದೇಹದಲ್ಲಿ ಗಾಯಕಂಡ ನಂತರ ಮನೆಯವರು ಆತಂಕಗೊಂಡರು, ಆಗ ನಮ್ಮ ವೈವಾಹಿಕ ಜೀವನ ಚೆನ್ನಾಗಿಲ್ಲ ಎಂದಿದ್ದೆ ಎಂದು ನಟಿ ತಿಳಿಸಿದ್ದಾರೆ.
“ಇಂದು, ಹೈದರ್ ಉತ್ತಮ ಸ್ಥಿತಿಯಲ್ಲಿಲ್ಲ. ಅವನಿಗೆ ಮನೆ ಇಲ್ಲ. ಆಹಾರಕ್ಕೂ ಕಷ್ಟಪಡುತ್ತಾನೆ. ಕೆಲವೊಮ್ಮೆ ಯಾರೋ ಒಬ್ಬ ಸ್ನೇಹಿತ ಅವನಿಗೆ ಸಹಾಯ ಮಾಡುತ್ತಾನೆ. ನನಗೆ ದುಃಖವಾಗುತ್ತದೆ. ಏನೇ ಆದರೂ, ಮಾನವೀಯ ದೃಷ್ಟಿಕೋನದಿಂದ, ಅವರು ಒಂದು ಕಾಲದಲ್ಲಿ ನನ್ನ ಪತಿಯಾಗಿದ್ದರು. ಅವರಿಗೆ ಮದ್ಯ ನೀಡುತ್ತಲೇ ಇರುವ ಜನರಿಂದ ಸುತ್ತುವರೆದಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ಅವರಿಗೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವರು ಬಹಳಷ್ಟು ಅನುಭವಿಸಿದ್ದಾರೆ ಎಂದಿದ್ದಾರೆ.
Bangalore,Karnataka
Jul 24, 2026 11:20 AM IST














