Engagement: ಕೊರಿಯನ್ ಯುವತಿಯೊಂದಿಗೆ ಮಹೇಶ್ ಬಾಬು ಸೋದರಳಿಯನ ನಿಶ್ಚಿತಾರ್ಥ; ಯಾರು ಈ ಹೈಯಿನ್ ಕಿಮ್? | | ACTPnews

ಯಾರು ಈ ಹೈಯಿನ್ ಕಿಮ್?


Last Updated:

ಮಹೇಶ್ ಬಾಬು ಸೋದರಳಿಯ ಸಿದ್ದಾರ್ಥ್ ಗಲ್ಲಾ ಕೊರಿಯನ್ ಯುವತಿ ಹೈನ್ ಕಿಮ್ ಜೊತೆ ಇಟಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಿದ್ದರು.

ಯಾರು ಈ ಹೈಯಿನ್ ಕಿಮ್?
ಯಾರು ಈ ಹೈಯಿನ್ ಕಿಮ್?

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು (Superstar Mahesh Babu) ಸದ್ಯ ವಾರಣಾಸಿ ಸಿನಿಮಾ ಶೂಟಿಂಗ್‌ನಲ್ಲಿ (Varanasi Movie) ಬ್ಯುಸಿಯಾಗಿದ್ದಾರೆ. ನಿರ್ದೇಶಕ ರಾಜಮೌಳಿ (Director Rajamouli) ಅವರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ. ಇದರ ನಡುವೆಯೇ ಮಹೇಶ್ ಬಾಬು ಮನೆಯಲ್ಲಿ ಮದುವೆ ಮನೆಯ ಸಂಭ್ರಮ ಹೆಚ್ಚಾಗಿದೆ. ಮಹೇಶ್ ಬಾಬು ಸೋದರಳಿಯ ಸಿದ್ದಾರ್ಥ್ (Siddharth Galla), ದಾಂಪತ್ಯ ಜೀವನದಲ್ಲಿ ಕಾಲಿಡುತ್ತಿದ್ದು, ಸಿದ್ದಾರ್ಥ್ ಅವರ ನಿಶ್ಚಿತಾರ್ಥದ (Engagement) ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮಹೇಶ್ ಬಾಬು ಪತ್ನಿ ಪೋಸ್ಟ್!

ಸೂಪರ್ ಸ್ಟಾರ್ ಮಹೇಶ್ ಬಾಬು ಸೋದರಳಿಯ ಸಿದ್ದಾರ್ಥ್ ಕೊರಿಯನ್ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಭಾನುವಾರ ಸಿದ್ದಾರ್ಥ್ ಗಲ್ಲಾ ನಿಶ್ಚಿತಾರ್ಥ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ. ನಿಶ್ಚಿತಾರ್ಥ ಸಂದರ್ಭದ ಫೋಟೋಗಳನ್ನು ಮಹೇಶ್ ಬಾಬು ಪತ್ನಿ ನಮ್ರತಾ, ಮಹೇಶ್ ಬಾಬು ಸಹೋದರಿ ಹಾಗೂ ಅವರ ರಮೇಶ್ ಬಾಬು ಅವರ ಮಗಳಾದ ಭಾರತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಸಿನಿಮಾದಲ್ಲಿ ಅಣ್ಣ ಬ್ಯುಸಿ, ತಮ್ಮ ಬ್ಯುಸಿನೆಸ್​​ನಲ್ಲಿ ಬ್ಯುಸಿ!

ಮುಖ್ಯವಾಗಿ ಈ ಫೋಟೋಗಳಲ್ಲಿ ಭಾರತಿ ಸ್ಪೆಷಲ್ ಅಟ್ರಾಕ್ಷನ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಮಹೇಶ್ ಬಾಬು ಅವರ ಸಹೋದರಿ ಪದ್ಮಾವತಿ-ಗಲ್ಲಾ ಜಯದೇವ್ ಅವರಿಗೆ ಇಬ್ಬರು ಪುತ್ರರಿದ್ದಾರೆ. ಇವರ ಮೊದಲ ಮಗ ಅಶೋಕ್ ಈಗಾಗಲೇ ಟಾಲಿವುಡ್‌ನಲ್ಲಿ ಹೀರೋ ಆಗಿ ನಟಿಸುತ್ತಿದ್ದು, ಸದ್ಯ ಆತ ವೀಸಾ ಅನ್ನೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾನೆ.

ಇಟಲಿಯಲ್ಲಿ ಅದ್ಧೂರಿಯಾಗಿ ನಡೆದ ನಿಶ್ಚಿತಾರ್ಥ

ಉಳಿದಂತೆ ಪದ್ಮಾವತಿ-ಗಲ್ಲಾ ಜಯದೇವ್ ದಂಪತಿಯ ಎರಡನೇ ಮಗ ಸಿದ್ದಾರ್ಥ್ ಕುಟುಂಬಕ್ಕೆ ಸಂಬಂಧಿಸಿದ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಸಿದ್ದಾರ್ಥ್ ಕೊರಿಯಾ ಮೂಲಕ ಹೈನ್ ಕಿಮ್ ಎಂಬ ಯುವತಿಯೊಂದಿಗೆ ಪ್ರೀತಿಯಲ್ಲಿದ್ದು, ಎರಡು ಕುಟುಂಬಗಳ ಸಮ್ಮತಿಯೊಂದಿಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಹೇಶ್ ಬಾಬು ಅವರ ಕುಟುಂಬ ಸಮೇತ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ನಿಶ್ಚಿತಾರ್ಥ ಕಾರ್ಯಕ್ರಮ ಇಟಲಿಯಲ್ಲಿ ನಡೆದಿದ್ದು, ಕುಟುಂಬ ಸದಸ್ಯರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed