Last Updated:
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನ ಪ್ರದರ್ಶನವನ್ನ ಟೀಕಿಸಿದ್ದಾರೆ. ಪಾಕಿಸ್ತಾನದ ಪ್ರಸ್ತುತ ಬ್ಯಾಟಿಂಗ್ ತಂಡವು ಅಂತರರಾಷ್ಟ್ರೀಯ ಮಟ್ಟದಲ್ಲಿ ಇದುವರೆಗಿನ ಅತ್ಯಂತ ಕಳಪೆ ತಂಡ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಟ್ರೋಲ್ ಮಾಡಿದ್ದಾರೆ.
ಪಾಕಿಸ್ತಾನ ತಂಡ ಇಂಗ್ಲೆಂಡ್ (India vs England) ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ (Test Series) ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದೆ. ಇಂಗ್ಲೆಂಡ್ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ ಗಲ್ಲಿ ಕ್ರಿಕೆಟ್ನಂತೆ ಆಡುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 103 ರನ್ಗಳಿಂದ ಸೋಲು ಕಂಡಿದ್ದ ಪಾಕಿಸ್ತಾನ ತಂಡ, ಇದೀಗ 2ನೇ ಪಂದ್ಯದಲ್ಲಿ ಅದಕ್ಕಿಂತಲೂ ಕೆಟ್ಟ ಪ್ರದರ್ಶನ ತೋರುತ್ತಿದೆ. 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 110 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಪ್ರದರ್ಶನ ತೋರಿದೆ. ಈ ಪ್ರದರ್ಶನದ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಪಾಕಿಸ್ತಾನ ತಂಡವನ್ನ ಟ್ರೋಲ್ ಮಾಡಿದ್ದು, ನಿಮಗಿಂತ ನಮ್ಮ ಕೌಂಟಿ ಲೀಗ್ನ ದ್ವಿತೀಯ ದರ್ಜೆ ತಂಡಗಳೇ ಬೆಸ್ಟ್ ಎಂದು ಹೇಳಿದ್ದಾರೆ.














