Egg & Chicken Price Hike: ಜೇಬು ಸುಡುತ್ತೆ ಬಾಡೂಟ; ಮೊಟ್ಟೆ, ಚಿಕನ್ ರೇಟ್ ಕೇಳಿದ್ರೆ ಶಾಕ್ ಆಗ್ತೀರಾ! ಅಷ್ಟಕ್ಕೂ ದಿಢೀರ್ ಏರಿಕೆಗೆ ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಮೊಟ್ಟೆ ಬೆಲೆ ಏರಿಕೆ


Last Updated:

ಮೊಟ್ಟೆ ಮತ್ತು ಚಿಕನ್ ಖರೀದಿಸುವವರೇ ಗಮನಿಸಿ! ಕರ್ನಾಟಕದಲ್ಲಿ ದರ ಮತ್ತೆ ಏರಿಕೆಯಾಗಿದೆ. ಚಿಕನ್ ₹350 ಗಡಿ ತಲುಪಿದ್ದರೆ, ಒಂದು ಡಜನ್ ಮೊಟ್ಟೆ ₹90–100ಕ್ಕೆ ಮಾರಾಟವಾಗುತ್ತಿದೆ. ಇದರ ಹಿಂದಿನ ಕಾರಣಗಳು ಮತ್ತು ಮುಂದಿನ ದಿನಗಳ ಅಂದಾಜು ತಿಳಿಯಿರಿ.

ಮೊಟ್ಟೆ ಬೆಲೆ ಏರಿಕೆ
ಮೊಟ್ಟೆ ಬೆಲೆ ಏರಿಕೆ

ಬೆಂಗಳೂರು: ದಿನವೂ ಮಿಸ್ ಮಾಡದೆ ಪ್ರೋಟೀನ್ (Protein) ಬೇಕು ಅಂತ ಮೊಟ್ಟೆ ತಿನ್ನೋರಿಗೆ, ಭಾನುವಾರ ಬಂದ್ರೆ ಚಿಕನ್ (Chicken) ಊಟ ಬೇಕೇ ಬೇಕು ಅನ್ನೋರಿಗೆ ಇದೊಂದು ದೊಡ್ಡ ಆಘಾತ. ಹೌದು, ಕೋಳಿ ಮಾಂಸ ಮತ್ತು ಮೊಟ್ಟೆಯ ಬೆಲೆ ದಿಢೀರನೆ ಗಗನಕ್ಕೇರಿದ್ದು, ಈ ಬೆಳವಣಿಗೆ ಬಗ್ಗೆ ಹಲವರು ಊಹಿಸಿಯೂ ಇರಲಿಲ್ಲ! ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ ಅನ್ನೇ ಈ ಬೆಲೆ ಏರಿಕೆ ಸಂಪೂರ್ಣವಾಗಿ ಏರುಪೇರು ಮಾಡಿದೆ. ಒಂದು ನಿರ್ಧಾರ ಅಥವಾ ಒಂದು ಬದಲಾವಣೆ ಸಾವಿರಾರು ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಎಷ್ಟಿದೆ ಗೊತ್ತಾ ಇಂದಿನ ರೇಟ್?

ಕೆಲವೇ ದಿನಗಳ ಹಿಂದೆ 250 ರೂಪಾಯಿ ಆಸುಪಾಸಿನಲ್ಲಿದ್ದ ಸ್ಕಿನ್‌ಲೆಸ್ ಚಿಕನ್ (Skinless Chicken) ಬೆಲೆ, ಈಗ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬರೋಬ್ಬರಿ 340 ರಿಂದ 350 ರೂಪಾಯಿ ಗಡಿ ದಾಟಿದೆ. ಇನ್ನು ವಿತ್ ಸ್ಕಿನ್ ಚಿಕನ್ 320 ರೂ. ಹಾಗೂ ಜೀವಂತ ಕೋಳಿ ಬೆಲೆ ಕೆಜಿಗೆ 210 ರೂ. ದಾಟಿದೆ. ಇದು ಚಿಕನ್ ಕಥೆಯಾದರೆ, ಬಡವರ ಪ್ರೊಟೀನ್ ಎಂದೇ ಕರೆಯಲ್ಪಡುವ ಮೊಟ್ಟೆ ಕಥೆ ಇನ್ನಷ್ಟು ರೋಚಕ. ಕೇವಲ 80 ರೂಪಾಯಿಗೆ ಸಿಗುತ್ತಿದ್ದ ಒಂದು ಡಜನ್ ಮೊಟ್ಟೆ ಈಗ 90 ರಿಂದ 100 ರೂ. ತಲುಪಿದೆ. ರಿಟೇಲ್ ಅಂಗಡಿಗಳಲ್ಲಿ ಒಂದು ಬಿಡಿ ಮೊಟ್ಟೆಗೆ 8.50 ಯಿಂದ 10 ರೂಪಾಯಿವರೆಗೂ ಮಾರಾಟವಾಗುತ್ತಿದೆ! ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (NECC) ದತ್ತಾಂಶದ ಪ್ರಕಾರವೇ, ಮೇ ತಿಂಗಳಲ್ಲಿ 100 ಮೊಟ್ಟೆಗೆ 598.5 ರೂ. ಇದ್ದ ಹೋಲ್ ಸೇಲ್ ರೇಟ್, ಜೂನ್‌ನಲ್ಲಿ 671.7 ರೂ.ಗೆ ಏರಿ, ಈಗ ಜುಲೈನಲ್ಲಿ 710 ರೂ.ಗೆ ಮುಟ್ಟಿದೆ.

ಅಷ್ಟಕ್ಕೂ ಇದರ ಹಿಂದಿನ ಕಾರಣ ಏನು?

ಇಲ್ಲೇ ಇರೋದು ಅಸಲಿ ಟ್ವಿಸ್ಟ್. ಮಳೆಗಾಲ ಶುರುವಾಗಿದೆ, ಚಳಿಗೆ ಮೊಟ್ಟೆ, ಚಿಕನ್ ತಿನ್ನೋರು ಹೆಚ್ಚಾಗಿದ್ದಾರೆ. ಬೇಡಿಕೆ ಏನೋ ಹೆಚ್ಚಿದೆ, ಆದರೆ ಸಪ್ಲೈ ಮಾತ್ರ ಪಾತಾಳಕ್ಕೆ ಕುಸಿದಿದೆ!

ಬೆಂಗಳೂರಿಗೆ ಪ್ರತಿದಿನ 65-70 ಲಕ್ಷ ಮೊಟ್ಟೆ ಬೇಕು. ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಮುಂತಾದ ಕಡೆಗಳಿಂದ 2.5-3 ಕೋಟಿ ಮೊಟ್ಟೆ ಉತ್ಪಾದನೆಯಾದರೂ, ನಮಗೆ ತಮಿಳುನಾಡಿನ ನಾಮಕ್ಕಲ್‌ನಿಂದ ದಿನವೂ 30-40 ಲಕ್ಷ ಮೊಟ್ಟೆಗಳು ಬರಲೇಬೇಕು. ಆದರೆ ನೆರೆಯ ಆಂಧ್ರ ಮತ್ತು ತಮಿಳುನಾಡಿನಲ್ಲಿ ವಿಪರೀತ ಬಿಸಿಲಿನ ತಾಪಮಾನವಿದ್ದ ಕಾರಣ, ಕೋಳಿಗಳ ಮೊಟ್ಟೆ ಇಡುವ ಸಾಮರ್ಥ್ಯವೇ ಕಡಿಮೆಯಾಗಿದೆ. (ಮೊಟ್ಟೆ ಉತ್ಪಾದನೆಗೆ 25°C ಗಿಂತ ಕಡಿಮೆ ತಾಪಮಾನ ಅತ್ಯಂತ ಸೂಕ್ತ). ಜೊತೆಗೆ, ಬಿಸಿಲಿನ ಬೇಗೆಗೆ ಕೋಳಿಗಳು ಮೃತಪಡುತ್ತಿರುವುದು ಮತ್ತು ಕೋಳಿ ಆಹಾರದ ವೆಚ್ಚ ಹೆಚ್ಚಾಗಿರುವುದು ಈ ದಿಢೀರ್ ಏರಿಕೆಗೆ ಮುಖ್ಯ ಕಾರಣ.

ಇಲ್ಲಿಯೇ ಕಥೆ ಮುಗಿಯುವುದಿಲ್ಲ! ಮುಂದೆ ಏನಾಗಲಿದೆ?

ಇದನ್ನೂ ಓದಿ: BMTC Big Update: ಟ್ರಾಫಿಕ್‌ ಸಮಸ್ಯೆಗೆ ಬೈ ಬೈ; ನಿಮ್ಮ 2 ತಾಸು ಉಳಿಸಲಿದೆ ಈ ಬಸ್‌ ಸಂಪರ್ಕ, 115KM ಪ್ರಯಾಣ ಸಲೀಸು!

ಈ ಸುದ್ದಿ ಓದಿದ ಬಳಿಕ ನಿಮಗೂ ಒಂದು ಪ್ರಶ್ನೆ ಬರಬಹುದು. ಹಾಗಾದ್ರೆ ಈ ರೇಟ್ ಯಾವಾಗ ಕಮ್ಮಿ ಆಗುತ್ತೆ? ಸದ್ಯಕ್ಕೆ ಮದುವೆ ಮತ್ತು ಇತರ ಶುಭ ಸಮಾರಂಭಗಳ ಸೀಸನ್ ಶುರುವಾಗಿದೆ. ಹೋಟೆಲ್, ರೆಸ್ಟೋರೆಂಟ್‌ಗಳಿಂದ ಬೇಡಿಕೆ ಹೆಚ್ಚುತ್ತಲೇ ಇದೆ. NECC ಕರ್ನಾಟಕ ವಲಯದ ಅಧ್ಯಕ್ಷರಾದ ಎಂ.ಎಸ್.ಆರ್. ಪ್ರಸಾದ್ ಅವರ ಪ್ರಕಾರ, “ಉತ್ಪಾದನೆ ಶೇ. 10ರಷ್ಟು ಕುಸಿದಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಉತ್ಪಾದನೆ ಸಹಜ ಸ್ಥಿತಿಗೆ ಮರಳಿ, ಬೆಲೆ ಇಳಿಯಲು ಇನ್ನೂ ಕನಿಷ್ಠ ಎರಡು ತಿಂಗಳಾದರೂ ಬೇಕು.” ಹಾಗಾಗಿ, ಮುಂದಿನ ಎರಡು ತಿಂಗಳು ನಿಮ್ಮ ಜೇಬಿಗೆ ಕತ್ತರಿ ಗ್ಯಾರಂಟಿ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed