Duniya Vijay: ವಿನಯ್ ‘ಬಂಗಾರ’ ಎಂದ ದುನಿಯಾ ವಿಜಯ್ | | ACTPnews

ದೊಡ್ಮನೆ ವಿನಯ್ ರಾಜ್‌ಕುಮಾರ್‌ 'ಬಂಗಾರ'; ದುನಿಯಾ ವಿಜಯ್ ಹೀಗೆ ಹೇಳಿದ್ಯಾಕೆ?


Last Updated:

ದೊಡ್ಮನೆಯ ವಿನಯ್ ರಾಜ್‌ಕುಮಾರ್ ತುಂಬಾನೆ ಒಳ್ಳೆಯ ಮನುಷ್ಯ ಆಗಿದ್ದಾರೆ. ಒಳ್ಳೆಯ ಮನಸ್ಸಿನ ಈ ನಾಯಕನನ್ನ ನಾನು ‘ಬಂಗಾರ’ ಅಂತಲೇ ಕರೆಯುತ್ತೇನೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ಸಿಟಿ ಲೈಟ್ಸ್ ಚಿತ್ರದ ನಾಯಕಿಯನ್ನ ಏನಂತಾ ಕರೆಯುತ್ತಾರೆ ಗೊತ್ತಾ? ಅದು ಇಲ್ಲಿದೆ ಓದಿ.

ದೊಡ್ಮನೆ ವಿನಯ್ ರಾಜ್‌ಕುಮಾರ್‌ 'ಬಂಗಾರ'; ದುನಿಯಾ ವಿಜಯ್ ಹೀಗೆ ಹೇಳಿದ್ಯಾಕೆ?
ದೊಡ್ಮನೆ ವಿನಯ್ ರಾಜ್‌ಕುಮಾರ್‌ ‘ಬಂಗಾರ’; ದುನಿಯಾ ವಿಜಯ್ ಹೀಗೆ ಹೇಳಿದ್ಯಾಕೆ?

ಸಿಟಿ ಲೈಟ್ಸ್ (City Lights) ಡೈರೆಕ್ಟರ್ ದುನಿಯಾ ವಿಜಯ್ (Duniya Vijay) ತಮ್ಮ ಚಿತ್ರದ ನಾಯಕ ಮತ್ತು ನಾಯಕಿಯನ್ನ ಕೊಂಡಾಡಿದ್ದಾರೆ. ನಾಯಕಿಯನ್ನ ‘ಕಂದಮ್ಮ’ ಅಂತ ಬಣ್ಣಿಸಿದ್ದಾರೆ. ನಾಯಕನನ್ನ ‘ಬಂಗಾರ’ ಅಂತಲೇ ಹೇಳಿದ್ದಾರೆ. ಚಿತ್ರದ ಮೊದಲ ಹಾಡು ಕಂದಮ್ಮ ರಿಲೀಸ್ ಆಗಿದೆ. ಇದರ ಸಂಭ್ರಮದಲ್ಲಿಯೇ ಪತ್ರಕರ್ತರ ಪ್ರಶ್ನೆಗೆ ದುನಿಯಾ ವಿಜಯ್ ಕುಮಾರ್ ಇದನ್ನ ಹೇಳಿದ್ದಾರೆ. ವಿಶೇಷವೆಂದ್ರೆ ಚಿತ್ರದ ನಾಯಕಿ ಬೇರೆ ಯಾರೋ ಅಲ್ಲ. ಚಿಕ್ಕಮಗಳು ಮೋನಿಷಾ ವಿಜಯ್‌ಕುಮಾರ್ (Monisha Vijaykumar) ಅವರೇ ಈ ಚಿತ್ರದ ಹೀರೋಯಿನ್ ಆಗಿದ್ದಾರೆ. ಬಂಗಾರ ಅಂತ ಹೇಳಿರೋ ನಾಯಕ ಎಲ್ಲರಿಗೂ ಗೊತ್ತಿರೋ ನಟರೇ ಆಗಿದ್ದಾರೆ. ಈಗಾಗಲೇ ಹೇಳಿದಂತೆ ವಿನಯ್ ರಾಜಕುಮಾರ್ (Vinay Rajkumar) ಈ ಚಿತ್ರದ ನಾಯಕರಾಗಿದ್ದಾರೆ. ಇವರ ಬಗ್ಗೆ ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

ರಾಜ್‌ ಮೊಮ್ಮಗ ಬಂಗಾರ

ರಾಜ್‌ಕುಮಾರ್ ಅವರ ಮೊಮ್ಮಗ ವಿನಯ್ ರಾಜ್‌ಕುಮಾರ್ ಸಿಟಿ ಲೈಟ್ಸ್ ಚಿತ್ರದ ನಾಯಕರಾಗಿದ್ದಾರೆ. ಡೈರೆಕ್ಟರ್ ದುನಿಯಾ ವಿಜಯ್ ಕುಮಾರ್‌ ಅವರಿಗೆ ವಿನಯ್ ರಾಜ್‌ಕುಮಾರ್ ಅಂದ್ರೆ ತುಂಬಾನೆ ಇಷ್ಟ ಆಗುತ್ತಾರೆ.
Duniya Vijay Daughter Monisha Vijay Kumar Vinay Rajkumar City Lights Kandamma Song Release

ದೊಡ್ಮನೆ ವಿನಯ್ ರಾಜ್‌ಕುಮಾರ್‌ ‘ಬಂಗಾರ’; ದುನಿಯಾ ವಿಜಯ್ ಹೀಗೆ ಹೇಳಿದ್ಯಾಕೆ?

ವಿನಯ್ ರಾಜ್‌ಕುಮಾರ್ ತುಂಬಾನೆ ಒಳ್ಳೆಯವರು ಅನ್ನೋದನ್ನ ಒತ್ತಿ ಹೇಳಿದ್ದಾರೆ. ಒಳ್ಳೆಯ ಮನಸ್ಸಿನ ವ್ಯಕ್ತಿ ಅಂತಲೂ ಹೇಳಿದ್ದಾರೆ. ಇವರಲ್ಲಿ ಸಾಕಷ್ಟು ವಿಷಯ ಇದೆ. ಅದನ್ನ ತೆಗೆದಷ್ಟು ಬರ್ತಾನೇ ಇರುತ್ತದೆ. ಈ ಸಿಟಿ ಲೈಟ್ಸ್ ಅಲ್ಲಿ ಆ ಪ್ರಯತ್ನ ಆಗಿದೆ ಅಂತ ಹೇಳಬಹುದು.

ವಿನಯ್ ನಿಜಕ್ಕೂ ಬಂಗಾರ

ವಿನಯ್ ರಾಜ್‌ಕುಮಾರ್ ತುಂಬಾನೆ ಒಳ್ಳೆಯವರಾಗಿದ್ದಾರೆ. ಅವರ ಸಿನಿಮಾಗಳನ್ನ ನೋಡ್ತಾನೇ ಬಂದಿದ್ದೇನೆ. ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಲೇ ಇದ್ದಾರೆ.

ಈ ಸಿಟಿ ಲೈಟ್ಸ್ ಅಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಹೇಳೋದನ್ನ ಆ ಕೂಡಲೇ ಕೊಡುವಷ್ಟು ಸಾಮರ್ಥ್ಯ ಇದೆ ಅಂತಲೂ ದುನಿಯಾ ವಿಜಯ್ ಹೇಳಿದ್ದಾರೆ ಅಂತಲೇ ಹೇಳಬಹುದು.

Duniya Vijay Daughter Monisha Vijay Kumar Vinay Rajkumar City Lights Kandamma Song Release

ರಾಜ್‌ ಮೊಮ್ಮಗ ಬಂಗಾರ
ಮಗಳು ಮೋನಿಷಾ ಕಂದಮ್ಮ

ಈ ಸಿಟಿ ಲೈಟ್ಸ್ ಚಿತ್ರದಲ್ಲಿ ಕಂದಮ್ಮ ಕಂದಮ್ಮ ಅನ್ನುವ ಹಾಡಿದೆ. ಈ ಹಾಡನ್ನ ಚಿತ್ರದ ನಾಯಕಿ ಮಗಳು ಮೋನಿಷಾಗಾಗಿಯೇ ಬರೆಸಿದ್ದಾರೆ. ತಮ್ಮ ಈ ಚಿಕ್ಕ ಮಗಳನ್ನ ಕಂದಮ್ಮ ಅಂತಲೂ ಕರೆಯುತ್ತಾರೆ.

ಸಿಟಿ ಲೈಟ್ಸ್ ಸಿನಿಮಾ

ಸಿಟಿ ಲೈಟ್ಸ್ ಚಿತ್ರದ ಬಹುತೇಕ ಕೆಲಸ ಕಂಪ್ಲೀಟ್ ಆಗಿದೆ. ಇದರ ಬೆನ್ನಲ್ಲಿಯೇ ಚಿತ್ರದ ಫಸ್ಟ್ ಸಾಂಗ್ ಈಗ ರಿಲೀಸ್ ಆಗಿದೆ. ಕಂದಮ್ಮ ಅನ್ನುವ ಈ ಹಾಡಿನಲ್ಲಿ ವಿನಯ್ ರಾಜ್‌ಕುಮಾರ್ ಮತ್ತು ಮೋನಿಷಾ ವಿಜಯ್‌ಕುಮಾರ್ ಕೆಮೆಸ್ಟ್ರಿ ಚೆನ್ನಾಗಿ ವರ್ಕ್ ಆಗಿದೆ.

Duniya Vijay Daughter Monisha Vijay Kumar Vinay Rajkumar City Lights Kandamma Song Release

ಮೋನಿಷಾ ಹೇಳೋದೇನು

ಕಂದಮ್ಮ ಅನ್ನು ಈ ಹಾಡಿನಲ್ಲಿ ಮೋನಿಷಾ ವಿಜಯ್ ಕುಮಾರ್ ತುಂಬಾನೆ ಚೆನ್ನಾಗಿಯೇ ಎಕ್ಸಪ್ರೆಷನ್ ಕೊಟ್ಟಿದ್ದಾರೆ. ಪ್ರೀತಿ ತುಂಬಿದ ಕಣ್ಣಿನಿಂದ ನೋಡುವ ಅದೆಷ್ಟೋ ದೃಶ್ಯಗಳು ಇಷ್ಟ ಆಗುತ್ತವೆ. ವಿನಯ್ ರಾಜಕುಮಾರ್ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಹಾಗಾಗಿಯೇ ಈ ಗೀತೆ ಎಲ್ಲರ ಗಮನ ಸೆಳೆಯುತ್ತದೆ.

ಮೋನಿಷಾ ಹೇಳೋದೇನು

ಮೋನಿಷಾ ವಿಜಯ್ ಕುಮಾರ್ ಈ ಹಾಡನ್ನ ತುಂಬಾನೆ ಮೆಚ್ಚಿಕೊಂಡಿದ್ದಾರೆ. ಮೋನಿಷಾ ಅವರಿಗೆ ಇದು ಫೇವರಿಟ್ ಹಾಡು ಕೂಡ ಆಗಿದೆ.

ಇಂತಹ ಒಳ್ಳೆಯ ಹಾಡು ಕೊಟ್ಟಿರೋ ಸಂಗೀತ ನಿರ್ದೇಶಕ ಚರಣ್ ರಾಜ್ ಅವರಿಗೆ ಮೋನಿಷಾ ವಿಜಯ್ ಕುಮಾರ್ ಥ್ಯಾಂಕ್ಸ್ ಕೂಡ ಹೇಳಿದ್ದಾರೆ. ಇನ್ನುಳಿದಂತೆ ಸಿಟಿ ಲೈಟ್ಸ್ ಚಿತ್ರದ ಈ ಹಾಡು ಎಲ್ಲರಿಗೂ ಇಷ್ಟ ಆಗುವ ರೀತಿನೇ ಇದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed