Last Updated:
ದುಲೀಪ್ ಟ್ರೋಫಿ ಫೈನಲ್ಗೆ ಮುಂಚಿತವಾಗಿ ಟೀಮ್ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರು ದಕ್ಷಿಣ ವಲಯ ತಂಡವನ್ನು ಸೇರಿಕೊಂಡಿದ್ದಾರೆ. ಸೆಪ್ಟೆಂಬರ್ 6 ರಿಂದ ಪೂರ್ವ ವಲಯ ಮತ್ತು ದಕ್ಷಿಣ ವಲಯ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ದುಲೀಪ್ ಟ್ರೋಫಿ (Duleep Trophy) 2026ರ ಫೈನಲ್ಗೆ ಮುನ್ನ ದಕ್ಷಿಣ ವಲಯ (South Zone) ತಂಡಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಶ್ರೀಲಂಕಾ (Sri Lanka) ವಿರುದ್ಧದ ಟೆಸ್ಟ್ (Test) ಸರಣಿ ಮುಗಿಸಿ ಹಿಂತಿರುಗಿದ ಟೀಮ್ ಇಂಡಿಯಾ(Team India)ದ ಇಬ್ಬರು ಸ್ಟಾರ್ ಆಟಗಾರರು ದಕ್ಷಿಣ ವಲಯ ತಂಡವನ್ನು ಸೇರಿಕೊಂಡಿದ್ದಾರೆ. ಇದರಿಂದ ತಂಡದ ಬೌಲಿಂಗ್ (Bowling) ಮತ್ತು ಬ್ಯಾಟಿಂಗ್ (Batting) ಎರಡೂ ಬಲಗೊಂಡಿವೆ. ಚೆನ್ನೈ(Chennai)ನಲ್ಲಿ ಸೆಪ್ಟೆಂಬರ್ 6 ರಿಂದ ಪೂರ್ವ ವಲಯ (Eastern Zone) ಮತ್ತು ದಕ್ಷಿಣ ವಲಯ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.














