Last Updated:
ಭಾರತದ ಯುವ ಸೆನ್ಷೇಷನ್ ಆಗಿರುವ ವೈಭವ್ ಸೂರ್ಯವಂಶಿ ಪೂರ್ವವಲಯದ ಉಪನಾಯಕನಾಗಿದ್ದು, ದುಲೀಪ್ ಟ್ರೋಫಿ ಫೈನಲ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಪ್ರಶಸ್ತಿ ನಿರ್ಧರಿಸುವ ಪಂದ್ಯವು ಭಾನುವಾರ ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗುತ್ತದೆ.
ಸೆಪ್ಟೆಂಬರ್ 6 ರ ಬೆಳಿಗ್ಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಪ್ರತಿಷ್ಠಿತ ದುಲೀಪ್ ಟ್ರೋಫಿ (Duleep Trophy) ಫೈನಲ್ ಪಂದ್ಯ ನಡೆಯಲಿದೆ. ಪೂರ್ವವಲಯ ಹಾಗೂ ದಕ್ಷಿಣ ವಲಯಗಳ ನಡುವೆ ಈ ಬಿಗ್ ಫೈಟ್ ನಡೆಯಲಿದೆ. ದಕ್ಷಿಣ ವಲಯವನ್ನ ತಿಲಕ್ ವರ್ಮಾ (Tilak Varma) ಮುನ್ನಡೆಸಿದರೆ, ಇಶಾನ್ ಕಿಶನ್(Ishan Kishan) ಉತ್ತರ ವಲಯದ ನಾಯಕರಾಗಿದ್ದಾರೆ. ಭಾರತದ ಯುವ ಸೆನ್ಷೇಷನ್ ಆಗಿರುವ ವೈಭವ್ ಸೂರ್ಯವಂಶಿ ಪೂರ್ವವಲಯದ ಉಪನಾಯಕನಾಗಿದ್ದು, ದುಲೀಪ್ ಟ್ರೋಫಿ ಫೈನಲ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಪ್ರಶಸ್ತಿ ನಿರ್ಧರಿಸುವ ಪಂದ್ಯವು ಭಾನುವಾರ ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗುತ್ತದೆ. ಸೆಮಿಫೈನಲ್ ಪಂದ್ಯದಲ್ಲಿ ಪೂರ್ವವಲಯದ ಬ್ಯಾಟಿಂಗ್ ಮುನ್ನಡೆಸಿದ್ದ ವೈಭವ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.














